ಗೋಲ್ಡ್ ಕಪ್ ಫುಟ್ಬಾಲ್:ಮಿಡ್ ಸಿಟಿ ಸುಂಟಿಕೊಪ್ಪ, ವಾಲ್ಪರೆ ಎಫ್.ಸಿ‌.ತಮಿಳುನಾಡು, ಎನ್‌.ವೈ.ಸಿ ಕೊಡಗರಹಳ್ಳಿ , ಎಫ್.ಸಿ‌.ಬೆಟ್ಟಗೇರಿ ಸೆಮಿಫೈನಲ್ ಗೆ ಲಗ್ಗೆ:

May 23, 2025 - 19:50
 0  90
ಗೋಲ್ಡ್ ಕಪ್ ಫುಟ್ಬಾಲ್:ಮಿಡ್ ಸಿಟಿ ಸುಂಟಿಕೊಪ್ಪ, ವಾಲ್ಪರೆ ಎಫ್.ಸಿ‌.ತಮಿಳುನಾಡು, ಎನ್‌.ವೈ.ಸಿ ಕೊಡಗರಹಳ್ಳಿ , ಎಫ್.ಸಿ‌.ಬೆಟ್ಟಗೇರಿ ಸೆಮಿಫೈನಲ್ ಗೆ ಲಗ್ಗೆ:

ಸುಂಟಿಕೊಪ್ಪ: ಇಲ್ಲಿನ ಜಿಎಂ.ಪಿ ಶಾಲಾ ಮೈದಾನದಲ್ಲಿ ಬ್ಲೂ ಬಾಯ್ಸ್ ಯುವಕ ಸಂಘದ ವತಿಯಿಂದ ನಡೆಯುತ್ತಿರುವ 26 ನೇ ವರ್ಷದ ಡಿ. ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಟೂರ್ನಿಯ ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಿಡ್ ಸಿಟಿ ಸುಂಟಿಕೊಪ್ಪ, ವಾಲ್ಪರೆ ಎಫ್.ಸಿ‌.ತಮಿಳುನಾಡು, ಎನ್‌.ವೈ.ಸಿ ಕೊಡಗರಹಳ್ಳಿ , ಬೆಟ್ಟಗೇರಿ ಎಫ್.ಸಿ‌.ಬೆಟ್ಟಗೇರಿ ತಂಡಗಳು ಜಯಗಳಿಸಿ ಸೆಮಿ ಫೈನಲ್ ಹಂತಕ್ಕೆ ಪ್ರವೇಶಿಸಿದೆ.

  ಮೊದಲ ಪಂದ್ಯವು ಮಿಡ್ ಸಿಟಿ ಸುಂಟಿಕೊಪ್ಪ ಮತ್ತು ಟ್ರೆಡಿಶಿನಲ್ ಟೂರಿಸಂ ಎಫ್.ಸಿ ತಂಡಗಳ ನಡುವೆ ನಡೆಯುತು‌‌.ಮಿಡ್ ಸಿಟಿ ತಂಡದಲ್ಲಿ ರಾಷ್ಟಮಟ್ಟದ ಅನುಭವಿ ಯುವ ಆಟಗಾರರನ್ನು ಹೊಂದಿದ್ದು, ಹೊಂದಾಣಿಕೆಯ ಆಟಕ್ಕೆ ಒತ್ತು ನೀಡಿ ತಿರುಚ್ಚಿತಂಡವನ್ನು ತನ್ನ ಆಕರ್ಷಕ ಆಟದ ಮೂಲಕ ಕಟ್ಟಿಹಾಕಿ ಚೆಂಡನ್ನು ತನ್ನ ಹತೋಟಿಯಲ್ಲಿಟ್ಟುಕೊಂಡಿತು‌.ಪಂದ್ಯದ ಮೊದಲಾರ್ಧದ 4ನೇ ನಿಮಿಷದಲ್ಲಿ ಮಿಡ್ ಸಿಟಿ ತಂಡದ ಮುನ್ನಡೆ ಆಟಗಾರ ಪಾಂಡ್ಯನ್ ಅವರು ಮೊದಲ ಗೋಲನ್ನು ಹೊಡೆಯುವುದರ ಮೂಲಕ ತಂಡಕ್ಕೆ ಮುನ್ನಡೆಯನ್ನು ತಂದುಕೊಟ್ಟರು.ಶಿಸ್ತುಬದ್ಧ ತಂಡವಾಗಿ ಪ್ರದರ್ಶನ ನೀಡಿದ ತಿರುಚ್ಚಿ ತಂಡ ಆಕ್ರಮಣಕಾರಿ ಆಟದ ಮೂಲಕ ಸುಂಟಿಕೊಪ್ಪ ತಂಡದ ಆಟಗಾರರನ್ನು ವಂಚಿಸಿ ಗೋಲುಪಟ್ಟಿಗೆ ಹೊಡೆಯಲು ವಿಫಲ ಯತ್ನದ ನಡುವೆ ತಿರುಚ್ಚಿ ತಂಡದ ಕಿರಣ್ ಅವರು ಆಕರ್ಷಕ ಗೋಲು ಹೊಡೆದು ಮೊದಲಾರ್ಧದಲ್ಲಿ 1-1 ಸಮಬಲ ಹೋರಾಟ ನೀಡಿದವು.

ದ್ವಿತೀಯಾರ್ಧದಲ್ಲಿ ಮಿಡ್ ಸಿಟಿ ಸಂಪೂರ್ಣವಾಗಿ ಚೆಂಡಿನಲ್ಲಿ ಹತೋಟಿ ಸಾಧಿಸಿತು‌‌. ಉತ್ತಮ ಪಾಸ್ ಗಳ ಮೂಲಕ ಕ್ರೀಡಾಭಿಮಾನಿಗಳಿಗೆ ಮನರಂಜನೆ ನೀಡಿದ ಮಿಡ್ ಸಿಟಿ ತಂಡದ ಆಟಗಾರರು ಪಂದ್ಯದ 5 ನೇ ನಿಮಿಷದಲ್ಲಿ ಶಬೀರ್ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು. ಈ ಮದ್ಯೆ ಸುಂಟಿಕೊಪ್ಪ ತಂಡದ ಗೋಲುಕೀಪರ್ ತಪ್ಪು ಎಸಗಿದರೆಂದು ತಿರುಚ್ಚಿ ತಂಡದವರು ತೀರ್ಪುಗಾರರೊಂದಿಗೆ ವಾಗ್ವಾದಕ್ಕೆ ಇಳಿದರು‌.ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯಿತು.ಸಂಘಟಕರ ಮದ್ಯಸ್ಥಿಕೆಯಿಂದ ಸಮಸ್ಯೆ ತಿಳಿಯಾಗಿ ಪಂದ್ಯ ಪ್ರಾರಂವಾಗಿ 16 ನೇ ನಿಮಿಷದಲ್ಲಿ ದಿವಾಕರ್, 18 ನಿಮಿಷದಲ್ಲಿ ಶಭೀರ್ ಗೋಲು ಹೊಡೆದು ತಂಡಕ್ಕೆ ಅಡಿಪಾಯ ಹಾಕಿಕೊಟ್ಟರು. ಸುಂಟಿಕೊಪ್ಪ ತಂಡದ ಉತ್ತಮ ಪಾಸ್ ಗೆ ತಿರುಚ್ಚಿ ತಂಡ ತಲ್ಲಣಗೊಂಡಿತು.ಕೊನೆಯ ಕ್ಷಣದಲ್ಲಿ ಸುಂಟಿಕೊಪ್ಪ ತಂಡದ ವಿಜು ಅವರು ಗೋಲು ಹೊಡೆಯುವ ಮೂಲಕ 5-1 ಗೋಲುಗಳಿಂದ ಜಯದ ನಗೆ ಬೀರಿ ಮಿಡ್ ಸಿಟಿ ಸುಂಟಿಕೊಪ್ಪ ತಂಡ ಸೆಮಿ ಫೈನಲ್ ಗೆ ಪ್ರವೇಶಿಸಿತು‌‌.

ಎರಡನೇ ಕ್ವಾರ್ಟರ್ ಫೈನಲ್ ಪಂದ್ಯವು ನೇತಾಜಿ ಯುವಕ ಸಂಘ ಕೊಡಗರಹಳ್ಳಿ ಮತ್ತು ಟಿಬೆಟಿಯನ್ ಬೈಲುಕೊಪ್ಪ ತಂಡಗಳ ನಡುವೆ ನಡೆಯಿತು‌.ಕೊಡಗರಹಳ್ಳಿ ತಂಡದಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಆಟಗಾರರನ್ನು ಹೊಂದಿದ್ದು ಉತ್ತಮ ಆಟದ ಪ್ರದರ್ಶನಗಳ ಮೂಲಕ ಜನರ ಚಪ್ಪಾಳೆ ಗಿಟ್ಟಿಸಿತು‌‌.ಎರಡು ತಂಡದ ಆಟಗಾರರು ಗೋಲುಪಟ್ಟಿಗೆ ಚೆಂಡನ್ನು ಹೊಡೆಯುವುದರ ಮೂಲಕ ಎಲ್ಲರನ್ನು ತುದಿಗಾಲಿನಲ್ಲಿ ನಿಲ್ಲಿಸಿತು.ಕ್ಷಣಕ್ಷಣಕ್ಕೂ ರೋಚಕತೆಯಿಂದ ಕೂಡಿತ್ತು. ಸಮಬಲದ ಪ್ರದರ್ಶನದಿಂದ ಮೊದಲಾರ್ಧದ 10 ನಿಮಿಷದಲ್ಲಿ ಟಿಬೆಟಿಯನ್ ತಂಡದ ಮಿಂವಿನ ಆಟಗಾರ ಜಿಗ್ಮೆ ಅವರು ಆಕರ್ಷಕ ಗೋಲು ಹೊಡೆಯುವ ಮೂಲಕ ಪಂದ್ಯಸ ಮೊದಲಾರ್ಧದಲ್ಲಿ 1-0 ಗೋಲುಗಳಿಂದ ಟಿಬೆಟಿಯನ್ ಬೈಲುಕೊಪ್ಪ ಮುನ್ನಡೆ ಪಡೆದುಕೊಂಡಿತು.

 ದ್ವಿತೀಯಾರ್ಧದಲ್ಲಿ ಎರಡು ತಂಡದ ಆಕರ್ಷಕ ಹೊಂದಾಣಿಕೆಯ ಆಟದ ನಡುವೆ ಟಿಬೆಟಿಯನ್ ತಂಡಕ್ಕೆ ಆಘಾತ ಎದುರಾಯಿತು. ಟಿಬೆಟಿಯನ್ ಗೋಲುಕೀಪರ್ ತಡೆದು ಬಿಟ್ಟ ಚೆಂಡನ್ನು ಕೊಡಗರಹಳ್ಳಿ ತಂಡದ ನಾಗೇಶ್ ಅವರು ಸುಲಭ ಗೋಲನ್ನು ಹೊಡೆಯುವ ಮೂಲಕ ತಂಡಕ್ಕೆ ನಿಟ್ಟುಸಿರುಬಿಡುವಂತೆ ಮಾಡಿದರು.ಈ ಗೋಲಿನಿಂದ ಎದೆಗುಂದದ ಟಿಬೆಟಿಯನ್ ತಂಡ ತನ್ನದೇ ಚಾಕಚಕ್ಯತೆಯ ಮೂಲಕ ಹಂತ ಹಂತವಾಗಿ ಕೊಡಗರಹಳ್ಳಿ ತಂಡದ ಗೋಲು ಪಟ್ಟಿಯೊಳಗೆ ಚೆಂಡು ಹೊಡೆಯುವ ಮೂಲಕ ಮನರಂಜನೆ ನೀಡಿದರು.ಕೊನೆಯಲ್ಲಿ ಯಾವುದೇ ಗೋಲು ಬಾರದ ಹಿನ್ನಲೆಯಲ್ಲಿ ಟ್ರೈ ಬ್ರೆಕರ್ ಅಳವಡಿಸಲಾಯುತು‌‌.ಈ ಟ್ರೈ ಬ್ರೇಕರ್ ನಲ್ಲಿ ಎನ್.ವೈ.ಸಿ ಕೊಡಗರಹಳ್ಳಿ ತಂಡವು 4-2 ಗೋಲುಗಳಿಂದ ಟಿಬೆಟಿಯನ್ ತಂಡವನ್ನು ಸೋಲಿಸಿ ಸೆಮಿ ಫೈನಲ್ ಹಂತಕ್ಕೆ ಪ್ರವೇಶ ಪಡೆಯಿತು‌‌.

ಮೂರನೇ ಪಂದ್ಯವು ಬೆಟ್ಟಗೇರಿ ಎಫ್.ಸಿ‌.ಬೆಟ್ಟಗೇರಿ ಹಾಗೂ ಕ್ಯಾಲಿಕಟ್ ಎಫ್.ಸಿ.ಕ್ಯಾಲಿಕಟ್ ತಂಡಗಳ ನಡುವೆ ನಡೆಯಿತು.ಪಂದ್ಯದ ಪ್ರಾರಂಭದಿಂದಲೂ ಶಿಸ್ತುಬದ್ಧವಾಗಿ ಆಟವಾಡಿದ ಎರಡು ತಂಡಗಳು ಆಗಾಗ್ಗೆ ಗೋಲುಪಟ್ಟಿಗೆ ಹೊಡೆಯಲು ಪ್ರಯತ್ನಿಸಿದರೂ ಚೆಂಡು ಹೊರ ಹೋಗುವುದರ ಮೂಲಕ ಪ್ರೇಕ್ಷಕರಿಗೆ ನಿರಾಸೆ ಉಂಟುಮಾಡಿದರು.ಕ್ಷಣಕ್ಷಣಕ್ಕೂ ರೋಮಾಂಚನಕಾರಿ ಆಟದ ರಸದೌತಣ ನೀಡಿದ ಎರಡು ತಂಡಗಳು ಯಾವುದೇ ಗೋಲುಗಳಿಲ್ಲದೇ ಸಮಬಲ ಕಾಯ್ದುಕೊಂಡರು.

ದ್ವಿತೀಯಾರ್ಧದಲ್ಲಿ ಚುರುಕುತನದ ಆಟ ಪ್ರದರ್ಶಿಸಿದ ಕ್ಯಾಲಿಕಟ್ ತಂಡ ಕ್ರೀಡಾಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತು.ಈ ನಡುವೆ ಕ್ಯಾಲಿಕಟ್ ಮಾಡಿದ ಸಣ್ಣ ತಪ್ಪಿನಿಂದ ಬೆಟ್ಟಗೇರಿ ತಂಡಕ್ಕೆ ಟ್ರೈ ಬ್ರೇಕರ್ ಅವಕಾಶ ಲಭಿಸಿತು‌.ಅವಕಾಶವನ್ನು ಸದುಪಯೋಗಪಡಿಸಿಕೊಂಡ ಬೆಟ್ಟಗೇರಿ ತಂಡದ ಮನೋಜ್ ಅವರು ಗೋಲು ಹೊಡೆಯುವ ಮೂಲಕ 1-0 ಗೋಲುಗಳ ಮುನ್ನಡೆ ತಂದುಕೊಟ್ಟರು.ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರೂ ಬೆಟ್ಟಗೇರಿ ತಂಡದ ರಕ್ಷಣಾತ್ಮಕ ಆಟದ ಮುಂದೆ ಮಂಕಾದರು.ಈ ನಡುವೆ ಕೊನೆಯ ಕ್ಷಣದಲ್ಲಿ ಬೆಟ್ಟಗೇರಿ ತಂಡದ ಮಂಜು ಗೋಲು ಹೊಡೆಯುವ ಮೂಲಕ ತಂಡಕ್ಕೆ 2-0 ಗೋಲುಗಳ ಜಯದೊಂದಿಗೆ ಸೆಮಿಫೈನಲ್ಸ್ ಹಂತಕ್ಕೆ ಪ್ರವೇಶ ಪಡೆಯಿತು.

ಫ್ರೀ ಕ್ವಾರ್ಟರ್ ನಲ್ಲಿ ಜಯಗಳಿಸಿದ್ದ ಇಕೆಎನ್ ಕೊಯಿಕಡವ್ ಎಫ್.ಸಿ.ಈರಿಟಿ ಕಣ್ಣೂರು ತಂಡವು ಮೈದಾನಕ್ಕೆ ಆಗಮಿಸದ ಹಿನ್ನಲೆಯಲ್ಲಿ ವಲ್ಪರೆ ಎಫ್.ಸಿ.ತಮಿಳುನಾಡು ತಂಡ ಜಯಗಳಿಸಿ ಸೆಮಿಫೈನಲ್ ಗೆ ಪ್ರವೇಶಿಸಿತು.ಫುಟ್ ಬಾಲ್ ಪಂದ್ಯವನ್ನು ಹಿರಿಯ ಆಟಗಾರ ವಹೀದ್ ಜಾನ್ , ರಾಜ್ಯ ಸರ್ಕಾರಿ ನೌಕರರ ಫುಟ್ ಬಾಲ್ ತಂಡದ ನಾಯಕ ವೇಣುಗೋಪಾಲ್ ಚಾಲನೆ ನೀಡಿದರು‌‌.ಬೆಟ್ಟಗೇರಿ ತೋಟದ ಮಾಲೀಕ, ದಿ.ಡಿ.ಶಿವಪ್ಪ ಅವರ ಮೊಮ್ಮಗ ವಿಶಾಲ್ ಶಿವಪ್ಪ, ಬಿಬಿವೈಸಿ ಸ್ಥಾಪಕಾಧ್ಯಕ್ಷ ಜೆರ್ಮಿ ಡಿಸೋಜ, ಅಧ್ಯಕ್ಷ ಆಲಿಕುಟ್ಟಿ, ಗೌರವಾಧ್ಯಕ್ಷ ಟಿ.ವಿ.ಪ್ರಸನ್ನ, ಪದಾಧಿಕಾರಿಗಳಾದ ಬಿ.ಕೆ.ಪ್ರಶಾಂತ್, ಅನಿಲ್ ಕುಮಾರ್,ವಾಸುದೇವ,ಪವಿ ಇತರರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0