ಪತ್ರಕರ್ತರ ಫುಟ್ಬಾಲ್ ಕಲರವ: ಕೂರ್ಗ್ ನ್ಯೂ ಡ್ರಾಪ್ಸ್ ಚಾಂಪಿಯನ್ ಕೂರ್ಗ್ ಮೌಂಟನ್ ರನ್ನರ್ಸ್

ಪತ್ರಕರ್ತರ ಫುಟ್ಬಾಲ್ ಕಲರವ: ಕೂರ್ಗ್ ನ್ಯೂ ಡ್ರಾಪ್ಸ್ ಚಾಂಪಿಯನ್  ಕೂರ್ಗ್ ಮೌಂಟನ್ ರನ್ನರ್ಸ್
ಪತ್ರಕರ್ತರ ಫುಟ್ಬಾಲ್ ಕಲರವ: ಕೂರ್ಗ್ ನ್ಯೂ ಡ್ರಾಪ್ಸ್ ಚಾಂಪಿಯನ್  ಕೂರ್ಗ್ ಮೌಂಟನ್ ರನ್ನರ್ಸ್

ಸಿದ್ದಾಪುರ: ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಸಿದ್ದಾಪುರದ ಸ್ಟ್ರೈಕರ್ಸ್ ಎಡ್ಜ್ ಟರ್ಫ್ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಪತ್ರಕರ್ತರ ಫುಟ್ಬಾಲ್ ಪಂದ್ಯಾವಳಿಯಲ್ಲಿ ಶಿವರಾಜ್, ಜಯಪ್ರಕಾಶ್ ಮಾಲೀಕತ್ವದ ವಿಜಯ್ ನಾಯಕತ್ವದ ಕೂರ್ಗ್ ನ್ಯೂ ಡ್ರಾಪ್ಸ್ ತಂಡವು ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.ತೇಜಸ್ ಪಾಪಯ್ಯ ಮಾಲೀಕತ್ವದ, ಎ.ಎಸ್ ಮುಸ್ತಫಾ ನಾಯಕತ್ವದ ಕೂರ್ಗ್ ಮೌಂಟನ್ ತಂಡವು ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ಎರಡು ತಂಡಗಳ ಮೊದಲಾರ್ಧದಲ್ಲಿ ಸಮಬಲ ಹೋರಾಟ ನಡೆಸಿದರು ಕೂಡ ಯಾವುದೇ ಗೋಲುಬಾರಿಸಲು ಸಾಧ್ಯವಾಗಲಿಲ್ಲ. ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದ ಕೂರ್ಗ್ ನ್ಯೂ ಡ್ರಾಪ್ಸ್ ತಂಡವು,ವಿನೋದ್ ಅವರ ಆಕರ್ಷಕ ಗೋಲಿನ ಮೂಲಕ ಮುನ್ನಡೆ ಸಾಧಿಸಿತು.

ದ್ವಿತೀಯಾರ್ಧದ ಕೊನೆಯ ಕ್ಷಣದಲ್ಲಿ ಕೂರ್ಗ್ ನ್ಯೂ ಡ್ರಾಪ್ಸ್ ತಂಡದ ಶಿವರಾಜ್ ಗೋಲುಗಳಿಸುವುದರ ಮೂಲಕ 2-0 ಗೋಲುಗಳ ಅಂತರದಿಂದ ಫೈನಲ್ ಪಂದ್ಯದಲ್ಲ ಗೆಲುವು ಸಾಧಿಸಿತು.ಕೂರ್ಗ್ ಮೌಂಟನ್ ತಂಡವು ಗೋಲುಬಾರಿಸಲು ಆಕ್ರಮಣಕಾರಿ ಆಟಕ್ಕೆ ಮುಂದಾದರು ಕೂಡ ಗೋಲುಬಾರಿಸಲು ಸಾಧ್ಯವಾಗದೆ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಇದಕ್ಕೂ ಮೊದಲು ನಡೆದ ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕೂರ್ಗ್ ನ್ಯೂ ಡ್ರಾಪ್ಸ್ ತಂಡವು ಮೀಡಿಯಾ ಮಾಸ್ಟರ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು.ಮೊದಲನೇ ಎಲಿಮಿನೇಟರ್ ಪಂದ್ಯದಲ್ಲಿ ಕೂರ್ಗ್ ಮೌಂಟನ್ ತಂಡವು, ಮೀಡಿಯಾ ಪ್ಯಾಂಥರ್ಸ್ ತಂಡವನ್ನು ಮಣಿಸಿ ಎರಡನೇ ಕ್ವಾಲಿಫೈಯರ್ ಗೆ ಅರ್ಹತೆ ಪಡೆಯಿತು.ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕೂರ್ಗ್ ಮೌಂಟನ್ ತಂಡವು,ಮೀಡಿಯಾ ಮಾಸ್ಟರ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದರು.ತೃತೀಯ ಸ್ಥಾನವನ್ನು ಮೀಡಿಯಾ ಮಾಸ್ಟರ್ಸ್ ಹಾಗೂ ನಾಲ್ಕನೇ ಸ್ಥಾನವನ್ನು ಮೀಡಿಯಾ ಪ್ಯಾಂಥರ್ಸ್ ಪಡೆದುಕೊಂಡಿತು.ಜಿಲ್ಲಾ ಮಟ್ಟದ ಪತ್ರಕರ್ತರ ಫುಟ್ಬಾಲ್ ಪಂದ್ಯಾವಳಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಿದ್ದರು.ತಲಾ ಎರಡು ಗುಂಪುಗಳಾಗಿ ವಿಂಗಡಿಸಿ ಲೀಗ್ ಮಾದರಿಯ ಪಂದ್ಯಗಳನ್ನು ನಡೆಸಲಾಯಿತು.ಜಿಲ್ಲೆಯ ವಿವಿಧ ಭಾಗದ 65 ಕ್ಕೂ ಹೆಚ್ಚು ಪತ್ರಕರ್ತರು ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ವೈಯಕ್ತಿಕ ಬಹುಮಾನಗಳ ವಿವರ:

ಪತ್ರಕರ್ತರ ಫುಟ್ಬಾಲ್ ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಕೂರ್ಗ್ ಮೌಂಟನ್ ತಂಡದ ನಾಯಕ ಎ.ಎಸ್ ಮುಸ್ತಫಾ,ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಕೂರ್ಗ್ ನ್ಯೂ ಡ್ರಾಪ್ಸ್ ತಂಡದ ಶಿವರಾಜ್,ಅತ್ಯುತ್ತಮ ಡಿಫೆಂಡರ್ ಕೂರ್ಗ್ ನ್ಯೂ ಡ್ರಾಪ್ಸ್ ತಂಡದ ವಿಜಯ್,ಟಾಪ್ ಸ್ಕೋರರ್ ಪ್ರಶಸ್ತಿಯನ್ನು ಟರ್ಫ್ ವಾರಿಯರ್ಸ್‌ ತಂಡದ ಇಸ್ಮಾಯಿಲ್ ಕಂಡಕರೆ, ಅತ್ಯುತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನು ಎಸ್.ಕೆ ಟೈಗರ್ಸ್ ತಂಡದ ಜಯಂತಿ,ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಮೀಡಿಯಾ ಪ್ಯಾಂಥರ್ಸ್ ತಂಡದ ಚಂದನ್ ನಂದರಬೆಟ್ಟು ಪಡೆದುಕೊಂಡರು.ಪಂದ್ಯಾವಳಿಯ ತೀರ್ಪುಗಾರರಾಗಿ ಅಮ್ಮತ್ತಿಯ ಶೇಷಪ್ಪ ಕಾರ್ಯನಿರ್ವಹಿಸಿದರು.

ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ:

ಪತ್ರಕರ್ತರ ಫುಟ್ಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿರಾಜಪೇಟೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ‌ಆರ್ ಸವಿತಾ ರೈ,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ,ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಸಿ ಮುರಳಿ,ಗುಹ್ಯ ಅಗಸ್ತ್ಯೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್ ವೆಂಕಟೇಶ್, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜೀರ ಬಿ ಅಯ್ಯಪ್ಪ, ನ್ಯೂ ಸಂಗೀತ ಕಮೋಡಿಟಿಸ್ ಮಾಲೀಕ ಹಸೈನರ್ ಹಾಜಿ, ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ ಬಷೀರ್ ಹಾಜಿ, ಕೊಫಿಯಾ ರೆಸ್ಟೋರೆಂಟ್ ಮಾಲೀಕ ಶಿಯಾಬ್ ಹಾಜರಿದ್ದರು.

ಕಾರ್ಯಕ್ರಮವನ್ನು ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಸ್ ಮುಸ್ತಫಾ ನಿರೂಪಿಸಿದರು.