ಪೊನ್ನಂಪೇಟೆ:ವಿವಿಧ ರಸ್ತೆ ಕಾಮಗಾರಿಗಳಿಗೆ ಎ.ಎಸ್ ಪೊನ್ನಣ್ಣ ಗುದ್ದಲಿ ಪೂಜೆ
ಪೊನ್ನಂಪೇಟೆ:ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ನವರು, ಶುಕ್ರವಾರ ತಮ್ಮ ಕ್ಷೇತ್ರದ ಪೊನ್ನಂಪೇಟೆ ತಾಲೂಕಿನ ಬಲ್ಯಮಂಡೂರು ಗ್ರಾಮಕ್ಕೆ ಭೇಟಿ ನೀಡಿದರು. ಮೊದಲಿಗೆ ಮಾನ್ಯ ಶಾಸಕರು ಸ್ಥಳೀಯ ಬಸವೇಶ್ವರ ದೇವಸ್ಥಾನದ ಬಳಿ, ಈ ಭಾಗದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದರು. ಶಾಸಕರು ಕಾರ್ಯಕರ್ತರಗಳ ಅಹವಾಲುಗಳನ್ನು ಸ್ವೀಕರಿಸಿ ಅವರ ಸಮಸ್ಯೆಗಳನ್ನು ಆಲಿಸಿದರು.
ಬಳಿಕ ಶಾಸಕರ ಅನುದಾನದಲ್ಲಿ ಮತ್ತು ಸರಕಾರದ ಹಲವು ಕಾರ್ಯಕ್ರಮಗಳ ಅಡಿಯಲ್ಲಿ, ಈ ಭಾಗದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ, ಅಂದಾಜು ಮೊತ್ತ ₹ 20 ಲಕ್ಷಗಳ ವಿವಿಧ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು. ಭೂಮಿ ಪೂಜೆ ಸಂದರ್ಭದಲ್ಲಿ ಸ್ಥಳೀಯ ಗ್ರಾಮಸ್ಥರು ಹಾಗು ಪ್ರಮುಖರು ಉಪಸ್ಥಿತರಿದ್ದು, ಅವರುಗಳ ಕೋರಿಕೆಯಂತೆ, ಈ ಭಾಗದ ಇತರ ಕೆಲವು ರಸ್ತೆಗಳ ವಸ್ತು ಸ್ಥಿತಿಯನ್ನು ಅರಿಯಲು, ವೀಕ್ಷಣೆಯನ್ನು ಮಾನ್ಯ ಶಾಸಕರು ಮಾಡಿದರು. ಇದೇ ಸಂದರ್ಭದಲ್ಲಿ ಕೊಟ್ಟಂಗಡ ಐನ್ ಮನೆಯ ಅಭಿವೃದ್ಧಿಗೆ ತಮ್ಮ ಅನುದಾನದಲ್ಲಿ ನೀಡಿದ್ದ ₹ 3.5 ಲಕ್ಷದ ಕಾಮಗಾರಿಯನ್ನು ವೀಕ್ಷಿಸಲು ಐನ್ ಮನೆಯ ಪ್ರಮುಖರ ಇಚ್ಛೆಯಂತೆ ತೆರಳಿದರು. ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮೀದೇರಿರ ನವೀನ್, ಬಲ್ಯಮಂಡೂರು ವಲಯ ಅಧ್ಯಕ್ಷರಾದ ಕೊಟ್ಟಂಗಡ ರಾಜ ಕಾರ್ಯಪ್ಪ,ಕಾಂಗ್ರೆಸ್ ಹಿರಿಯ ಮುಖಂಡರಾದ ಪೊನ್ನಪ್ಪ, ಹಾಗೂ ಪಕ್ಷದ ಇತರ ಪ್ರಮುಖರು ಉಪಸಿತರಿದ್ದರು.