ಪೊರೆಯನ ಐನ್ ಮನೆಗೆ ತೆರಳುವ ಕಾಂಕ್ರೀಟ್ ರಸ್ತೆ ಉದ್ಘಾಟನೆ: ಶಾಸಕ ಡಾ ಮಂತರ್ ಗೌಡ ಅವರ 10 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ರಸ್ತೆ

ಪೊರೆಯನ ಐನ್ ಮನೆಗೆ ತೆರಳುವ ಕಾಂಕ್ರೀಟ್ ರಸ್ತೆ ಉದ್ಘಾಟನೆ:  ಶಾಸಕ ಡಾ ಮಂತರ್ ಗೌಡ ಅವರ 10 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ರಸ್ತೆ

ಮಡಿಕೇರಿ: ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಯ್ಯಗೇರಿ ಗ್ರಾಮದ ಪೊರೆಯನ ಐನ್ ಮನೆಗೆ ತೆರಳುವ ಗ್ರಾಮೀಣ ರಸ್ತೆ ಅಭಿವೃದ್ಧಿಗೆ 10 ಲಕ್ಷ ರೂ ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ ಹಂಸ ಕೊಟ್ಟಮುಡಿ ಅವರು,ಶಾಸಕರ ಶಿಫಾರಸು ಮೇರೆಗೆ ಉದ್ಘಾಟಿಸಿದರು.ಈ ಸಂದರ್ಭ ಮಾತನಾಡಿದ ಎಚ್.ಎ ಹಂಸ,ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ಅವರ ವಿಶೇಷ ಕಾಳಜಿಯಿಂದ ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕರ ಅನುದಾನ ಮೂಲಕ ಹಲವು ಕಾಮಗಾರಿ ನಡೆದಿದೆ ಎಂದರು.

ಈ ಸಂದರ್ಭ ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯೆ ಕಡ್ಲೇರ ಟೈನಿ,ಪಾರ್ವತಿ, ಪೊರೆಯನ ಪಟ್ಟೆದಾರ ಸುಬ್ಬಯ್ಯ, ರವಿ, ಚರಣ್,ಸತೀಶ್,ದಿನೇಶ,ಜಗದೀಶ್,ಮೋಹನ್ ಕುಮಾರ್, ಅಶೋಕ, ಲಕ್ಷಿತ್,ಭರತ್,ದೀಕ್ಷಿತಾ,ಮಮತಾ,ಪ್ರೇಮಾ,ಅನುರಾವತಿ, ರವೀಂದ್ರ, ರಾಣಿ ಇದ್ದರು.