ಮುದ್ದಂಡ ಹಾಕಿ ಫೆಸ್ಟಿವೆಲ್: ನೆಲ್ಲಮಕ್ಕಡ ತೃತೀಯ

ಮುದ್ದಂಡ ಹಾಕಿ ಫೆಸ್ಟಿವೆಲ್:  ನೆಲ್ಲಮಕ್ಕಡ ತೃತೀಯ

ಮಡಿಕೇರಿ : ಮುದ್ದಂಡ ಹಾಕಿ ಉತ್ಸವದಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನೆಲ್ಲಮಕ್ಕಡ ಹಾಗೂ ಕುಪ್ಪಂಡ (ಕೈಕೇರಿ) ತಂಡಗಳ ನಡುವೆ ನಡೆದ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ನೆಲ್ಲಮಕ್ಕಡ ತಂಡ ಜಯ ಸಾಧಿಸುವ ಮೂಲಕ ಮೂರನೇ ಸ್ಥಾನ ಪಡೆದುಕೊಂಡಿತು. ಕುಪ್ಪಂಡ ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.ನೆಲ್ಲಮಕ್ಕಡ ಪರ ಆಶಿಕ್ ಅಪ್ಪಣ್ಣ ಹಾಗೂ ಅಯ್ಯಪ್ಪ ತಲಾ 1 ಗೋಲು ದಾಖಲಿಸಿದರು. ಕುಪ್ಪಂಡ ಪರ ದ್ಯಾನ್ 1 ಗೋಲು ಬಾರಿಸಿದರು.