ಮೇ,13ರಿಂದ ತೆಕ್ಕ್ ಮೊಗದ ದೇವಿ ಭದ್ರಕಾಳಿ ಭೋಡ್ ನಮ್ಮೆ

ಮೇ,13ರಿಂದ ತೆಕ್ಕ್  ಮೊಗದ ದೇವಿ ಭದ್ರಕಾಳಿ ಭೋಡ್ ನಮ್ಮೆ

ವಿರಾಜಪೇಟೆ: ತೆಕ್ಕ್ ಮೊಗದ ಶ್ರೀ ಭದ್ರಕಾಳಿ ದೇವಿ ವಾರ್ಷಿಕ ಬೋಡ್ ನಮ್ಮೆ ಮತ್ತು ತೆರೆ ಮಹೋತ್ಸವ ಮೇ ತಿಂಗಳ 13 ರಿಂದ 17ರವರೆಗೆ ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿರಾಜಪೇಟೆ ತಾಲ್ಲೂಕಿನ ಬಿಳುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳುಗುಂದ,ಹೊಸಕೋಟೆ,ಮತ್ತು ನಲ್ವತೋಕ್ಲು ಗ್ರಾಮದ ಅಮ್ಮತ್ತಿ ನಾಡು ಬೋಂದಾ ಮುನ್ನೂರು ಒಕ್ಕಡ ದೇವಿಯಾಗಿರುವ ಶ್ರೀ ಭದ್ರಕಾಳಿ ದೇಗುಲದ ವಾರ್ಷಿಕ ತೆರೆ ಮತ್ತು ಬೋಡ್ ನಮ್ಮೆ ತಾ 13 ರಿಂದ ಆರಂಭವಾಗಿ _ 17 ರಂದು ಕೊನೆಯಾಗಲಿದೆ. ತಾ. 13 ರಂದು ಪಟ್ಟಣಿ. ತಾ 14 ರಂದು ಕಳಿ ಹಾಕಿ ( ವೇಷಭೂಷಣ ಧರಿಸುವುದು) ಮನೆ,ಮನೆಗೆ ತೆರಳುವುದು ಮತ್ತು ಎರಡು ತೆರೆಗಳು ನಡೆಯಲಿದೆ. ತಾ 15 ರಂದು ಕುದುರೆ ಮತ್ತು ಚೂಳೆ ಕಳಿ ತಾ:16 ರಂದು ನಾಲ್ಕು ವಿವಿಧ ತೆರೆಗಳು ನಡೆಯಲಿದೆ. ತಾ: 17 ರಂದು ಭಂಡಾರ ನೋಡುವುದು ಲೆಕ್ಕಾಚಾರ ,ದೇಗುಲದಲ್ಲಿ ನಡೆಯುವ ವಾರ್ಷಿಕ ಉತ್ಸಾವಾದಿ ಕಾರ್ಯಕ್ರಮಗಳಲ್ಲಿ ಸಮಸ್ತ ಜನತೆಯು ಭಾಗವಹಿಸಿ ಶ್ರೀ ದೇವಿ ಕೃಪೆಗೆ ಪಾತ್ರರಾಗುವಂತೆ ದೇಗುಲ ಸಮಿತಿಯು ಮನವಿ ಮಾಡಿದ್ದಾರೆ.

ವರದಿ: ಕಿಶೋರ್ ಕುಮಾರ್ ಶೆಟ್ಟಿ