ಶ್ರೀಮಂಗಲ:15 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಶ್ರೀ ಕೃಷ್ಣ ದೇವಸ್ಥಾನ ಉದ್ಘಾಟನೆ:

ಪೊನ್ನಂಪೇಟೆ: ತಾಲೂಕಿನ ಶ್ರೀಮಂಗಲ ಗ್ರಾಮದಲ್ಲಿನ, ಶ್ರೀ ಕೃಷ್ಣ ದೇವಸ್ಥಾನ ಹೋಗುವ ರಸ್ತೆ ಅಭಿವೃದ್ಧಿಗೆ ₹ 15 ಲಕ್ಷಗಳನ್ನು ಮಾನ್ಯ ಶಾಸಕರ ಅನುದಾನದಲ್ಲಿ ಈ ಹಿಂದೆ ಒದಗಿಸಿದ್ದು, ಅಭಿವೃದ್ಧಿಗೊಂಡ ರಸ್ತೆಯ ಉದ್ಘಾಟನೆ ಕಾರ್ಯಕ್ರಮವನ್ನು, ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ನವರು ನೆರವೇರಿಸಿದರು.
ಬಳಿಕ ಮಾತನಾಡಿದ ಮಾನ್ಯ ಶಾಸಕರು, ಹಲವು ವರ್ಷಗಳಿಂದ ಈ ರಸ್ತೆಯು, ಅಭಿವೃದ್ಧಿ ಕಾಣದೆ ಇರುವುದನ್ನು ತಾನು ಗಮನಿಸಿ ಸದ್ರಿ ಕಾಮಗಾರಿಗೆ ಅನುದಾನವನ್ನು ಒದಗಿಸಿರುವುದಾಗಿ ತಿಳಿಸಿದರು. ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಳ್ಳುವುದರೊಂದಿಗೆ ದೀರ್ಘಾವಧಿ ಬಾಳಿಕೆ ಬರುವಂತ ರಸ್ತೆ ನಿರ್ಮಿಸುವಂತಹ ಆಗಬೇಕು ಎಂದು ತಾಕೀತು ಮಾಡಿದರು. ಗುಣಮಟ್ಟ ಕಾಮಗಾರಿಗಳ ಬಗ್ಗೆ ತಾನು ಯಾವುದೇ ರೀತಿಯಲ್ಲಿ ರಾಜ್ಯ ಮಾಡಿಕೊಳ್ಳುವುದಿಲ್ಲ ಹಾಗೂ ಸ್ಥಳೀಯರು ಮತ್ತು ಪಕ್ಷದ ಮುಖಂಡರು ಈ ನಿಟ್ಟಿನಲ್ಲಿ ಕಾಮಗಾರಿಗಳ ವೀಕ್ಷಣೆಯನ್ನು ಮಾಡಬೇಕಾಗಿ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ,ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪಾಲ್ವಿನ್ ಪೂಣ್ಣಚ್ಚ, ತಾಲೂಕು ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷರಾದ ಕಾಳಿಮಾಡ ಪ್ರಶಾಂತ್, ಕಾಂಗ್ರೆಸ್ ಮುಖಂಡರಾದ ಪ್ರಭು ಸುಬ್ಬಯ್ಯ ,ಮೋಟಯ್ಯ, ಉದಯ, ಸೋಮಣ್ಣ,ಅಭಿನ್, ಕಾರ್ಯಕರ್ತರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.