ಸಮುದಾಯ ಬಾಂಧವರು ಒಂದೆಡೆ ಸಂಘಟಿತರಾಗಲು ಕ್ರೀಡೆ ಸಹಕಾರಿ: ಲೋಕನಾಥ್ ಟಿ.ಎನ್ 2ನೇ ಆವೃತ್ತಿಯ ನಾಯ್ಡುಸ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ

May 10, 2025 - 15:45
 0  31
ಸಮುದಾಯ  ಬಾಂಧವರು ಒಂದೆಡೆ ಸಂಘಟಿತರಾಗಲು ಕ್ರೀಡೆ ಸಹಕಾರಿ: ಲೋಕನಾಥ್ ಟಿ.ಎನ್  2ನೇ ಆವೃತ್ತಿಯ ನಾಯ್ಡುಸ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ
ಸಮುದಾಯ  ಬಾಂಧವರು ಒಂದೆಡೆ ಸಂಘಟಿತರಾಗಲು ಕ್ರೀಡೆ ಸಹಕಾರಿ: ಲೋಕನಾಥ್ ಟಿ.ಎನ್  2ನೇ ಆವೃತ್ತಿಯ ನಾಯ್ಡುಸ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ

ಮೂರ್ನಾಡು:ಕ್ರೀಡೆಗಳು ಸಮುದಾಯದ ಬಾಂಧವ್ಯ ಬೆಸೆಯುವಂತೆ ಮಾಡುವ ಶಕ್ತಿಯಿದ್ದು, ಮುಂದೆಯು ಹೆಚ್ಚು ಕ್ರೀಡಾಕೂಟಗಳು ಆಯೋಜನೆಯಾಗಬೇಕು ಎಂದು ಬೆಳೆಗಾರರು, ಹಿರಿ ರಾದ ಲೋಕನಾಥ್ ಟಿ.ಎನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಬಲಿಜ ನಾಯ್ಡು ಸಮಾಜದ ಅಂಗ ಸಂಸ್ಥೆಯಾದ ನಾಯ್ಡು ಸ್ ಸ್ಪೋರ್ಟ್ಸ್ ಕ್ಲಬ್ ಕೊಡಗು ವತಿಯಿಂದ 2 ನೇ ವರ್ಷ ಕ್ರಿಕೆಟ್ ಪಂದ್ಯಾವಳಿ ಮುರ್ನಾಡು ಕಾಲೇಜು ಮೈದಾನದಲ್ಲಿ ಆಯೋಜನೆಗೊಂಡಿತ್ತು. ಪಂದ್ಯಾಟ ಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ದೀಪ ಬೆಳಗಿಸಿ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದ ಲೋಕನಾಥ್ ಅವರು, ಜಿಲ್ಲೆಯಲ್ಲಿ ಬಲಿಜ ಸಮಾಜದ ಬಾಂಧವರು ವಿರಳವಾಗಿದ್ದಾರೆ.ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿದ್ದಾರೆ.ಜಿಲ್ಲೆಯ ವಿವಿಧ ಭಾಗಗಳಲ್ಲಿ ನೆಲೆಸಿರುವ ಸಮಾಜ ಬಾಂಧವರನ್ನು ಒಂದೇ ವೇದಿಕೆಯಲ್ಲಿ ಕರೆತರುವಂತೆ ಮಾಡುವ ಶಕ್ತಿ ಕ್ರೀಡೆಗಿದೆ. ಕ್ರೀಡೆಯಲ್ಲಿ ಎಲ್ಲಾ ಕುಟುಂಬ ಸದಸ್ಯರು ಅವಕಾಶ ಕಲ್ಪಿಸಿದ ಕ್ರೀಡಾ ಆಯೋಜಕರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಮುರ್ನಾಡು ಬೆಳೆಗಾರರಾದ ಗಣೇಶ್ ನಾಯ್ಡು ಅವರು ಮಾತನಾಡಿ, ಕ್ರಿಕೆಟ್ ಕ್ರೀಡಾಕೂಟವು ಎರಡನೇ ಆವೃತ್ತಿಯಾಗಿದ್ದು. ದ್ವಿತಿಯ ಬಾರಿಗೆ ಮುರ್ನಾಡು ವಿನಲ್ಲಿ ಆಯೋಜನೆಯಾಗುತ್ತಿರುವುದು ಸಂತಸ ತಂದಿದೆ.ಕ್ರಿಕೆಟ್ ಆಟ ಎಂಬುದು ಕ್ರೀಡೆಗೆ ಮಾತ್ರ ಸೀಮಿತವಾಗದೆ ಸಮಾಜದ ಕುಟುಂಬಗಳನ್ನು ಒಂದು ಮಾಡುವ ಸಮ್ಮಿಲನ ಕಾರ್ಯಕ್ರಮವಾಗಿದೆ. ಕ್ರೀಡಾಕೂಟವು ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಆಯೋಜಕ ಸಂಸ್ಥೆಯ ಉಪಾಧ್ಯಕ್ಷರಾದ ಹರ್ಷ ಟಿ.ಜಿ ಮಾತನಾಡಿ, ಕ್ರೀಡಾಕೂಟದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಒಟ್ಟು 08 ತಂಡಗಳು ಭಾಗವಹಿಸುತ್ತಿದೆ. ಲೀಗ್ ಮಾದರಿಯಲ್ಲಿ ಪಂದ್ಯಗಳು‌ ನಡೆಯಲಿದೆ. ಅಂತಿಮ ಪಂದ್ಯಾಟಗಳು ನಾಳೆ ಸಂಜೆ ನಡೆಯಲಿದೆ. ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರು ಭಾಗವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ನಾಯ್ಡು ಸ್ ಸ್ಪೋರ್ಟ್ಸ್ ಕ್ಲಬ್ ಕೊಡಗು ಅಧ್ಯಕ್ಷರಾದ ಶ್ರೀನಿವಾಸ್ ಲೋಕನಾಥ್, ಮತ್ತು ಆಯೋಜಕರು, ಜಲಿಜ ಸಮಾಜದ ಹಿರಿಯರು ಉಪಸ್ಥಿತರಿದ್ದರು.ಶಿಕ್ಷಕರಾದ ಶ್ರೀಮತಿ ನಿರ್ಮಲ ಅವರು ಸ್ವಾಗತಿಸಿ ವಂದಿಸಿದರು.

ಆಯೋಜಕ ಸಂಸ್ಥೆ ನಾಯ್ಡುಸ್ ಸ್ಪೋರ್ಟ್ಸ್ ಕ್ಲಬ್ ಕೊಡಗು, ಪದಾಧಿಕಾರಿಗಳು, ನಿರ್ದೇಶಕರು,ಸಮುದಾಯ ಬಾಂಧವರು, ಹಿರಿಯರು ಮಹಿಳೆಯರು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

ವರದಿ: ಕಿಶೋರ್ ಕುಮಾರ್ ಶೆಟ್ಟಿ.

What's Your Reaction?

Like Like 2
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0