ಸಿದ್ದಾಪುರ: ಮುನವ್ವಿರುಲ್ ಇಸ್ಲಾಮ್ ಮದರಸ ನೂತನ SKSBV ಅಧ್ಯಕ್ಷರಾಗಿ ಸುಫಿಯಾನ್ ಅವಿರೋಧ ಆಯ್ಕೆ
ಸಿದ್ದಾಪುರ:ಸಮಸ್ತ ಕೇರಳ ಸುನ್ನಿ ಸ್ಟುಡೆಂಟ್ಸ್ ಫೆಡರೇಷನ್ ಇದರ ಮದರಸ ವಿದ್ಯಾರ್ಥಿಗಳ ಸಂಘಟನೆಯಾದ, ಎಸ್.ಕೆ.ಎಸ್.ಬಿ.ವಿ ಮುನವ್ವಿರುಲ್ ಇಸ್ಲಾಮ್ ಸಿದ್ದಾಪುರ ಮದರಸದ,ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು,ಅಧ್ಯಕ್ಷರಾಗಿ ಸುಫಿಯಾನ್ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಜುಬೇರ್, ತಯ್ಯಿಬ್,ತಮೀಮ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ನಿಹಾಲ್, ಸಹ ಕಾರ್ಯದರ್ಶಿಯಾಗಿ ಫಾರೂಖ್, ಮಿರ್ಶಬ್,ಅಮೀನ್, ಖಜಾಂಜಿಯಾಗಿ ಸಿನಾನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಿದ್ದಾಪುರ ಮುನವ್ವಿರುಲ್ ಇಸ್ಲಾಮ್ ಮದರಸ ಎಸ್.ಕೆ.ಎಸ್.ಬಿ.ವಿ ಛೇರ್ಮಾನ್ ಮೊಯ್ದೀನ್ ಮುಸ್ಲಿಯಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕನ್ವೀನರ್ ಜಬ್ಬಾರ್ ಫೈಝಿ ಸ್ವಾಗತಿಸಿ ವರದಿ ಮಂಡಿಸಿದರು.
ಮಕ್ಕಳ ಭವಿಷ್ಯಮತ್ತು ಪಾರತ್ರಿಕ ಜೀವನದ ಕುರಿತು ವಿಷಯ ಮಂಡನೆ ಮಂಡನೆ ಮಾಡಿ, ನೌಫಲ್ ಹುದವಿ ಕಾರ್ಯಕ್ರಮ ಉದ್ಘಾಟಿಸಿದರು.ಮುಖ್ಯ ಅತಿಥಿಯಾಗಿ ಫಯಾಜ್ ಫೈಝಿ ಆಗಮಿಸಿ ಶುಭಹಾರೈಸಿದರು.
ಈ ಸಂದರ್ಭ ಮದರಸ ಮುಖ್ಯೋಪಾಧ್ಯಾಯರಾದ ಆರಿಫ್ ಫೈಝಿ,ಹನೀಫ ಮುಸ್ಲಿಯಾರ್, ಸಿದ್ದೀಕ್ ವಾಫಿ,ಅಹ್ಮದ್ ಯಮಾನಿ ಸಹದ್ ಫೈಝಿ ಮತ್ತಿತರರು ಇದ್ದರು.
