ಹುದಿಕೇರಿಯಲ್ಲಿ 66/11 ಕೆವಿ ವಿದ್ಯುತ್ ಉಪ ಕೇಂದ್ರ ಸ್ಥಾಪನೆಗೆ ಸುಮಾರು ₹ 19.34 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ:

ಹುದಿಕೇರಿಯಲ್ಲಿ 66/11 ಕೆವಿ ವಿದ್ಯುತ್ ಉಪ ಕೇಂದ್ರ ಸ್ಥಾಪನೆಗೆ ಸುಮಾರು ₹ 19.34 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ  ಭೂಮಿ ಪೂಜೆ:

ಪೊನ್ನಂಪೇಟೆ:ಈ ಹಿಂದೆ ಕ್ಷೇತ್ರದ ಜನತೆಗೆ ಕೊಟ್ಟ ಭರವಸೆಯಂತೆ ನಡೆಯುತ್ತಿರುವ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣನವರು, ಈ ಭಾಗದ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಉತ್ತಮ ಗುಣಮಟ್ಟದ ಹಾಗೂ ನಿರಂತರ ವಿದ್ಯುತ್ ಒದಗಿಸುವ ಸಲುವಾಗಿ, ಇಂದು ಹುದಕೇರಿಯಲ್ಲಿ ನೂತನ ವಿದ್ಯುತ್ ಪ್ರಸರಣ ಉಪ-ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿ ಇಂದು ಭೂಮಿ ಪೂಜೆ ನೆರವೇರಿಸಿದರು. ಈ ಉಪ ಕೇಂದ್ರದಿಂದ 11 ಕೆವಿಯ 12 ಮಾರ್ಗ ಪೊನ್ನಂಪೇಟೆಯಿಂದ ಹುದಿಕೇರಿವರೆಗ ಹೊರಹೋಗಲಿದೆ. ಸುಮಾರು ₹ 19.34 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯ ಒಂದು ವರ್ಷದ ಕಾಲಾವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಚೀಫ್ ಎಲೆಕ್ಟ್ರಿಕ್ ಆಫೀಸರ್ ರೋಷನ್ ಅಪ್ಪಚ್ಚು ತಿಳಿಸಿದರು.     

 ಶಾಸಕರ ಪ್ರಯತ್ನದಿಂದಾಗಿ ಕ್ಷೇತ್ರಾದ್ಯಂತ ಹಲವು ವಿದ್ಯುತ್ ಉಪ-ಕೇಂದ್ರಗಳು ಸ್ಥಾಪನೆಗೊಳ್ಳುತ್ತಿದ್ದು, ಹುದಿಕೇರಿಯಲ್ಲಿ ಇಂದು ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿ, ಅತಿ ಶೀಘ್ರದಲ್ಲೇ ಇದನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.    

ಈ ಸಂದರ್ಭದಲ್ಲಿ ಚೆಸ್ಕಾಂ ಅಧಿಕಾರಿಗಳು, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್ ,ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸೂರಜ್, ಪೊನ್ನಂಪೇಟೆ ತಾಲೂಕು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷರಾದ ಅಣಲಮಾಡ ಲಾಲಾ ಅಪ್ಪಣ್ಣ, ಹುದಿಕೇರಿ ಪಂಚಾಯಿತಿ ಅಧ್ಯಕ್ಷರಾದ ಕುಪ್ಪಣಮಾಡ ನವ್ಯ ಕಾವೇರಮ್ಮ, ಹಿರಿಯ ಕಾಂಗ್ರೆಸ್ ಮುಖಂಡರಾದ ಚೇಕ್ಕೇರ ವಾಸು ಕುಟ್ಟಪ್ಪ, ಚೆಕ್ಕೇರ ಸುಧೀರ್, ಮೋಟಯ್ಯ, ಡಿಸಿಸಿ ಸದಸ್ಯರಾದ ಮುಕ್ಕಾಟ್ಟೀರ ಸಂದೀಪ್, ಅಜ್ಜಿಕುಟ್ಟಿರ ಗಿರೀಶ್, ನೂರೇರ ಮನೋಹರ್, ಅಣಲಮಾಡ ಹರೀಶ್, ಅಲಿರಾ ರಶೀದ್, ಕುಪ್ಪಣ ಮಾಡ ಕಾವೇರಮ್ಮ,ಕೊಡoಗಡ ವಾಸು, ಕೊಡಂಗಡ ದಮಯಂತಿ ಹಾಗೂ ಪ್ರಮುಖರು ಉಪಸಿತರಿದ್ದರು.