ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್ ಫುಟ್ಬಾಲ್:ರೋಚಕ‌ ಪಂದ್ಯದಲ್ಲಿ ಗೆದ್ದು ಬೀಗಿದ ಫ್ರೆಂಡ್ಸ್ ಎಫ್.ಸಿ ಸಿದ್ದಾಪುರ ಗೆಲುವಿನ ಸನಿಹದಲ್ಲಿ ಎಡವಿ ಬಿದ್ದ ಈಗಲ್ಸ್ ಬೆಂಗಳೂರು

ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್ ಫುಟ್ಬಾಲ್:ರೋಚಕ‌ ಪಂದ್ಯದಲ್ಲಿ ಗೆದ್ದು ಬೀಗಿದ ಫ್ರೆಂಡ್ಸ್ ಎಫ್.ಸಿ ಸಿದ್ದಾಪುರ  ಗೆಲುವಿನ ಸನಿಹದಲ್ಲಿ ಎಡವಿ ಬಿದ್ದ ಈಗಲ್ಸ್ ಬೆಂಗಳೂರು

ಮಡಿಕೇರಿ:ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೋಣಿಕೊಪ್ಪಲಿನ ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ಮೊದಲ ದಿನದ ಕೊನೆಯ ಪಂದ್ಯದಲ್ಲಿ ಫ್ರೆಂಡ್ಸ್ ಎಫ್.ಸಿ ಸಿದ್ದಾಪುರ ತಂಡವು ಪೆನಾಲ್ಟಿ ಶೂಟೌಟ್ ನಲ್ಲಿ ರೋಚಕ ಗೆಲುವು ಸಾಧಿಸಿದೆ.ಈಗಲ್ಸ್ ಬೆಂಗಳೂರು ಹಾಗೂ ಫ್ರೆಂಡ್ಸ್ ಎಫ್.ಸಿ ಸಿದ್ದಾಪುರ ತಂಡಗಳ ನಡುವಿನ ರೋಚಕ ಪಂದ್ಯದಲ್ಲಿ ಎರಡು ತಂಡಗಳು ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದರು. ಈಗಲ್ಸ್ ಎಫ್.ಸಿ ತಂಡವು 2-0 ಗೋಲುಗಳನ್ನು ದಾಖಲಿಸಿ ಪಂದ್ಯದಲ್ಲಿ ಪಾರಮ್ಯ ಮೆರೆದಿದ್ದರು.ಆದರೆ ಹೊಂದಾಣಿಕೆ ಮತ್ತು ಆಕ್ರಮಣಕಾರಿ ಆಟದಿಂದ ಫ್ರೆಂಡ್ಸ್ ಎಫ್.ಸಿ ತಂಡವು ಒಂದು ಗೋಲು ದಾಖಲಿಸಿದದು.ಮತ್ತೆ ವೇಗದ ಆಟಕ್ಕೆ ಮಣೆ ಹಾಕಿದೆ ಈಗಲ್ಸ್ ತಂಡವು ಗೋಲು ಬಾರಿಸಿ 3-1 ಗೋಲುಗಳ ಅಂತರದಿಂದ ಮುನ್ನಡೆ ಸಾಧಿಸಿ ಗೆಲುವಿನ ಸನಿಹದತ್ತ ಹೆಜ್ಜೆ ಇಟ್ಟಿದ್ದರು.ಆದರೆ ಪಂದ್ಯಾವಳಿಯ ಕೊನೆಯ ಐದು ನಿಮಿಷ ಇರುವಾಗ ಫ್ರೆಂಡ್ಸ್ ಎಫ್.ಸಿ ತಂಡವು ಮತ್ತೊಂದು ಗೋಲು ದಾಖಲಿಸಿತು. ಆದರೆ ಫ್ರೆಂಡ್ಸ್ ‌ಎಫ್.ಸಿ ತಂಡದ ಮುನ್ನಡೆ ಆಟಗಾರ ಸಜ್ಜಾದ್ ಅವರ ಕಾಲ್ಚಳಕದ ಮೂಲಕ ಕೇವಲ ಪಂದ್ಯ ಮುಕ್ತಾಯಗೊಳ್ಳಲು 15 ಸೆಕೆಂಡ್ ಬಾಕಿ ಇರುವಾಗ ಗೋಲು ದಾಖಲಿಸಿ 3-3 ಗೋಲುಗಳ ಸಮಬಲ ಸಾಧಿಸಿದರು.ಅಂತಿಮವಾಗಿ ಪೆನಾಲ್ಟಿ ಶೂಟೌಟ್ ನಲ್ಲಿ 4-3 ಗೋಲುಗಳ ಅಂತರದಿಂದ ಫ್ರೆಂಡ್ಸ್ ಎಫ್.ಸಿ ತಂಡವು ಅಮೋಘ ಗೆಲುವು ಸಾಧಿಸಿತು. ಫ್ರೆಂಡ್ಸ್ ‌ಎಫ್.ಸಿ ತಂಡದ ಸಜ್ಜಾದ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.