ಮಾರ್ಚ್ 29ಕ್ಕೆ ಎಡ ಪಕ್ಷಗಳ ಐಕ್ಯವೇದಿಕೆ ಜಿಲ್ಲಾ ಸಮಾವೇಶ

Feb 1, 2026 - 17:14
 0  210
ಮಾರ್ಚ್ 29ಕ್ಕೆ ಎಡ ಪಕ್ಷಗಳ ಐಕ್ಯವೇದಿಕೆ ಜಿಲ್ಲಾ ಸಮಾವೇಶ

ಸಿದ್ದಾಪುರ:- ಜಿಲ್ಲೆಯ ಎಡ ಪಕ್ಷಗಳ ಐಕ್ಯವೇದಿಕೆ ಸಮಾವೇಶವನ್ನು ಮಾರ್ಚ್29ಕ್ಕೆ ನಡೆಸಲು ತೀರ್ಮಾನಿಸಲಾಗಿದೆ ಎಡ ಪಕ್ಷಗಳ ಜಿಲ್ಲಾ ನಾಯಕರು ತಿಳಿಸಿದರು.

 ಸಿದ್ದಾಪುರದಲ್ಲಿ ಸಿಪಿಐ, ಸಿಪಿಎಂ, ಸಿಪಿಐಎಂಎಲ್, ಜಿಲ್ಲಾ ಎಡಪಕ್ಷದ ನಾಯಕರು ಜಂಟಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು ಭಾರತ ಕಮ್ಯುನಿಸ್ಟ್ ಪಕ್ಷದ ಹಿರಿಯ ಮುಖಂಡ ಕೆ. ವಿ. ಸುನೀಲ್ ಮಿತನಾಡಿ ಬಡಜನರ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಹಾಗೂ ಎಡಪಕ್ಷಗಳ ಪರ್ಯಾಯ ಐಕ್ಯ ರಾಜಕೀಯ ವೇಧಿಕೆ ಕಲ್ಪಸುವ ಸಲುವಾಗಿ ಸಮಾವೇಶ ರೂಪಿಸಲಾಗಿದೆ ಎಂದರು.

 ಸಿಪಿಐಎಂಎಲ್ ನ ಜಿಲ್ಲಾ ಕಾರ್ಯದರ ನಿರ್ವಾಣಪ್ಪ ಮಾತನಾಡಿ ಜಿಲ್ಲೆಯ ಲೖನ್ ಮನೆಗಳಲ್ಲಿ ವಾಸಿಸುತ್ತಿರುವ ಕಾರ್ಮಿಕರಿಗೆ ನಿವೇಶನ ಕಲ್ಪಿಸುವಲ್ಲಿ, ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಸುವ ವಿಚಾರದಲ್ಲಿ ಶಾಸಕರು ವಿಫಲರಾಗಿದ್ದಾರೆ ಎಂದು ಆರೋಪಿಸಿದ ಅವರು ಜಿಲ್ಲೆಯಲ್ಲಿಯ ಎಡಪಕ್ಷಗಳು ಈ ನಿಟ್ಟಿನಲ್ಲಿ ಸಮವೇಶ ನಡೆಸಿ ಜಂಟಿ ಹೋರಾಟ ನಡೆಸುವುದಾಗಿ ತಿಳಿಸಿದರು.

 ಸಿಪಿಐ (ಎಂ) ಜಿಲ್ಲಾಕಾರ್ಯದರ್ಶಿ ಹೆಚ್, ಬಿ, ರಮೇಶ್ ಮಾತನಾಡಿ ಎಡಪಕ್ಷಗಳ ಐಕ್ಯ ವೇದಿಕೆ ರಚಿಸುವ ಸಲುವಾಗಿ ಹಲವು ವರ್ಷಗಳಿಂದ ಪ್ರಯತ್ನಕ್ಕೆ ಇದೀಗ ಸಕಲವಾಗಿದ್ದು ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವೇದಿಕೆ ಕಾರ್ಯನಿರ್ವಹಿಸಲಿದೆ.

ಮುಂಬರುವ ಚುನಾವಣೆ ಹಾಗೂ ರಾಜಕೀಯ ನಡೆಗಳನ್ನು ಐಕ್ಯವೇದಿಕೆ ನೇತೃತ್ವದಲ್ಲಿಯೇ ನಿರ್ಧಾರಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಸಿಪಿಐ ಪಕ್ಷದ ರಮೇಶ್ ಮಾಯಮುಡಿ, ಎನ್. ಮಣಿ, ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಜಿಲ್ಲಾಮಂಡಳಿ ಸದಸ್ಯ, ಎ. ಸಿ. ಸಾಬು, ಸಿಪಿಐಎಂಎಲ್ ಪಕ್ಷದ ಪ್ರಕಾಶ್, ರವಿ, ಅಣ್ಣಪ್ಪ ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0