ಕಡಂಗ:ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಐದು ನವಜೋಡಿಗಳಿಗೆ ಕಂಕಣ ಭಾಗ್ಯ:
ಚೆಯ್ಯಂಡಾಣೆ/ಕಡಂಗ : ಸುನ್ನಿ ಯುವಜನ ಸಂಘ (ಎಸ್ ವೈ ಎಸ್ ) ಹಾಗೂ ಸಮಸ್ತ ಕೇರಳ ಸುನ್ನಿ ಸ್ಟೂಡೆಂಟ್ ಫೆಡರೇಷನ್ (ಎಸ್ ಕೆ ಎಸ್ ಎಸ್ ಎಫ್) ಕಡಂಗ ಶಾಖೆಯ ಸಂಯುಕ್ತಾಶ್ರಯದಲ್ಲಿ ಕಡಂಗ ಕೊಕ್ಕಂಡಬಾಣೆ ದರ್ಗಾ ಷರೀಫ್ ವಠಾರದ ಶಂಸುಲ್ ಉಲಮಾ ನಗರದಲ್ಲಿ 5 ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ಕೊಡಗು ಜಿಲ್ಲಾ ಖಾಝಿ ಸಯ್ಯದ್ ಮುಹಮ್ಮದ್ ಕೋಯಾ ಜಮಲುಲೈಲಿ ತಂಙಳ್ ನಿಖಾ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿ ಮಾತನಾಡಿ,ಸಂಘಟನೆ ಹಮ್ಮಿಕೊಂಡ ವಿವಾಹ ಕಾರ್ಯಕ್ರಮ ನ ಶ್ಲಾಘನೀಯ.ಇಂದು ಸಂಘಟನೆಯ ಮೂಲಕ 5 ಬಡ ಕುಟುಂಬ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ದಾಂಪತ್ಯ ಜೀವ ಸುಖ ಸಮೃದ್ಧಿಯಿಂದ ಕೂಡಿರಲಿ,ಇಂತಹ ಕಾರ್ಯಕ್ರಮ ಇಲ್ಲದಿದ್ದರೆ ಬಡ ಮಕ್ಕಳು,ಅನಾಥರು ವಿವಾಹವಾಗಲು ಕಷ್ಟಸಾಧ್ಯ ಎಂದು, ದುಆ ಆಶೀರ್ವಚನ ನೀಡಿದರು.
ಕಡಂಗ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೋಡಿರ ಪ್ರಸನ್ನ ತಮ್ಮಯ್ಯ ಮಾತನಾಡಿ, 5 ಬಡ ಹೆಣ್ಣುಮಕ್ಕಳಿಗೆ ಜೀವನದಲ್ಲಿ ಹೊಸ ದಾರಿಯನ್ನ ಕಂಡು ಕೊಳ್ಳಲಿಕ್ಕೆ ಎಸ್.ಕೆ.ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್ ಸಂಘಟನೆಗಳು ಅವಕಾಶವನ್ನ ನೀಡಿರುವುದು ಸಮಾಜಕ್ಕೆ ಮಾದರಿಯಾಗಿದೆ. ಇದೊಂದು ದೊಡ್ಡ ಪುಣ್ಯಕರ್ಮ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಎಸ್. ವೈ ಎಸ್ ಜಿಲ್ಲಾಧ್ಯಕ್ಷ ಬಶೀರ್ ಹಾಜಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿ ಯಾವುದೇ ಜಾತಿ,ಧರ್ಮದವರು ತೊಂದರೆ ಅನುಭವಿಸುತ್ತಿದ್ದರೆ ಅವರಿಗೆ ನೇರವಾಗುವುದು ಬಹು ಮುಖ್ಯ ಎಂದರು.
ಅಂತಾರಾಷ್ಟ್ರೀಯ ಮಟ್ಟದ ಪ್ರಖ್ಯಾತ ವಾಗ್ಮಿ ನೌಶಾದ್ ಬಾಖವಿ ತಿರುವನಂದಪುರಂ ಧಾರ್ಮಿಕ ಮತ ಪ್ರವಚನ ನಡೆಸಿ ಮಾತನಾಡಿ ದಾನ ಧರ್ಮ ಬಹುಮುಖ್ಯ,ಬಡ ಹೆಣ್ಣು ಮಗಳ ಸಂಕಷ್ಟವನ್ನು ಅರಿತು ಸಂಘಟಕರು ಆಯೋಜಿಸುವ ಇಂತಹ ಕಾರ್ಯಕ್ರಮ ಹೆಮ್ಮೆಯದ್ದು ಎಲ್ಲಾ ದಾನಿಗಳು ಮುಂದೆ ಬಂದು ಇಂತಹ ಕಾರ್ಯಕ್ರಮವನ್ನು ಪ್ರೋತ್ಸಾಹಿಸುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಎಸ್.ಕೆ.ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್ ಸಂಘಟನೆ ಕಳೆದ 3 ವರ್ಷದಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದು ಈ ವರ್ಷ 5 ಬಡ ಕುಟುಂಬದ ಜೋಡಿಗಳಿಗೆ ಕಂಕಣ ಭಾಗ್ಯ ನೀಡಿದ್ದಾರೆ.ಈ ಬಾರಿ ಕೊಟ್ಟಮುಡಿ, ಸುಂಟಿಕೊಪ್ಪ,ಪಿರಿಯಾಪಟ್ಟಣ, ತ್ಯಾಗತ್ತೂರ್,ತಿತಿಮತಿಯ ವಧುವನ್ನು ಆಯ್ಕೆ ಮಾಡಲಾಗಿದೆ.ಕಾರ್ಯಕ್ರಮದಲ್ಲಿ ವಧು,ವರರಿಗೆ ಬೇಕಾದ ಮಾಂಗಲ್ಯ ಚಿನ್ನಭರಣ,ವಸ್ತ್ರ,ಕೈ ಗಡಿಯಾರವನ್ನು ಸಂಘಟನೆ ಉದಾರವಾಗಿ ನೀಡಿದರು.
ಕೊಡಗು ಜಿಲ್ಲಾ ನಾಇಬ್ ಖಾಝಿ ಹಾಗೂ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಎಂ.ಎಂ. ಅಬ್ದುಲ್ಲ ಫೈಝಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕಡಂಗ ಮೊಯ್ಯದ್ದಿನ್ ಮಸೀದಿಯ ಖತೀಬ್ ರಫೀಕ್ ಲತೀಫಿ ಉದ್ಘಾಟಿಸಿದರು. ಈ ಸಂದರ್ಭ ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಹಾಗೂ ಡಿಸಿಸಿ ಸದಸ್ಯರಾದ ಯಾಕೂಬ್,ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಹನೀಫ್,ನಾಪೋಕ್ಲು ಜಮಾಅತ್ ಅಧ್ಯಕ್ಷ ಅಬ್ದುಲ್ ರಹ್ಮಾನ್,ಕಡಂಗ ಬದ್ರಿಯಾ ಜಮಾಅತ್ ಅಧ್ಯಕ್ಷ ಉಸ್ಮಾನ್ ಕೆ.ಇ,ಎಡಪಾಲ ಜಮಾಅತ್ ಅಧ್ಯಕ್ಷ ಬಶೀರ್,ಮೊಯಿದ್ದಿನ್ ಮುಸ್ಲಿಯಾರ್,ವಿರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಮೊಹಮ್ಮದ್ ರಾಫಿ,ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎ.ಹಂಸ,ಯೂಸುಫ್ ಮುಸ್ಲಿಯಾರ್,ಉಮ್ಮರ್ ಫೈಝಿ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್,ಗ್ರಾಮ ಪಂಚಾಯಿತಿ ಸದಸ್ಯ ಸುಬೈರ್,ಜಮಾಅತ್ ಕಾರ್ಯದರ್ಶಿ ಅಬ್ದುಲ್ ರಹ್ಮನ್,ತಮ್ಲಿಕ್ ದಾರಿಮಿ,ಎಸ್ ಕೆಎಸ್ಎಸ್ಎಫ್ ಜಿಲ್ಲಾಧ್ಯಕ್ಷ ಸುಹೈಬ್ ಫೈಝಿ, ಕಡಂಗ ಎಸ್ ವೈ ಎಸ್ ಅಧ್ಯಕ್ಷ ಮಾಹಿನ್ ದಾರಿಮಿ, ಪ್ರಧಾನ ಕಾರ್ಯದರ್ಶಿ ಹಾರಿಸ್,ಉಪಾಧ್ಯಕ್ಷ ಯೂಸುಫ್, ಕೋಶಾಧಿಕಾರಿ ಅಬ್ದುಲ್ ರಹ್ಮನ್, ಎಸ್ ಕೆ ಎಸ್ ಎಸ್ ಎಫ್ ಉಪಾಧ್ಯಕ್ಷ ಜುನೈದ್,ಕಾರ್ಯದರ್ಶಿ ಇಕ್ಬಾಲ್,ಕೋಶಾಧಿಕಾರಿ ಸಮದ್,ಶಾಫಿ ಎಡಪಾಲ,ಯೂಸುಫ್ ಮುಸ್ಲಿಯಾರ್,ಉಸ್ಮಾನ್ ಫೈಝಿ, ಉಮ್ಮರ್ ಫೈಝಿ,ಹನೀಫ್ ಫೈಝಿ,ಬದ್ರಿಯಾ ಮಸೀದಿಯ ಸದರ್ ಹುಸೈನಾರ್ ಸಅದಿ, ಗ್ರಾ.ಪಂ.ಸದಸ್ಯ ಮಮ್ಮದ್, ಮಾಜಿ ಸದಸ್ಯ ಪ್ರಕಾಶ್, ಪಾಲಚಂಡ ಅಜಿತ್, ಉಲ್ಲಾಸ್, ರಸಿ,ಹಾಗೂ ಸಂಘಟನೆಯ ಪ್ರಮುಖರು, ಕಾರ್ಯಕರ್ತರು, ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಸಂಜೆ ಧ್ವಜಾರೋಹಣವನ್ನು ಮೊಯ್ಯದ್ದಿನ್ ಜಮಾಅತ್ ಅಧ್ಯಕ್ಷ ಕುಂಞ ಅಬ್ದುಲ್ಲ ಹಾಗೂ ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಇಸಾಕ್ ಜಂಟಿಯಾಗಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮೊಹಮ್ಮದಲಿ ಶಿಯಾಬ್ ತಂಙಳ್ ಅರಬಿಕ್ ಕಾಲೇಜು ಪ್ರಿನ್ಸಿಪಾಲ್ ಉಸ್ಮಾನ್ ಫೈಝಿ ಪ್ರಾರ್ಥಿಸಿ,ಇಬ್ರಾಹಿಂ ಬಾದುಷಾ ಕೊಡ್ಲಿಪೇಟೆ ನಿರೂಪಿಸಿ,ಸುಹೈಬ್ ಫೈಝಿ ಸ್ವಾಗತಿಸಿ ಸರ್ವರನ್ನು ವಂದಿಸಿದರು.
ವರದಿ: ಅಶ್ರಫ್ / ನೌಫಲ್