ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ: ಕೊಡಗು ವಿವಿಗೆ ಒಳಪಡುವ ಕಾಲೇಜುಗಳಿಗೆ ಮೇ 26 ಮತ್ತು ‌ 27ರಂದು ರಜೆ ಘೋಷಣೆ

ಕೊಡಗು  ಜಿಲ್ಲೆಯಲ್ಲಿ ಮಳೆಯ ಆರ್ಭಟ: ಕೊಡಗು ವಿವಿಗೆ ಒಳಪಡುವ ಕಾಲೇಜುಗಳಿಗೆ ಮೇ  26 ಮತ್ತು ‌ 27ರಂದು ರಜೆ ಘೋಷಣೆ

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತದೊಂದಿಗೆ ಸಮಾಲೋಚಿಸಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಎಲ್ಲಾ ಘಟಕ ಸರ್ಕಾರಿ ಹಾಗೂ ಸಂಯೋಜಿತ ಮಹಾವಿದ್ಯಾಲಯಗಳಿಗೆ ದಿನಾಂಕ 26 ಹಾಗೂ 27 ರಂದು ಎರಡು ದಿನ ರಜೆ ಘೋಷಿಸಿ ಕೊಡಗು ವಿವಿ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ ಆದೇಶ ಹೊರಡಿಸಿದ್ದಾರೆ.