ಭಯೋತ್ಪಾದನಾ ಕೃತ್ಯ ಮುಸ್ಲಿಂ ಸಮುದಾಯದ ಮೇಲೆ ದ್ವೇಷ ಭಾವನೆ ಮೂಡಲು ಮಾಡಿದ ಸಂಚು: ಇ.ರಾ.ದುರ್ಗಪ್ರಸಾದ್

ಭಯೋತ್ಪಾದನಾ ಕೃತ್ಯ ಮುಸ್ಲಿಂ ಸಮುದಾಯದ ಮೇಲೆ ದ್ವೇಷ ಭಾವನೆ ಮೂಡಲು ಮಾಡಿದ ಸಂಚು: ಇ.ರಾ.ದುರ್ಗಪ್ರಸಾದ್

ಸಿದ್ದಾಪುರ:- ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದನಾ ದಾಳಿ ಮುಸ್ಲಿಂ ಸಮುದಾಯದ ಮೇಲೆ ದ್ವೇಷ ಭಾವನೆ ಮೂಡಲು ಮಾಡಿದ ಸಂಚು ಎಂದು ಇ.ರಾ.ದುರ್ಗಪ್ರಸಾದ್ ಪ್ರತಿಪಾದಿಸಿದರು.ಸಿದ್ದಾಪುರ ನಗರದಲ್ಲಿ ಕಾಶ್ಮಿರ ಭಯೋತ್ಪಾದನ ಕೃತ್ಯ ಖಂಡಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಪುಲ್ವಾಮಾ ದಾಳಿನಂತರ ನಡೆದ ಹೇಯ ಕೃತ್ಯ ಇದಾಗಿದ್ದು ಇದನ್ನು ಕಾಶ್ಮೀರಿಗರು ಮಾಡಿದಲ್ಲ ಅಲ್ಲಿನ ಆರ್ಥಿಕ ಮೂಲ ಪ್ರವಾಸೋದ್ಯಮವಾಗಿದ್ದು ಅದಕ್ಕೆ ಚ್ಯುತಿ ತರುವ ಮೂಲಕ ದೇಶದಲ್ಲಿ ಮುಸ್ಲಿಂರ ಮೇಲೆ ದ್ವೇಷ ಮೂಡಿಸಲು ಈ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಿರು.ದೇಶದ ಇತರ ಭಾಗಗಳಲ್ಲಿ ಇರುವಂತೆ ಕಾಶ್ಮೀರದಲ್ಲಿ ಬಡತನ ಮತ್ತು ನಿರುದ್ಯೋಗ ಸಮಸ್ಯೆ ಕಾಡುತಿದೆ ಪ್ರವಾಸೋದ್ಯಮ ಅಲ್ಲಿನ ಮೂಲ ಆದಾಯವಾಗಿದ್ದು ದೇಶೀಯ ಮತ್ತು ವಿದೇಶಿ ಪ್ರವಾಸಿಗರು ಅಲ್ಲಿ ಇದ್ದರು ಪ್ರವಾಸಿಗರನ್ನು ಗುರಿಯಾಗಿಸಿ ಕಾಶ್ಮೀರಿ ವಿರೋಧಿಗಳು ನಡೆಸಿದ ಕೃತ್ಯ ಇದಾಗಿದ್ದು ಅಲ್ಲಿನ ಮೂಲ ಮುಸ್ಲಿಂ ನಿವಾಸಿಗಳು ಪ್ರವಾಸಿಗಳ ರಕ್ಷಣೆಗೆ ಸ್ಪಂದಿಸಿದ್ದಾರೆ ಎಂದ ಅವರು ಕಾಶ್ಮೀರದಲ್ಲಿ 370 ವಿಧಿ ರದ್ದು ಪಡಿಸಿದ್ದರಿಂದ ಕಾಶ್ಮೀರ ಸಮಸ್ಯೆ ಬಗೆ ಹರಿದಿದೆ ಎಂದು ಬೀಗುತ್ತಿದ್ದ ಕೇಂದ್ರ ಸರಕಾರಕ್ಕೆ ಈ ಬಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಇರಲಿಲ್ಲವೇ? ಎಂದು ಪ್ರಶ್ನಿಸಿದರು ಅವರು ಇದಕ್ಕೆ ಪ್ರಧಾನಿ ಉತ್ತರಿಸಬೇಕು ಎಂದು ಹೇಳಿದವರು ನಿರಂತರವಾಗಿ ಭಾರತ ಮುಸಲ್ಮಾನರ ಮೇಲೆ ದ್ವೇಷ ಬಿತ್ತುವ ಷಡ್ಯಂತ್ರಗಳು ನಡೆಯುತ್ತಿದ್ದು ಮುಸ್ಲಿಮರು ಎಚ್ಚೆತ್ತುಕೊಳ್ಳಬೇಕಾಗಿದೆ ಪ್ರವಾಸಿಗನ ರಕ್ಷಣೆಗೆ ನಿಂತ ಮುಸ್ಲಿಂ ವ್ಯಕ್ತಿಯನ್ನು ಭಯೋತ್ಪಾದಕರು ಕೊಂದಿದ್ದಾರೆ.ಘಟನೆಯ ಹಿಂದೆ ಭಾರಿ ಷಡ್ಯಂತರ ಇದ್ದು ಕುಲಂಕುಷವಾಗಿ ತನಿಖೆ ನಡೆಸಬೇಕಾಗಿದೆ. ಈ ಸಂದರ್ಭ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಹೆಚ್.ಬಿ.ರಮೇಶ್,ಮುಖಂಡರುಗಳಾದ ಭರತ್,ಕುಟ್ಟಪ್ಪನ್,ಸಾಬು,ಮುಸ್ತಫ,ಉದಯ,ಉಮ್ಮರ್, ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.