ಸಿದ್ದಾಪುರ: ಮುನವ್ವಿರುಲ್ ಇಸ್ಲಾಂ ಮದರಸದಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಅಭಿಯಾನ
ಸಿದ್ದಾಪುರ:ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಆದೇಶದಂತೆ ಎಸ್.ಕೆ.ಎಸ್.ಬಿ.ವಿ ಸಿದ್ದಾಪುರ ಮುನವ್ವಿರುಲ್ ಇಸ್ಲಾಂ ಮದರಸ ವತಿಯಿಂದ ಮಾದಕ ವಸ್ತುಗಳ ವಿರುದ್ಧ ಜನ ಜಾಗೃತಿ ಹಾಗೂಕರ್ನಾಟಕ ಸರ್ಕಾರದ ರ ಮುಖ್ಯಮಂತ್ರಿ ಅವರಿಗೆ ಸಹಿ ಸಂಗ್ರಹಿಸಿ ಕಳುಹಿಸುವ ಕಾರ್ಯಕ್ರಮ ಸಿದ್ದಾಪುರದ ಮದರಸದಲ್ಲಿ ನಡೆಯಿತು.ಅಬೂಬಕರ್ ಸಿದ್ದೀಕ್ ವಾಫಿ ಅವರು ಕಾರ್ಯಕ್ರಮಕ್ಕೆ ಪ್ರಾರ್ಥನೆ ಮೂಲಕ ಚಾಲನೆ ನೀಡಿದರು.ಜಮಾಅತ್ ರವೂಫ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಕಾರ್ಯಕ್ರಮಕ್ಕೆ ಕನ್ವೀನರ್ ಸಹದ್ ಫೈಝಿ ಸ್ವಾಗತ ಕೋರಿದು.
ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರುವುದರೊಂದಿಗೆ ಇಸ್ಲಾಮಿನ ಚೌಕಟ್ಟಿನಲ್ಲಿ ಬದುಕುಬೇಕೆಂದು ಮದರಸ ಮುಖ್ಯೋಪಾಧ್ಯಾಯರಾದ ಆರಿಫ್ ಫೈಝಿ ಕರೆ ನೀಡಿದರು.
ಮಾದಕ ವಸ್ತುಗಳನ್ನು ಉಪಯೋಗಿಸುವವರಿಗೆ ಉತ್ತಮ ಜೀವನ ನಡೆಸಲು ಸಾಧ್ಯವಿಲ್ಲ. ಮದರಸ ಹಾಗೂ ಶಾಲೆ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿದ್ದು, ಸದೃಢ ಸಮಾಜದ ಬೆಳವಣಿಗೆಗೆ ಕೈ ಜೋಡಿಸಬೇಕಾದದ್ದು ಪ್ರಸ್ತುತ ದಿನದ ಅನಿವಾರ್ಯತೆಯಾಗಿದೆ ಎಂದು ನೌಫಲ್ ಹುದವಿ ಹೇಳಿದರು.ಡ್ರಗ್ಸ್ ವಿರುದ್ಧ ಪ್ರತಿಜ್ಞಾ ವಿಧಿ ಸ್ವೀಕಾರವನ್ನು ಆರಿಫ್ ಫೈಝಿ ಬೋಧನೆ ಮಾಡಿದರು.
ಎಸ್.ಕೆ.ಎಸ್.ಬಿ.ವಿ ವಿಚೇರ್ಮನ್ ಜಬ್ಬಾರ್ ಫೈಝಿ ,ಹನೀಫ್ ಮುಸ್ಲಿಯಾರ್, ಮೊಯ್ದೀನ್ ಮುಸ್ಲಿಯಾರ್, ಅಹ್ಮದ್ ಯಮಾನಿ, ಕಾರ್ಯದರ್ಶಿ ನಿಹಾಲ್ ,ಕಮಿಟಿ ಸದಸ್ಯ ಕರೀಮ್ ಸಮೀರ್, ಅಷ್ಕರ್ ಹಂಸ ಮತ್ತಿತರರು ಹಾಜರಿದ್ದರು.ಎಸ್‌ಕೆ.ಎಸ್.ಬಿ.ವಿ ಅಧ್ಯಕ್ಷ ಸುಫಿಯಾನ್ ವಂದಿಸಿದರು.
