ಪ್ರೀತಿ ನಿರಾಕರಿಸಿದ ವಿವಾಹಿತ ಮಹಿಳೆಯ ಕೊಲೆ ಮಾಡಿದ ಪಾಗಲ್ ಪ್ರೇಮಿ

ಹಾಸನ: ಬೇಲೂರಿನಲ್ಲಿ ಕೆರೆಗೆ ಕಾರು ಉರುಳಿ ಮಹಿಳೆ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಅದು ಆಕ್ಸಿಡೆಂಟ್ ಅಲ್ಲ ಕೊಲೆ ಎನ್ನುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಇಂತಹದ್ದೊಂದು ಘಟನೆ ನಡೆದಿರೋದು ಬೇಲೂರು ತಾಲೂಕಿನ ಚಂದನಹಳ್ಳಿಯಲ್ಲಿ. ವಿವಾಹಿತ ಮಹಿಳೆ ಪ್ರೀತಿ ನಿರಾಕರಿಸಿದ್ದಕ್ಕೆ, ಸಿನಿಮೀಯ ರೀತಿಯಲ್ಲಿ ಕಾರನ್ನು ಕೆರೆಗೆ ತಳ್ಳಿ ಮಹಿಳೆ ಹತ್ಯೆ ಮಾಡಿರೋ ಆರೋಪ ಕೇಳಿಬಂದಿದೆ. ಬೇಲೂರಿನ ಶ್ವೇತಾ(32) ಕೊಲೆಯಾದ ಮಹಿಳೆ.
ಹಲವು ವರ್ಷಗಳಿಂದ ಪರಿಚಿತನಾಗಿದ್ದ ವ್ಯಕ್ತಿ ಜೊತೆ ಶ್ವೇತಾ ಗೆಳೆತನ ಹೊಂದಿದ್ದಳು. ತಾನು ಪತ್ನಿ ಬಿಟ್ಟು ಬರ್ತೀನಿ ನೀನು ನನ್ನೊಟ್ಟಿಗೆ ಬಾ ಎಂದು ರವಿ ಪೀಡಿಸುತ್ತಿದ್ದನಂತೆ. ಶ್ವೇತಾ ಗಂಡನಿಂದ ದೂರವಾಗಿ ತಂದೆ ತಾಯಿ ಜೊತೆ ನೆಲೆಸಿದ್ದರು. ಶ್ವೇತಾ, ರವಿಯ ಒತ್ತಾಯ ನಿರಾಕರಿಸಿದ್ದರಿಂದ ಪ್ರೀತಿ ನಿರಾಕರಿಸಿದ್ದಕ್ಕೆ ಕೆರೆಗೆ ತಳ್ಳಿ ಕೊಲೆ ಮಾಡಿದ ಆರೋಪ ಕೇಳಿಬಂದಿದೆ. ರವಿ ಮಂಗಳವಾರ ಹಾಸನದಿಂದ ತನ್ನ ಕಾರಿನಲ್ಲಿ ಶ್ವೇತಾ ಕರೆತಂದಿದ್ದನು. ಚಂದನಹಳ್ಳಿ ಕೆರೆಗೆ ಕಾರಿನ ಸಮೇತ ಶ್ವೇತಾ ಅವರನ್ನು ಕೆರೆಗೆ ಬೀಳಿಸಿ, ಕೊಲೆಮಾಡಿ ಬಳಿಕ ಆಕಸ್ಮಿಕವಾಗಿ ಕಾರು ಬಿದ್ದಿದೆ ಎಂದು ಕೈಥ ಕಟ್ಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಶ್ವೇತಾ ಕುಟುಂಬ ಸದಸ್ಯರ ದೂರು ಆಧರಿಸಿ ಕೊಲೆ ಕೇಸ್ ದಾಖಲು ಮಾಡಿರುವ ಅರೇಹಳ್ಳಿ ಠಾಣೆ ಪೊಲೀಸರು ಆರೋಪಿ ರವಿಯನ್ನು ವಶಕ್ಕೆ ಪಡೆದಿದ್ದಾರೆ.