ನಾಪೋಕ್ಲು-ಮೂರ್ನಾಡು ಮುಖ್ಯರಸ್ತೆಯಲ್ಲಿ ಕಾರುಗಳ ನಡುವಿನ ಮುಖಾಮುಖಿ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಮೃತ್ಯು

ನಾಪೋಕ್ಲು-ಮೂರ್ನಾಡು ಮುಖ್ಯರಸ್ತೆಯಲ್ಲಿ ಕಾರುಗಳ ನಡುವಿನ ಮುಖಾಮುಖಿ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಮೃತ್ಯು
ಮೃತಪಟ್ಟ ಮಹಿಳೆ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು : ನಾಪೋಕ್ಲು ಮೂರ್ನಾಡು ಮುಖ್ಯರಸ್ತೆಯ ಹೊದವಾಡ ಗ್ರಾಮದ ಬೊಳಿ ಬಾಣೆ ಎಂಬಲ್ಲಿ ಆ.24ರಂದು ನಡೆದ ಕಾರುಗಳ ನಡುವಿನ ಮುಖಾಮುಖಿ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ನಾಪೋಕ್ಲು ಬಳಿಯ ಕುಂಜಿಲ ಗ್ರಾಮದ ನಿವಾಸಿ ಚಿತ್ರಬಾನು ಎಂಬುವವರ ಪತ್ನಿ ವಿದ್ಯಾ (55)ಮೃತ ದುರ್ದೈವಿಯಾಗಿದ್ದಾರೆ. 

ಆ.24ರಂದು ಪತಿ ಚಿತ್ರಬಾನು, ಪತ್ನಿವಿದ್ಯಾ ಹಾಗೂ ಇವರ ಮೊಮ್ಮಮಗಳು ತಮ್ಮ ಹುಂಡೈ ಐ ಟೆನ್ ಕಾರಿನಲ್ಲಿ ಮೂರ್ನಾಡು ಕಡೆಯಿಂದ ನಾಪೋಕ್ಲು ಕಡೆಗೆ ತೆರಳುತ್ತಿದ್ದಾಗ ಮೂರ್ನಾಡು ಕಡೆಗೆ ಮರಗೋಡು ಅಬ್ಯತ್ ಮಂಗಲದ ನಿವಾಸಿಗಳು ತೆರಳುತ್ತಿದ್ದ ಮಾರುತಿ ಸ್ವಿಫ್ಟ್ ಕಾರಿನ ನಡುವೆ ನಾಪೋಕ್ಲು ಮೂರ್ನಾಡು ಮುಖ್ಯ ರಸ್ತೆಯ ಹೊದವಾಡ ಗ್ರಾಮದ ಬೊಳಿಬಾಣೆ ಬಳಿಯ ರಸ್ತೆ ತಿರುವಿನಲ್ಲಿ ಮುಖಾಮುಖಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವಿದ್ಯಾ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾ ಅವರು ಭಾನುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.