ಮಡಿಕೇರಿ ದಸರಾ ಕ್ರೀಡಾಕೂಟ ಸಮಿತಿ ವತಿಯಿಂದ ಜಿಲ್ಲಾ ಮಟ್ಟದ ಪುರುಷರ ಮುಕ್ತ 5+2 ಫುಟ್ಬಾಲ್ ಪಂದ್ಯಾವಳಿ

ಮಡಿಕೇರಿ – ಮಡಿಕೇರಿ ನಗರ ದಸರಾ ಕ್ರೀಡಾಕೂಟ ಸಮಿತಿ-2025ರ ಆಶ್ರಯದಲ್ಲಿ ಸೆಪ್ಟೆಂಬರ್ 23, ಮಂಗಳವಾರ ಜಿಲ್ಲಾ ಮಟ್ಟದ ಮುಕ್ತ 5+2 ಆಟಗಾರರ ಕಾಲ್ಚೆಂಡು ಪಂದ್ಯಾವಳಿ ಆಯೋಜಿಸಲಾಗಿದೆ.ಈ ಪಂದ್ಯಾಟಕ್ಕೆ ನೋಂದಾವಣೆ ಶುಲ್ಕ ಇರುವುದಾಗಿ ತಿಳಿಸಲಾಗಿದೆ. ವಿಜೇತ ಹಾಗೂ ರನ್ನರ್ ತಂಡಗಳಿಗೆ ಆಕರ್ಷಕ ಟ್ರೋಫಿ, ವೈಯಕ್ತಿಕ ಬಹುಮಾನ ಹಾಗೂ ನಗದು ಬಹುಮಾನಗಳನ್ನು ವಿತರಿಸಲಾಗುವುದು ಜಿಲ್ಲೆಯ ಎಲ್ಲಾ ತಂಡಗಳು ಸ್ಪರ್ಧಾತ್ಮಕವಾಗಿ ಭಾಗವಹಿಸಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸಲು ಕೋರಲಾಗಿದೆ.
ತಾಲೂಕು ಶಾಲಾ ಮಟ್ಟದ ಪಂದ್ಯಾವಳಿ 5+2:
ಇದೇ ವೇಳೆ ಮಡಿಕೇರಿ ತಾಲೂಕು ಶಾಲಾ ಮಟ್ಟದ ಕಾಲ್ಚೆಂಡು ಪಂದ್ಯಾವಳಿಯನ್ನೂ ಇದೇ ದಿನಾಂಕದಂದು (23.09.2025) ಪ್ರಪ್ರಥಮವಾಗಿ ಆಯೋಜಿಸಲಾಗಿದೆ. 15 ವರ್ಷ ವಯೋಮಿತಿಯ (10ನೇ ತರಗತಿಯೊಳಗಿನ) ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುವ ಈ ಪಂದ್ಯಾವಳಿಗೆ ಉಚಿತ ನೋಂದಾವಣೆ ವ್ಯವಸ್ಥೆಯಿದ್ದು, ಮೊದಲ ಮೂರು ಸ್ಥಾನಗಳ ತಂಡಗಳಿಗೆ ಟ್ರೋಫಿ ಹಾಗೂ ವೈಯಕ್ತಿಕ ಬಹುಮಾನಗಳು ನೀಡಲಾಗುವುದು. ಜೊತೆಗೆ ಭಾಗವಹಿಸುವ ಪ್ರತಿಯೊಂದು ಶಾಲಾ ತಂಡಕ್ಕೂ ಗೌರವ ಪ್ರಶಸ್ತಿ ನೀಡಲಾಗುತ್ತದೆ.
ವಿಶೇಷ ಸೂಚನೆ:- ಶಾಲಾ ತಂಡಗಳು ದೃಢೀಕರಣ ಪತ್ರ ಅಥವಾ ವಿದ್ಯಾರ್ಥಿಗಳ ಐಡಿ ಕಾರ್ಡ್ ಕಡ್ಡಾಯವಾಗಿ ತರಬೇಕು ಬೆಳಗ್ಗೆ 9 ಗಂಟೆಗೆ ಮೈದಾನದಲ್ಲಿ ಹಾಜರಾಗಬೇಕು 9.30 ಕ್ಕೆ ಟೈಸ್ ಹಾಕಲಾಗುತ್ತದೆ ತೀರ್ಪುಗಾರರ ತೀರ್ಪು ಅಂತಿಮವಾಗಿರುತ್ತದೆ ಅಶಿಸ್ತು ಪ್ರದರ್ಶಿಸಿದ ತಂಡಗಳನ್ನು ತಕ್ಷಣವೇ ಅನರ್ಹಗೊಳಿಸಲಾಗುವುದು ಸ್ಥಳ :- ಜಿಲ್ಲಾ ಫುಟ್ಬಾಲ್ ಕ್ರೀಡಾಂಗಣ( ಮ್ಯಾನ್ಸ್ ಕಾಂಪೌಂಡ್ ) ಮಡಿಕೇರಿ ನಗರ ದಸರಾ ಕ್ರೀಡಾಕೂಟ ಸಮಿತಿ ಅಧ್ಯಕ್ಷರು ಪ್ರದೀಪ್ ಕರ್ಕೇರಾ 7338547897 ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಾವಣೆಗಾಗಿ ಸಂಪರ್ಕಿಸಬೇಕಾದ ಸಂಖ್ಯೆ 7019909495 9448976406 8971563246 9538156663 ಈ ಪಂದ್ಯಾವಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಆಗಮಿಸಿ ಯಶಸ್ವಿಗೊಳಿಸಿ ಕೊಡಬೇಕಾಗಿ ವಿನಂತಿ.