ಮಕ್ಕಳ ಸಂತೆ, ಅಂಗಡಿ, ಮಂಟಪ, ಛದ್ಮವೇಶ, ಕ್ಲೇ ಮಾಡೆಲಿಂಗ್ ಸ್ಪಧೆ೯ಗಳ ಆಯೋಜನೆ :ರೋಟರಿ ಮಿಸ್ಟಿ ಹಿಲ್ಸ್ ನಿಂದ ಸೆ.30 ರಂದು ಮಕ್ಕಳ ದಸರಾ

ಮಡಿಕೇರಿ: ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಸೆಪ್ಬೆಂಬರ್ 30 ರಂದು ಮಂಗಳವಾರ ನಗರದ ಗಾಂಧಿ ಮೈದಾನದಲ್ಲಿ 12 ನೇ ವಷ೯ದ ಮಕ್ಕಳ ದಸರಾ ಅಂಗವಾಗಿ ವಿವಿಧ ಸ್ಪಧೆ೯ಗಳನ್ನು ಆಯೋಜಿಸಲಾಗಿದೆ ಎಂದು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಮತ್ತು ಮಕ್ಕಳ ದಸರಾ ಸಂಚಾಲಕ ಅನಿಲ್ ಎಚ್.ಟಿ. ತಿಳಿಸಿದ್ದಾರೆ. ಮಕ್ಕಳ ದಸರಾ ಸ್ಪಧೆ೯ಗಳು ಸೆ 30 ರಂದು ಮಂಗಳವಾರ ಬೆಳಗ್ಗೆ 9.30 ಗಂಟೆಯಿಂದ ಗಾಂಧಿ ಮೈದಾನದಲ್ಲಿ ಪ್ರಾರಂಭವಾಗಲಿದೆ. ಮಕ್ಕಳ ಸಂತೆ ಮತ್ತು ಮಕ್ಕಳ ಅಂಗಡಿ - ಎಸ್ ಎಸ್ ಎಲ್ ಸಿ ಒಳಗಿನ ವಿದ್ಯಾಥಿ೯ಗಳಿಗಾಗಿ ಆಯೋಜಿತ ಮಕ್ಕಳ ಸಂತೆಯಲ್ಲಿ ಒಂದು ತಂಡದಲ್ಲಿ ಗರಿಷ್ಟ 5 ವಿದ್ಯಾಥಿ೯ಗಳು ಪಾಲ್ಗೊಳ್ಳಬಹುದು. ಸಂತೆಯಲ್ಲಿ ಗ್ರಾಮೀಣ ಪದಾಥ೯ಗಳ ಮಾರಾಟಕ್ಕೆ ಆದ್ಯತೆ ಇದೆ. ಮಕ್ಕಳ ಅಂಗಡಿಯಲ್ಲಿ ಗರಿಷ್ಟ ಇಬ್ಬರು ಸ್ಪಧಿ೯ಗಳಿಗೆ ಅವಕಾಶವಿದೆ. ಮಕ್ಕಳ ಮಂಟಪ - 10 ನಿಮಿಷದ ಪ್ರದಶ೯ನಾವಧಿಯುಳ್ಳ ಮಂಟಪ ಸ್ಪಧೆ೯ಯಲ್ಲಿ ಒಂದು ತಂಡದಲ್ಲಿ 6 ಮಕ್ಕಳು ಪಾಲ್ಗೊಳ್ಳಬಹುದು.
ಯಾವುದೇ ಕಾರಣಕ್ಕೂ ಮಂಟಪದಲ್ಲಿ ವಿದ್ಯುತ್ ಮತ್ತು ಬೆಂಕಿಯಂಥ ಅಪಾಯಕಾರಿ ವಸ್ತುಗಳನ್ನು ಬಳಸಿ ಪ್ರದಶ೯ನ ನೀಡುವಂತಿಲ್ಲ, ಛದ್ಮವೇಶ ಸ್ಪಧೆ೯ - ಎಲ್ ಕೆ.ಜಿ. ಮತ್ತು ಯುಕೆಜಿ ವಿದ್ಯಾಥಿ೯ಗಳ ವಿಭಾಗ, 1 ನೇ ತರಗತಿಯಿಂದ 4 ನೇ ತರಗತಿ,, 5 ರಿಂದ 7 ನೇ ತರಗತಿಗಳ ಮಕ್ಕಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ಛದ್ಮವೇಶ ಸ್ಪಧೆ೯ಗಳು ನಡೆಯಲಿದ್ದು, ವಸ್ತ್ರಾಲಂಕಾರಕ್ಕೆ ಆದ್ಯತೆಯಿದೆ. ಕ್ಲೇ ಮಾಡೆಲಿಂಗ್ - 5 ರಿಂದ 7 ನೇ ತರಗತಿ ಹಾಗೂ 8 ರಿಂದ 10 ನೇ ತರಗತಿ ವಿದ್ಯಾಥಿ೯ಗಳಿಗಾಗಿ ಕ್ಲೇ ಮಾಡೆಲಿಂಗ್ ಸ್ಪಧೆ೯ ಆಯೋಜಿತವಾಗಿದೆ. ಸೆ 30 ರಂದು ಮಂಗಳವಾರ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಸ್ಪಧಿ೯ಗಳು ಬೆಳಗ್ಗೆ 9 ಗಂಟೆಗೇ ಸರಿಯಾಗಿ ಹಾಜರಿರಬೇಕು. ಎಲ್ಲಾ ಸ್ಪಧೆ೯ಗಳು ಬೆಳಗ್ಗೆ 9.30 ಗಂಟೆಯಿಂದ ಪ್ರಾರಂಭವಾಗುತ್ತದೆ.
ಈ ಎಲ್ಲಾ ಸ್ಪಧೆ೯ಗಳಿಗೆ ಹೆಸರು ನೋಂದಾಯಿಸಲು ಕೊನೇ ದಿನಾಂಕ ಸೆಪ್ಟೆಂಬರ್ 20 , ಹೆಸರು ನೋಂದಾಯಿಸಲು ಸಂಪಕ೯ ಸಂಖ್ಯೆಗಳು - ಮಕ್ಕಳ ಸಂತೆ, - ಲೀನಾ ಪೂವಯ್ಯ- 9880316841., ಗಾನ ಪ್ರಶಾಂತ್ - 9449713748, ಮಕ್ಕಳಿಂದ ಅಂಗಡಿ ಸ್ಪಧೆ೯ - ಶಪಾಲಿ ರೈ - 9741523484, , ಭಾರತಿ ಪೂಜಾರಿ - 8971468131. ಚೇತನ ಜಯಂತ್ - 9740236481, ಮಕ್ಕಳಿಂದ ಮಂಟಪ - ರಶ್ಮಿ ಪ್ರವೀಣ್ 9902362038, ರಜನಿ 9481112397, , ಛದ್ಮವೇಶ ಸ್ಪಧೆ೯ - ನಮಿತಾರೈ 9448976405,, ಶಮ್ಮಿ ಪ್ರಭು 9449833179, ಕ್ಲೇ ಮಾಡೆಲಿಂಗ್ - ದಿವ್ಯಾ ಚೇತನ್ - 9538101863, ಪಲ್ಲವಿ ಪ್ರಸಾದ್ 9972963151