ನಾಲ್ವರನ್ನು ಬರ್ಬರವಾಗಿ ಹತ್ಯೆಗೈದ ವ್ಯಕ್ತಿಗೆ ಮರಣದಂಡನೆ ಶಿಕ್ಷೆ: ಐತಿಹಾಸಿಕ ತೀರ್ಪಿಗೆ ಸಾಕ್ಷಿಯಾಯಿತು ವಿರಾಜಪೇಟೆ ನ್ಯಾಯಾಲಯ
ವಿರಾಜಪೇಟೆ:ಹೊಂದಾಣಿಕೆಯ ಪತ್ನಿಯ ಅಕ್ರಮ ಸಂಬಂಧವೆಂದು ಸಂಶಯ ಪಟ್ಟು, ಪತ್ನಿ, ಮಗಳು ಅಜ್ಜ,ಅಜ್ಜಿಯನ್ನು ಕತ್ತಿಯಿಂದ ಕೊಚ್ಚಿ ಕೊಲೆಗೈದ ಆರೋಪಿಗೆ 2ನೇ ಅಪಾರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮರಣದಂಡನೆ ಶಿಕ್ಷೆ ಐತಿಹಾಸಿಕ ತೀರ್ಪು ನೀಡಿದೆ. ಕೇರಳ ರಾಜ್ಯದ ವಯನಾಡ್ ಜಿಲ್ಲೆಯ ಅಪ್ಪಪಾರೆ ನಿವಾಸಿ ಗಿರೀಶ್ ಎ.ಕೆ. ಪ್ರಾಯ (38) ವರ್ಷ ಮರಣದಂಡನೆ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಆರೋಪಿಯ ಹೊಂದಾಣಿಕೆ ಪತ್ನಿ ನಾಗಿ, ಜೇನುಕುರುಬರ ಕರಿಯಾ ( ನಾಗಿಯ ಅಜ್ಜ) ಗೌರಿ ( ನಾಗಿಯ ಅಜ್ಜಿ) ಕಾವೇರಿ ಪ್ರಾಯ 06 ವರ್ಷ ನಾಗಿ ಮತ್ತು ಮೊದಲ ಪತಿಗೆ ಜನಿಸಿದ ಮಗಳು ಆರೋಪಿ ಗಿರೀಶ್ ನಿಂದ ಕೊಲೆಯಾದ ದುರ್ಧೈವಿಗಳು.
(ಘಟನೆಯ ಸಂಕ್ಷಿಪ್ತ ವಿವರ ಸಂಜೆ ಪ್ರಕಟಿಸಲಾಗುವುದು)
