ಪಕ್ಕದ ಜಮೀನಿನವರ ವಿರುದ್ಧ ಕೇಸ್ ಹೂಡಲು ಮಗಳನ್ನೇ ಕೊಲೆ ಮಾಡಿದ ತಂದೆ!
5ಕಲಬುರಗಿ, ನ.21: ಪಕ್ಕದ ಜಮೀನಿನವರೊಂದಿಗೆ ನಡೆದಿದ್ದ ಜಮೀನು ವ್ಯಾಜ್ಯದ ಕಹಿ ಪ್ರತೀಕಾರವಾಗಿ ಸ್ವಂತ ವಿಕಲಚೇತನ ಮಗಳನ್ನೇ ಕೊಂದು ಅದನ್ನು ಆತ್ಮಹತ್ಯೆಯಂತೆ ಬಿಂಬಿಸಲು ತಂದೆಯೊಬ್ಬರು ಸಂಚು ರೂಪಿಸಿದ ಘಟನೆ ಕಲ್ಲಹಂಗರಗಾ ಗ್ರಾಮದಲ್ಲಿ ನಡೆದಿದೆ.
ಪ್ರಕರಣದಲ್ಲಿ ಸಬ್‌ಅರ್ಬನ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮೃತಳನ್ನು ಮಂಜುಳಾ (17) ಎಂದು ಗುರುತಿಸಲಾಗಿದ್ದು, ತಂದೆ ಗುಂಡೆರಾವ್ ನೀಲೂರ ಅವರೇ ಕೊಲೆಗೆ ಕಾರಣ ಎಂದು ತನಿಖೆ ದೃಢಪಡಿಸಿದೆ. ಮಗಳಿಗೆ ನೇಣು ಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಪಕ್ಕದ ಜಮೀನಿನವರ ಹೆಸರನ್ನು ಒಳಗೊಂಡ ಡೆತ್ನೋಟ್ ಬರೆದು ಮಗಳ ಕೈಗೆ ನೀಡಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಘಟನೆ ಅನುಮಾನಾಸ್ಪದವಾಗಿ ಕಂಡಿದ್ದರಿಂದ ಪೊಲೀಸರು ವಿಚಾರಣೆ ನಡೆಸಿದಾಗ ಪ್ರಕರಣ ನಿಜವಾಗಿ ಸಂಚು ಬಹಿರಂಗವಾಗಿದೆ. ಕೊಲೆ ಪ್ರಕರಣ ದಾಖಲಿಸಲಾಗಿದೆ.
