ಮರಗೋಡಿನಲ್ಲಿ ಫುಟ್ಬಾಲ್ ಕಡಿದು ವಿಕೃತಿ: ಆಟಗಾರರಲ್ಲಿ ಜೀವಭಯ

ಮರಗೋಡಿನಲ್ಲಿ ಫುಟ್ಬಾಲ್ ಕಡಿದು ವಿಕೃತಿ: ಆಟಗಾರರಲ್ಲಿ ಜೀವಭಯ

ಮರಗೋಡು: ಇಲ್ಲಿನ ಸರ್ಕಾರಿ‌ ಮಾದರಿ ಪ್ರಾಥಮಿಕ ಶಾಲಾ‌ ಮೈದಾನದಲ್ಲಿ ಆಡುತ್ತಿದ್ದಾಗ ಚೆಂಡು ತಮ್ಮ‌ಮನೆಯ ಅಂಗಳಕ್ಕೆ ಬಂದಿತೆಂದು ಕೋಪಗೊಂಡ ವ್ಯಕ್ತಿಯೊಬ್ಬರು ಫುಟ್ಬಾಲನ್ನೆ ಕಡಿದು ವಿಕೃತಿ‌ ಮೆರೆದಿರುವ ಘಟನೆ ನಡೆದಿದೆ. ಇಲ್ಲಿ ಬಿಸಿಲು‌ ಬಂತೆಂದು ಸ್ಥಳೀಯ ಮಕ್ಕಳು ಸಂಜೆ ಫುಟ್ಬಾಲ್ ಆಡಲು ಮುಂದಾಗಿದ್ದಾರೆ. ಈ ಸಂದರ್ಭ ಚೆಂಡು ಉರುಳುತ್ತಾ ಮೈದಾನದ‌ ಅಂಚಿನಲ್ಲೇ ಇರುವ ಮನೆಯತ್ತ ಹೋಗಿದೆ. ಇದರಿಂದ‌ ಕ್ರೋಧಗೊಂಡ ಮನೆ‌ ಮಾಲೀಕ‌ ಕೋಪಗೊಂಡು ಬಾಲನ್ನು ಕಡಿದು ಧ್ವಂಸಗೊಳಿಸಿದ್ದೂ ಅಲ್ಲದೆ, ಬಾಲಕರಿಗೆ ಹೀನಮಾನ ಬೈದಿದಿದ್ದಾನೆ ಎನ್ನಲಾಗಿದೆ. ಇದರಿಂದ ಬೆದರಿರುವ ಬಾಲಕರು ಜೀವಭಯದಿಂದ ಸುಮ್ಮನಾಗಿದ್ದಾರೆ. ಇದಕ್ಕೂ ಮೊದಲು ಹಲವು ಬಾರಿ ಅಂಗಳಕ್ಕೆ ಬಂದ‌ಬಾಲನ್ನು ಹಿಂದಿರುಗಿಸದೆ ಸತಾಯಿಸಿದ್ದೂ ಅಲ್ಲದೆ, ಬಾಲನ್ನು ಸಂಗ್ರಹಿಸಲು ಬರುವ ಬಾಲಕರಿಗೆ ನಾಯಿ ಬಿಟ್ಟು ಬೆದರಿಸುವ ಕೆಲಸವನ್ನೂ‌ ಮಾಡಿದ್ದಾರೆ ಎನ್ನಲಾಗಿದೆ. ಇಲ್ಲಿ‌ ಆಡುವ ಬಹುತೇಕ ಆಟಗಾರರು ಸಣ್ಣ ವಯಸ್ಸಿನವರಾಗಿದ್ದು ಕ್ಲಬ್ ಮಟ್ಟದ ಪಂದ್ಯಾವಳಿಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ. ಆದರೆ ಕ್ರೀಡೆಗೆ ಪ್ರೋತ್ಸಾಹ ನೀಡುವ‌ ಬದಲು ಬಾಲನ್ನು ಕಡಿದು ವಿಕೃತಿ‌ ಮೆರೆದಿರುವುದು ಸರಿಯಲ್ಲ ಎಂದು ಆಟಗಾರರ ಪೋಷಕರು ಅಸಮಾಧನ ವ್ಯಕ್ತಪಡಿಸಿದ್ದಾರೆ.