ಗುಡಿಸಲಿನಿಂದ ಮುಕ್ತಿ: ಸ್ವಂತ ಹಣದಲ್ಲೇ ಕಾರ್ಮಿಕ ದಂಪತಿಗಳಿಗೆ,ಮನೆ ನಿರ್ಮಿಣಿಕೊಟ್ಟು ಮಾನವೀಯತೆ ಮೆರೆದ ಗಣೇಶ್

(ವರದಿ: ಟಿ.ಜೆ. ಕಿಶೋರ್ ಕುಮಾರ್ ಶೆಟ್ಟಿ)
ವಿರಾಜಪೇಟೆ:ಸಮಾಜ ಉದ್ಧಾರವಾಗಬೇಕುಬಡತನದ ಬೇಗೆಯಿಂದ ಹೊರಬಂದ ವ್ಯಕ್ತಿಯ ಬಾಳು ಬೆಳಕಾಗಬೇಕುನ್ನುವ ಉದ್ದೇಶದಿಂದ ಸಮಾಜ ಸೇವಕರೊಬ್ಬರು ತಾನುಗಳಿಸಿ ಸಂಪಾದನೆಯ, ಅಲ್ಪ ಭಾಗವನ್ನು ಮನೆ ನಿರ್ಮಾಣ ಮಾಡಿ ಹಸ್ತಾಂತರ ಮಾಡಿರುವ ಅಪರೂಪದ ಘಟನೆ ವಿರಾಜಪೇಟೆ ಬಾಳುಗೋಡು ಗ್ರಾಮದ ಕಂಡಿಮಕ್ಕಿ ಕಾಲೋನಿಯಲ್ಲಿ ನಡೆದಿದೆ.
ವಿರಾಜಪೇಟೆ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳುಗೋಡು ಗ್ರಾಮ ಕಂಡಿಮಕ್ಕಿ ಪೂಕಾಡ್ ಪೈಸಾರಿ ಸರ್ವೆ ಸಂಖ್ಯೆ 236/01 ರಲ್ಲಿ ವಾಸವಿರುವ ಕಾರ್ಮಿಕ ದಂಪತಿಗಳಾದ ಪಿ.ಯು.ಕಿರಣ್ ಮತ್ತು ಪಿ.ಕೆ. ಬೋಜಮ್ಮ (ಜಾನ್ಸಿ) ಅವರಿಗೆ ವಿರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಂಘ ಅಧ್ಯಕ್ಷರು, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಬಿ.ಎಂ. ಗಣೇಶ್ ಅವರು, ಹೊಸ ಮನೆಯ ಕಿಲಿ ನೀಡುವ ಮೂಲಕ ದಂಪತಿಗಳಿಗೆ ಹಸ್ತಾಂತರ ಮಾಡಿದೆ.
ಶ್ರೀ ವಿದ್ಯಾ ವಿನಾಯಕ ಸೇವಾ ಸಮಿತಿ ಆರ್ಜಿ, ಪೆರುಂಬಾಡಿ, ಸಮಿತಿ ಮತ್ತು ಮನೆ ಪಡೆದುಕೊಂಡ ದಂಪತಿಗಳ ವತಿಯಿಂದ ಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿದ ಬಿ.ಎಂ.ಗಣೇಶ್ ಅವರು, ಕಾರ್ಮಿಕರು ಪ್ರಸ್ತುತ ಸ್ಥಿತಿಯಲ್ಲಿ ಅರ್ಥಿಕವಾಗಿ ಮುಂದುವರಿದಿದ್ದಾರೆ. ಅದರೇ ಉಳಿಕೆಯ ವಿಷಯದಲ್ಲಿ ಹಿಂದುಳಿದ್ದಾರೆ. ಮತ್ತು ಇತರ ದುಂದುವೆಚ್ಚಗಳಿಗೆ ಕಡಿವಾಣ ಹಾಕಬೇಕು. ಪ್ರಸ್ತುತ ದಿನಗಳಲ್ಲಿ ಕೂಲಿ 800 ರಿಂದ 1000 ರೂ ಪಡೆದುಕೊಂಡ ಮನೆಯ ನಿರ್ವಹಣೆ ಕಷ್ಟಸಾದ್ಯ ಎಂಬುದು ತಿಳಿಯುವುದು ತಪ್ಪು ಭಾವನೆಯಾಗಿದೆ. ಗಳಿಕೆಯಲ್ಲಿ ಅಲ್ಪ ಪ್ರಮಾಣದಲ್ಲಿ ಉಳಿತಾಯ ಮಾಡಿಕೊಂಡು ಬಂದಲ್ಲಿ ಗುಡಿಸಲು ಮನೆ ಸುಸಜ್ಜಿತ ಮನೆ ನಿರ್ಮಾಣ ಮಾಡಬಹುದಾಗಿದೆ. ತನಗೆ ಬರುವ ಹಣದಿಂದ ಸ್ವತ: ವೆಚ್ಚದಲ್ಲಿ ಬಡ ಕಾರ್ಮಿಕರಿಗೆ ವಿವಿಧ ಸ್ಥಳಗಳಲ್ಲಿ ನಾಲ್ಕು ಮನೆ ನಿರ್ಮಾಣ ಮಾಡಿ ಹಸ್ತಾಂತರ ಮಾಡಿದ್ದೇನೆ. ಅದೇ ರೀತಿಯಲ್ಲಿ ಸುಮಾರು ಏಳು ಮನೆಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇನೆ. ಸುಮಾರು ಎರಡು ತಿಂಗಳ ಅವಧಿಯಲ್ಲಿ ಎರಡು ಲಕ್ಷ ರೂಗಳ ವೆಚ್ಚದಲ್ಲಿ ಮನೆ ನಿರ್ಮಾಣ ಸಾಧ್ಯವಾಗಿದೆ. ಸೇವೆ ಎಂಬುದಕ್ಕೆ ಯಾವುದೇ ಇತಿಮಿತಿಗಳಿಲ್ಲ,ಕೊನೆಯೂ ಇಲ್ಲ. ಜಾತಿಯ ಪರಿಮಿತಿಗಳಿಲ ಅದರೇ ಸೇವೆ ಮಾಡುವ ಮನಸ್ಸು ಇರಬೇಕು ಅಷ್ಟೇ.ನನಗೆ ಬರುವ ಆದಾಯದ ಅಲ್ಪ ಪ್ರಮಾಣ ಹಣವನ್ನು ಸಮಾಜಮುಖಿ ಸೇವೆಗಾಗಿ ಮುಡಿಪಾಗಿಟ್ಟಿದ್ದೇನೆ. ನಿರ್ಗತಿಕರು ಬಾಳಬೇಕು. ಸ್ಥಾನಮಾನಗಳಿಂದ ಬದುಕು ಕಂಡುಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು. ಈ ಭಾಗದಲ್ಲಿ ಬಹುತೇಕ ಮಂದಿ ಕೂಲಿ ಕಾರ್ಮಿಕರಾಗಿದ್ದಾರೆ. ಕೆಲವು ಮನೆಗಳಿಗೆ ಶೌಚಾಲಯ ಇಲ್ಲದಾಗಿದೆ. ಸರ್ಕಾರ ಮತ್ತು ಸ್ಥಳೀಯ ಆಡಳಿತವು ಸಮಸ್ಯೆಯನ್ನು ಅರಿತು ಶೌಚಾಲಯ ನಿರ್ಮಾಣಕ್ಕೆ ಮುಂದಾಗಬೇಕ ಗಣೇಶ್ ಹೇಳಿದರು.
ಪೂಕಾಡ್ ಪೈಸಾರಿ, ಕಾಲೋನಿಯಲ್ಲಿ ಸಣ್ಣದಾಗಿ ಪ್ಲಾಸ್ಟಿಕ್ ಹೊದಿಕೆಯಿಂದ ಗುಡಿಸಲು ಮನೆಯಲ್ಲಿ ನಾವುಗಳು ವಾಸಿಸುತ್ತಿದ್ದೆವು. ನಾನು ಮತ್ತು ಪತ್ನಿ ಬೋಜಮ್ಮ ಸನಿಹದ ತೋಟಗಳಲ್ಲಿ ದಿನಕೂಲಿ ಕಾರ್ಮಿಕರಾಗಿ ದುಡಿಯುತ್ತಾ ಜೀವನ ಸಾಗಿಸುತಿದ್ದೇವೆ. ನಮಗೆ ಎರಡು ಗಂಡು ಮಕ್ಕಳಿದ್ದಾರೆ. ವಿದ್ಯಾಭ್ಯಾಸ ಕುಟುಂಬ ನಿರ್ವಹಣೆಯು ಕಷ್ಟಸಾಧ್ಯವಾಗಿತ್ತು. ಮನೆಯ ಪರಿಸ್ಥಿತಿಯನ್ನು ಗಮನಿಸಿದ ಗಣೇಶ್ ಅಣ್ಣಾ ಅವರು ಮನೆ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಭರವಸೆಯಂತೆ ಗುಡಿಸಲು ಮನೆಯನ್ನು ತೆರವುಗೊಳಿಸಿ ಶಾಶ್ವತ ಎರಡು ಕೋಣೆಯ ಮನೆಯನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ ಮನೆ ಪಡೆದುಕೊಂಡ ದಂಪತಿಗಳಾಗದ ಕಿರಣ್ ಮತ್ತು ಪಿ.ಕೆ. ಬೋಜಮ್ಮ ಹೇಳಿದರು.
ಮನೆ ಹಸ್ತಾಂತರ ಕಾರ್ಯಕ್ರಮದ ಮೊದಲಿಗೆ ರಿಬ್ಬನ್ ಕತ್ತರಿಸುವ ಮೂಲಕ ಗೃಹ ಪ್ರವೇಶ ಮಾಡಲಾಯಿತು. ಬಳಿಕ ಗ್ರಾಮಸ್ಥರು ಮನೆ ಪಡೆದುಕೊಂಡ ದಂಪತಿಗಳ ಕುಟುಂಬ ವರ್ಗ, ಸ್ನೇಹಿತರು ಸರ್ವರ ಸಮ್ಮುಖದಲ್ಲಿ ಬಿ.ಎಂ. ಗಣೇಶ ಅವರಿಗೆ ಸನ್ಮಾನ ಮಾಡಲಾಯಿತು.ಕಾರ್ಯಕ್ರಮದಲ್ಲಿ ಶ್ರೀ ವಿದ್ಯಾ ವಿನಾಯಕ ಸೇವಾ ಸಮಿತಿ ಆರ್ಜಿ, ಪೆರುಂಬಾಡಿ, ಸಮಿತಿಯ ಅಧ್ಯಕ್ಷರಾದ ಬಿ.ಎಂ. ಗಿರೀಶ್,ಜೀವನ್, ಟಿ.ಆರ್. ಗಣೇಶ್ ಹಾಗೂ ಪದಾಧಿಕಾರಿಗಳು, ಧಾನಿಗಳಾದ ಬಿ.ಎಂ. ಗಣೇಶ್ ಅವರ ಕುಟುಂಭ ವರ್ಗ, ಮನೆ ಪಡೆದುಕೊಂಡ ಪಿ.ಯು. ಕಿರಣ್ ದಂಪತಿಗಳು, ಕುಟುಂಬ ಸ್ನೇಹಿತರು, ಗ್ರಾಮಸ್ಥರು ಹಾಜರಿದ್ದರು.
What's Your Reaction?






