ಗೋಣಿಕೊಪ್ಪ:ಸಾಮಾಜಿಕ ಜಾಲತಾಣಗಳಲ್ಲಿ ಪತ್ರಕರ್ತ ಎಂದು ಹೇಳುತ್ತಾ ಗೊಂದಲ ಸೃಷ್ಟಿಸಿ: ಡಿ.ನಾಗೇಶ್ ಎಂಬಾತನನ್ನು ತರಾಟೆಗೆ ತೆಗೆದುಕೊಂಡ ಗ್ರಾ.ಪಂ ಸದಸ್ಯರು!

ಗೋಣಿಕೊಪ್ಪ: ಪತ್ರಕರ್ತ ಎಂದು ಹೇಳುತ್ತಾ ಸಾಮಾಜಿಕ ಜಾಲತಾಣದಲ್ಲಿ ಸಮಾಜದ ಶಾಂತಿ ಕದಡಲು ಮುಂದಾದ ನಾಗೇಶ್ ಡಿ ಎಂಬಾತನನ್ನು ಸಾರ್ವಜನಿಕರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಗೋಣಿಕೊಪ್ಪದಲ್ಲಿ ನಡೆದಿದೆ ೪೭ನೇ ದಸರಾ ಜನೋತ್ಸವ ಆಚರಣೆಯ ಸಮಿತಿಯ ಅಧ್ಯಕ್ಷರ ಆಯ್ಕೆಯ ಗೊಂದಲದಲ್ಲಿ ವಿನಾಕಾರಣ ಕೆಲವರ ಹೆಸರುಗಳನ್ನು ಪ್ರಸ್ತಾಪಿಸಿ ಇವರೇ ಕಾವೇರಿ ಸಮಿತಿಯ ಅಧ್ಯಕ್ಷ ಎಂದು ಸುಳ್ಳು ವರದಿ ಬಿತ್ತರಿಸಿರುವ ಆರೋಪ ಹಿನ್ನೆಲೆ ಸಾರ್ವಜನಿಕರು ಆತನನ್ನ ತೀವ್ರ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ. ಈತ ಪತ್ರಕರ್ತನಲ್ಲ, ಧಂದೆಕೋರ, ಸಮಾಜಘಾತಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡವನು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸಮಾಜದಲ್ಲಿ ನಕಲಿ ಪತ್ರಕರ್ತರು ಸಾಕಷ್ಟು ಜನ ಇದ್ದಾರೆ. ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮೂಲಕ ಬ್ಲಾಕ್ ಮೇಲ್ ತಂತ್ರ ಅನುಸರಿಸುತ್ತಿದ್ದಾರೆ. ಪತ್ರಕರ್ತರಿಗೆ ಇರಬೇಕಾದ ಗುಣಗಳು ಯಾವುದು ಇಂಥವರಲ್ಲಿ ಕಾಣಸಿಗುವುದಿಲ್ಲ. ಇವರು ಸಮಾಜಕ್ಕೆ ವಿಷಕಾರಿಯಾಗಿ ಪರಿಣಮಿಸುತ್ತಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಮಕೃಷ್ಣ ನಕಲಿ ಪತ್ರಕರ್ತ ನಾಗೇಶ್ ಡಿ ಮುಖವಾಡದ ಬಗ್ಗೆ ಅನಾವರಣ ಮಾಡಿದರು. ಕೆಲವು ತಿಂಗಳುಗಳ ಹಿಂದೆ ಮಹಿಳೆಯರ ಮೇಲೆ ಅಸಭ್ಯವಾಗಿ ವರ್ತಿಸಿ, ಜೈಲು ಸೇರಿದ ವ್ಯಕ್ತಿ, ಸಾಮಾಜಿಕ ಜಾಲತಾಣದಲ್ಲಿ ತಪ್ಪು ವರದಿಗಳನ್ನು ಬರೆದು ಪತ್ರಕರ್ತ ಎಂದು ಹೇಳಿಕೊಳ್ಳುತ್ತಿರುವುದು ಈ ಮುಜುಗರದ ವಿಚಾರ ಇದು ನೈಜ ಪತ್ರಕರ್ತರಿಗೆ ಕಳಂಕ ಎಂದು ಗ್ರಾಪಂ ಸದಸ್ಯೆ ಗೀತಾ, ರತಿ ಅಚ್ಚಪ್ಪ ಇನ್ನಿತರರು ನಾಗೇಶ್. ಡಿ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರಾಗಿ ಧ್ಯಾನ ಸುಬ್ಬಯ್ಯ ಆಯ್ಕೆ ಎಂಬ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಡುವ ಮೂಲಕ ಅಧ್ಯಕ್ಷರ ಆಯ್ಕೆಗೆ ನಡೆಯುತ್ತಿರುವ ಗೊಂದಲವನ್ನು ಮತ್ತಷ್ಟು ಉದ್ವಿಗ್ನತೆ ಉಂಟುಮಾಡಲು ಪ್ರಯತ್ನಿಸಿದ ಇತನ ಬಗ್ಗೆ ಪೊಲೀಸರಿಗೆ ದೂರು ನೀಡಿ ಎಂದು ಸಾರ್ವಜನಿಕರು ಎಚ್ಚರಿಕೆಯನ್ನು ನೀಡಿದರು.