ಊಟ ಬಡಿಸುವ ವಿಚಾರದಲ್ಲಿ ಪತಿ ಹಾಗೂ ಪತ್ನಿಯ ನಡುವೆ ಜಗಳ: ಪತ್ನಿಯನ್ನು ಗುದ್ದಲಿ ಕಾವಿನ ದೊಣ್ಣೆಯಿಂದ ಕೊಲೆ ಮಾಡಿದ್ದ ಪ್ರಕರಣ, ಆರು ವರ್ಷಗಳ ಬಳಿಕೆ ಪತಿಗೆ ಜೀವಾವಧಿ ಶಿಕ್ಷೆ ಪ್ರಕಟ

ಊಟ ಬಡಿಸುವ ವಿಚಾರದಲ್ಲಿ ಪತಿ ಹಾಗೂ ಪತ್ನಿಯ ನಡುವೆ ಜಗಳ: ಪತ್ನಿಯನ್ನು ಗುದ್ದಲಿ ಕಾವಿನ ದೊಣ್ಣೆಯಿಂದ ಕೊಲೆ ಮಾಡಿದ್ದ ಪ್ರಕರಣ, ಆರು ವರ್ಷಗಳ ಬಳಿಕೆ ಪತಿಗೆ ಜೀವಾವಧಿ ಶಿಕ್ಷೆ ಪ್ರಕಟ

ಗೋಣಿಕೊಪ್ಪ: ಊಟ ಬಡಿಸುವ ವಿಚಾರದಲ್ಲಿ ಪತಿ ಹಾಗೂ ಪತ್ನಿಯ ನಡುವೆ ಜಗಳವಾಗಿ ಪತ್ನಿಯನ್ನು ಗುದ್ದಲಿ ಕಾವಿನ ದೊಣ್ಣೆಯಿಂದ ಕೊಲೆ ಮಾಡಿದ್ದ ಪ್ರಕರಣದಲ್ಲಿ, ಆರು ವರ್ಷಗಳ ಬಳಿಕೆ ಪತಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ.

 ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ ನೋಡಿ👇:

2019ರ ಅಕ್ಟೋಬರ್ 13ರಂದು ಬೆಳಿಗ್ಗೆ 07.30 ಗಂಟೆಗೆ ಧನುಗಾಲ ಗ್ರಾಮದ ನಿವಾಸಿ ಮಾಚಿಮಾಡ ಸಿ.ದೇವಾನಂದರವರು ಗೋಣಿಕೊಪ್ಪ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದೂರುದಾರರ ಧನುಗಾಲ ಗ್ರಾಮದಲ್ಲಿರುವ ತೋಟದಲ್ಲಿನ ಲೈನು ಮನೆಯಲ್ಲಿ ಜೆ.ಕೆ. ಅರುಣ ಮತ್ತು ಸೀತಮ್ಮ ಹಾಗೂ ಅಶೋಕ ಮತ್ತು ಶಿವು ಮತ್ತು ಆತನ ಪತ್ನಿ ರೂಪಾ ರವರು ಪ್ರತ್ಯೇಕವಾಗಿ 3 ಕೋಣೆಗಳಲ್ಲಿ ವಾಸ ಮಾಡಿಕೊಂಡಿದರು. ಶಿವು ಮತ್ತು ಆತನ ಪತ್ನಿ ರೂಪಾ ರವರು ಬೇರೆ ಕಡೆಗಳಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.ಅದೇ ದಿನ ಬೆಳಿಗ್ಗೆ 6.30 ಗಂಟೆಗೆ ಲೈನು ಮನೆಯಲ್ಲಿ ವಾಸವಿರುವ ಅಶೋಕನು ತನ್ನ ಮನೆಗೆ ಬಂದು ಅರುಣನ ಮನೆಗೆ ನೆಂಟರಾಗಿ ಬಂದ ಶಿವು‌‌ ಪೆದ್ದನು ಹೆಂಡತಿ ರೂಪಾಳನ್ನು ಅವರ ಲೈನು ಮನೆಯಲ್ಲಿ ಕೊಲೆ ಮಾಡಿದ್ದಾರೆ ಎಂದು ಹೇಳಿದನ್ನು. ನಾನು ಕೂಡಲೇ ಹೊರಟು ಲೈನು ಮನೆಗೆ ಹೋಗಿ ನೋಡಲಾಗಿ, ರೂಪಾಳು ಅವರು ವಾಸವಿರುವ ಮನೆಯ ಕೋಣೆಯೊಳಗಡೆ ಮೃತಪಟ್ಟು ಬಿದ್ದಿದ್ದಳು. ನಂತರ ನಾನು ಘಟನೆಯ ಬಗ್ಗೆ ಅರುಣ ಮತ್ತು ಅಶೋಕನನ್ನು ಕೇಳಲಾಗಿ, ನಿನ್ನೆ ದಿನ ದಿನಾಂಕ 12/10/2019ರಂದು ರಾತ್ರಿ ಸಮಯ ಸುಮಾರು 9.00 ಗಂಟೆಗೆ ರೂಪಾ ಮತ್ತು ಶಿವು ಅವರ ಕೋಣೆಯಲ್ಲಿ ಊಟ ಬಡಿಸುವ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದು, ಶಿವು, ರೂಪಾಳನ್ನು ಗುದ್ದಲಿ ಕಾವಿನ ದೊಣ್ಣೆಯಿಂದ ರೂಪಾಳ ತಲೆ ಮತ್ತು ಶರೀರದ ಭಾಗಕ್ಕೆ ಹೊಡೆದಿದ್ದು, ನಂತರ ಅವರುಗಳು ರೂಮಿನಲ್ಲಿ ಮಲಗಿಕೊಂಡಿದ್ದು, ಈ ದಿನ ಬೆಳಿಗ್ಗೆ ನೋಡಲಾಗಿ ರೂಪಾಳು ಸತ್ತು ಹೋಗಿದ್ದಳು ಎಂದು ತಿಳಿಸಿದರು. ಶ್ರೀಮತಿ ರೂಪಾಳನ್ನು ಅವಳ ಗಂಡ ಶಿವು ಗುದ್ದಲಿ ಕಾವಿನ ದೊಣ್ಣೆಯಿಂದ ತಲೆ ಮತ್ತು ಶರೀರದ ಭಾಗಕ್ಕೆ ರೂಪಾಳ ಸಾಯುವಂತೆ ಹೊಡೆದು ಗಾಯ ನೋವು ಪಡಿಸಿ ಕೊಲೆ ಮಾಡಿದ್ದು, ಶಿವು ಪದ್ದುರವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕಾಗಿ ನೀಡಿದ ಪುಕಾರನ್ನು ಹೊಂದಿಕೊಂಡು ಗೋಣಿಕೊಪ್ಪ ಪೊಲೀಸ್ ಠಾಣೆ ಮೊ.ಸಂ.98/2019 ಕಲಂ 302 ಐ.ಪಿ.ಸಿ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಈ ಪ್ರರಣದ ತನಿಖೆಯನ್ನು ಈ ಹಿಂದೆ ಇದ್ದ ಗೋಣಿಕೊಪ್ಪ ವೃತ್ತ ನಿರೀಕ್ಷಕಕರಾದ ಸಿಪಿಐ ಸಿ.ಎನ್.ದಿವಾಕರ್ ರವರು ಮತ್ತು ಎಂ.ಎನ್.ರಾಮರೆಡ್ಡಿ, ಸಿಪಿಐ ರವರು ನಡೆಸಿ ತನಿಖೆ ಪೂರೈಸಿ ಠಾಣಾ ಎ/ನಂ/95/2019, ದಿನಾಂಕ 10/12/2019 ರಂತೆ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆಯನ್ನು ಮಾನ್ಯ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿರಾಜಪೇಟೆ ಇಲ್ಲಿ ಎಸ್.ಸಿ.ನಂ.5009/2020 ರಂತೆ ನಡೆಸಿದ್ದು, ಆರೋಪಿಯ ವಿರುದ್ಧ ಆರೋಪವು ಸಾಬೀತಾದ ಕಾರಣ ಮಾನ್ಯ ನ್ಯಾಯಾಧೀಶರಾದ ಶ್ರೀ.ಎಸ್.ನಟರಾಜುರವರು ದಿನಾಂಕ 16/08/2025 ರಂದು ಆರೋಪಿ ಶಿವು ಪದ್ದು ಪದ್ಮಕುಮಾರ್, ತಂದೆ ಪೌತಿ ಬಸವ, ಪ್ರಾಯ 38 ವರ್ಷ, ಕೂಲಿ ಕೆಲಸ, ವಾಸ ಕೆ/ಆ ಮಾಚಿಮಾಡ ಸಿ.ದೇವಾನಂದ, ಧನುಗಾಲ ಗ್ರಾಮ, ಮಾಯಮುಡಿ ಅಂಚೆ ಸ್ವಂತ ಊರು 5ನೇ ಬ್ಲಾಕ್, ನಾಗಾಪುರ, ಹುಣಸೂರು, ಮೈಸೂರು ಈತನನ್ನು ಅಪರಾಧಿ ಎಂದು ತಿರ್ಮಾನಿಸಿ ಕೇಸಿನ ಅಂತಿಮ ತೀರ್ಪು ನೀಡಿದ್ದು ಕಲಂ 302 ಐ.ಪಿ.ಸಿ. ಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ 25,000/-ರೂ ದಂಡ ವಿಧಿಸಿದ್ದು, ದಂಢ ಕಟ್ಟಲು ತಪ್ಪಿದ್ದಲ್ಲಿ 6 ತಿಂಗಳ ಕಠಿಣ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಶ್ರೀ ಯಾಸಿನ್ ಅಹಮ್ಮದ್ ರವರು ವಾದ ಮಂಡಿಸಿದ್ದರು.