ಎಸ್ಟೇಟ್ ಲೈನ್ ಮನೆಯಲ್ಲಿ ಪತ್ನಿಯ ಬರ್ಬರ ಹತ್ಯೆಗೈದ ಪತಿ: ಸುಂಟಿಕೊಪ್ಪ ಸಮೀಪದ ಅಂದಗೋವೆ ಪೈಸಾರಿಯಲ್ಲಿ ನಡೆದ ಘಟನೆ
ಮಡಿಕೇರಿ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆಗೈದಿರುವ ಘಟನೆ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಸಮೀಪದ ಅಂದಗೋವೆ ಗ್ರಾಮದಲ್ಲಿ ಘಟನೆ. ಸೋಮವಾರ ರಾತ್ರಿ ನಡೆದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಪತಿ ಮುತ್ತ(50) ಎಂಬಾತನಿಂದ ಪತ್ನಿ ಲತಾ(45) ಅವರನ್ನು ಹತೈಗೈದಿದ್ದಾರೆ.
ಮಾರಣಾಂತಿಕ ಹಲ್ಲೆ ನಡೆಸಿ ಪತ್ನಿ ಕೊಲೆ ಮಾಡಿದ್ದು ಸ್ಥಳಕ್ಕೆ ಸುಂಟಿಕೊಪ್ಪ, ಕುಶಾಲನಗರ ಪೊಲೀಸರ ಭೇಟಿ ನೀಡಿದ್ದು ಪೊಲೀಸರಿಂದಆರೋಪಿ ಮುತ್ತನನ್ನು ಬಂಧಿಸಲಾಗಿದೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಸ್ಥಳಕ್ಕೆ ಭೇಟಿ ನೀಡಿದ್ದು, ಕೊಲೆ ಕಾರಣ ಪತ್ತೆಗೆ ಪೊಲೀಸರಿಂದ ವಿಚಾರಣೆ ನಡೆಯುತ್ತಿದೆ. ಅಂದಗೋವೆಯ ಖಾಸಗಿ ಎಸ್ಟೇಟ್ ನ ಲೈನ್ ಮನೆಯಲ್ಲಿ ಘಟನೆ ನಡೆದಿದೆ.
