ಗದ್ದೆಗಳು ಉಳಿಯಬೇಕಾದರೆ ಊರವರು ಒಂದಾಗಬೇಕು: ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಅತ್ಯಗತ್ಯ:ಡಾ. ಶಾಸಕ ಮಂತರ್ ಗೌಡ

ಸುಂಟಿಕೊಪ್ಪ; ಗದ್ದೆಗಳು ಉಳಿಯಬೇಕಾದರೆ ಊರವರು ಒಂದಾಗಬೇಕು.ಆಗ ಇಂತಹ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಸಿಗಲಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಹೇಳಿದರು. ಸಮೀಪದ ಗದ್ದೆಹಳ್ಳದ ವೈ.ಯಂ.ಕರುಂಬಯ್ಯ ಅವರ ಗದ್ದೆಯಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾದ ' ಗದ್ದೆಹಳ್ಳಲಿ ಗದ್ದೆ ಆಟ'ದ ಸಾಂಪ್ರಾದಾಯಿಕ ಕ್ರೀಡಾಸ್ಪರ್ದೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ಯುವಜನಾಂಗ ಗದ್ದೆನಾಟಿ ಮಾಡುವ ಬಗ್ಗೆ ಕಾಳಜಿ ಇಲ್ಲದಿದ್ದರೂ ಹಿರಿಯರ ಮುಖಾಂತರ ಇಂತಹ ಕೆಸರು ಗದ್ದೆಯಲ್ಲಿ ಆಟವಾಡಲು ಅವಕಾಶ ಸಿಕ್ಕಿರುವುದು ಎಲ್ಲರ ಪುಣ್ಯ.ಓ ಕ್ರೀಡಾಕೂಟದಿಂದ ಜಾತಿ, ಧರ್ಮ ದೂರವಾಗಿ ಬಾಂಧವ್ಯ ಮೂಡಲು ಸಹಕಾರಿಯಾಗಲಿದೆ.ಯಾವುದೇ ಮೈದಾನದ ಅವಶ್ಯಕತೆ ಇಲ್ಲದೇ ಗದ್ದೆಯೇ ಗ್ರಾಮೀಣ ಕ್ರೀಡೆಗೆ ಮೈದಾನವಾಗಿದೆ ಎಂದರಲ್ಲದೆ ಇಂತಹ ಗ್ರಾಮೀಣ ಕ್ರೀಡೆಗಳು ಹೆಚ್ಚು ನಡೆಯಬೇಕು.ಸಂಬಂಧಗಳು ಗಟ್ಟಿಯಾಗಬೇಕು ಎಂದರು.
ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ,ಕೆಸರು ಗದ್ದೆ ಕ್ರೀಡಾಕೂಟ ಎಂಬುದು ಪ್ರಕೃತಿಯ ಮಣ್ಣು ಚಿಕಿತ್ಸೆಯಾಗಿದ್ದು, ನಮ್ಮ ಹಿರಿಯರು ಆಯಾ ಕಾಲಘಟ್ಟದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಂತಹ ಕ್ರೀಡೆಯ ಮೂಲಕ ಅಡಿಪಾಯ ಹಾಕಿಕೊಟ್ಟಿದ್ದಾರೆ.ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯಲ್ಲಿ ಜಾತಿ,ಮತ, ಜನಾಂಗಗಳ ನಡುವೆ ವಿವಿಧತೆಯಲ್ಲಿ ಏಕತೆಯನ್ನು ತರಲು ಕ್ರೀಡಾಕೂಟ ಪ್ರಭಲವಾದ ಸಾಧನ ಎಂದರಲ್ಲದೇ ಇಂತಹ ಕ್ರೀಡಾಕೂಟವನ್ನು ಮುಂದುವರೆಸಿ ಹೊಗುವುದರ ಮೂಲಕ ಗ್ರಾಮೀಣ ಕ್ರೀಡಾ ಪಟುಗಳನ್ನು ಗುರುತಿಸುವಂತಾಗಲಿ ಎಂದರು.
ಇದೇ ವೇಳೆಯಲ್ಲಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಭಾರತೀಯ ಮಹಿಳಾ ಬಾಸ್ಕೆಟ್ ಬಾಲ್ ತಂಡದ ಆಟಗಾರ್ತಿ, ಏಕಲವ್ಯ ಪ್ರಶಸ್ತಿ ವಿಜೇತೆ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆ ಪರಿಗಣಿತ ನವನೀತಾ ಕುಯಮುಡಿ ಅವರಿಗೆ ಶಾಸಕ ಮಂಥರ್ ಗೌಡ ಮತ್ತು ಮಾಜಿ ಸಚಿವ ಅಪ್ಪಚ್ಚು ರಂಜನ್ ಸನ್ಮಾನಿಸಿ ಗೌರವಿಸಿದರು.
ವೇದಿಕೆಯಲ್ಲಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಉಪಾಧ್ಯಕ್ಷೆ ಶಿವಮ್ಮ, ಸದಸ್ಯೆ ಮಂಜುಳ ಉಪಸ್ಥಿತರಿದ್ದರು. ಆಯೋಜಕ ತಂಡದ ನಿಡ್ಯಮನೆ ತೃಶಾಲ್ ಸನ್ಮಾನ್, ಪಟ್ಟಡಮನೆ ಹರ್ಷ,ಬೈಮನ ಚರಣ್, ಮೀನಾ ಚೇತನ್, ಎ.ಬಿ.ಸುಮನ, ಭಾರ್ಗವ ಇತರರು ಇದ್ದರು.
ಸ್ಪರ್ಧೆಯ ವಿಜೇತರು:
ಹಗ್ಗಜಗ್ಗಾಟ (ಮಹಿಳೆಯರು): ಗದೆಹಳ್ಳ ಮಹಿಳೆ ತಂಡ( ಪ್ರ),ಬಾಳೇಕಾಡು ತಂಡ( ದ್ವಿ) ಹಗ್ಗಜಗ್ಗಾಟ (ಪುರುಷರು): ಕಾರ್ಗಿಲ್ ತಂಡ( ಪ್ರ),ಡಾಲ್ಫಿನ್ ತಂಡ(ದ್ವಿ). ಓಟದ ಸ್ಪರ್ಧೆ; ಬಾಲಕಿಯರ ಮತ್ತು ಬಾಲಕರ ವಿಭಾಗ (12-17): ಜಗನ್, ಜಾನ್ವಿಕಾ(ಪ್ರ),ವೈ.ಸಿ.ಹೇಮಂತ್, ಲಿಪಿಕಾ(ದ್ವಿ), ವಿನಯ, ಸುಕನ್ಯಾ(ತೃ). ಬಾಲಕಿಯರ ವಿಭಾಗ (6-11): ಶಾಮನಿ, , ಕೋಶಲ್ ನಿಡ್ಯಮಲೆ(ದ್ವಿ),ಶನಿಫ್( ತೃ) ಪುರುಷರು (18-24):ಪ್ರಸಾದ್ (ಪ್ರ),ಅರ್ಪಿತ್( ದ್ವಿ) ರಝಿಕ್( ತೃ). ಮಹಿಳೆಯರು ,ಪುರುಷರು (25ಮೇಲ್ಪಟ್ಟು ): ಕರಿಯಪ್ಪ, ಸ್ಮಿತಾ (ಪ್ರ), ಸನ್ಮಾನ್, ನೋಬಿ ರನ್ರಥಾ(ದ್ಬಿ), ಮನಮೋಹನ್, ತಾರಾ(ತೃ). ಮಹಿಳೆಯರ ನಡೆಯುವ ಸ್ಪರ್ಧೆ (50): ಮಂಜುಳಾ( ಪ್ರ),ರೀಟಾ ದ್ವಿ),ಪಾರ್ವತಿ(ತೃ). ಇನ್ಮೀತರ ಮನೋರಂಜನ ಕ್ರೀಡೆಗಳ ವಿಜೇತರಿಗೂ ಬಹುಮಾನ ವಿತರಿಸಲಾಯಿತು.