ಕೆಸರುಗದ್ದೆ ಕ್ರೀಡಾಕೂಟ: ಕ್ರಿಕೆಟ್ ಪಂದ್ಯಾವಳಿಯಲ್ಲಿ ಆ್ಯಶಸ್ ಗೋಣಿಕೊಪ್ಪ ಚಾಂಪಿಯನ್

ಕಡಂಗ: ಪಾರಣೆ ಯೂತ್ ಕ್ರಿಕೆಟರ್ಸ್ ವತಿಯಿಂದ ಮೊದಲನೇ ವರ್ಷದ ಕೆಸರುಗದ್ದೆ ಕ್ರಿಕೆಟ್ ಹಾಗೂ ಹಗ್ಗ ಜಗ್ಗಾಟ ಕ್ರೀಡಾಕೂಟವನ್ನು ಕೊಣಂಜಗೇರಿ ಪಂಚಾಯಿತಿ ವ್ಯಾಪ್ತಿಯ ದಿವಂಗತ ಮುಕ್ಕಾಟಿರ ಪೊನ್ನಪ್ಪನವರ ಮತ್ತು ದೇರನರವರ ಗದ್ದೆಯಲ್ಲಿ ಆಯೋಜಿಸಲಾಗಿತ್ತು. ಕ್ರೀಡಾಕೂಟದ ಉದ್ಘಾಟನೆಯನ್ನು ಕೂತಂಡ ಬೋಪಯ್ಯ ಹಾಗೂ ಇಗ್ಗುಡ ಭೀಮಯ್ಯ ರವರು ನೆರವೇರಿಸಿದರು.
ಕ್ರಿಕೆಟ್ ಕ್ರೀಡಾಕೂಟದಲ್ಲಿ 35ಕ್ಕೂ ಹೆಚ್ಚು ತಂಡಗಳು ಭಾಗವಹಿಸಿ ಗೋಣಿಕೊಪ್ಪಲುವಿನ ಆ್ಯಶಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರು. ಬೆಟ್ಟಗೇರಿ ತಂಡ ದ್ವಿತೀಯ ಸ್ಥಾನ ಪಡೆಯಿತು. ಹಗ್ಗಜಗಾಟ ಕ್ರೀಡಾಕೂಟದಲ್ಲಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಿತು.
ಹಗ್ಗ ಜಗ್ಗಾಟದ ಆದರ್ಶ್ ಫ್ರೆಂಡ್ಸ್ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಕಗ್ಗೋಡ್ಲು ಫ್ರೆಂಡ್ಸ್ ತಂಡ ಪಡೆದುಕೊಂಡರು. ಮಹಿಳೆಯರ ವಿಭಾಗದ ಹಗ್ಗಜಗ್ಗಾಟದಲ್ಲಿ ಮಹಾದೇವಾ ಸ್ಪೋರ್ಟ್ಸ್ ಕ್ಲಬ್ ಬಲಮುರಿ ಪ್ರಥಮ ಹಾಗೂ ಹಾತೂರ್ ಫ್ರೆಂಡ್ಸ್ ರನ್ನರ್ಸ್ ಪ್ರಶಸ್ತಿ ಪಡೆದರು.
ಕ್ರೀಡಾಕೂಟ ದಲ್ಲಿ ಶಾಲಾ ವಿದ್ಯಾರ್ಥಿಗಳಿಗೂ ಹಾಗೂ ಸಾರ್ವಜನಿಕರಿಗೆ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕ್ರೀಡಾಕೂಟದ ಮುಖ್ಯ ಅತಿಥಿಗಳಾಗಿ ಬಟ್ಟಕಾಳಂಡ ರಾಜಾ ದಿನೇಶ್, ಕೂತಂಡ ಅಯ್ಯಪ್ಪ, ಇಗ್ಗುಡ ಲಾಲು ಚಿಣ್ಣಪ್ಪ ಭಾಗವಹಿಸಿದ್ದರು.