ಇಂಡಿಯಾ-ಶ್ರೀಲಂಕಾ ಇನ್ವಿಟೇಶನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕೊಡಗಿನ ಖದೀಜತ್ ನಶ್ವ ಸಾಧನೆ

ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು:ಚೆನ್ನೈನಲ್ಲಿ ನಡೆದ ಇಂಡಿಯಾ- ಶ್ರೀಲಂಕಾ ಇನ್ವಿಟೇಶನ್ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯ ಕಟ್ಟಾಸ್ ವಿಭಾಗದಲ್ಲಿ ನಾಪೋಕ್ಲು ಬಳಿಯ ಕೊಳಕೇರಿ ಗ್ರಾಮದ ಎಂ.ಬಿ.ಖದೀಜತ್ ನಶ್ವ ತೃತೀಯ ಸ್ಥಾನ ಪಡೆದಿದ್ದಾಳೆ. ನಾಪೋಕ್ಲುವಿನ ಅಂಕುರ್ ಆಂಗ್ಲ ಮಾಧ್ಯಮ ಶಾಲೆಯ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಖದೀಜತ್ ನಶ್ವ ಕೊಳಕೇರಿ ಕುವಲೇಕಾಡು ಗ್ರಾಮದ ನಿವಾಸಿ ಮಂಡಿಯನ್ ಬಶೀರ್ ಹಾಗೂ ಸಫ್ರೀನ ಬಶೀರ್ ದಂಪತಿಗಳ ಪುತ್ರಿ. ಖದೀಜತ್ ನಶ್ವ ಕರಾಟೆ ಮಾಸ್ಟರ್ ಎ. ಎನ್. ಶಿಹಾನ್ ಹಾಗೂ ಮೊಹಮ್ಮದ್ ಇಕ್ಬಾಲ್ ರವರಿಂದ ತರಬೇತಿ ಪಡೆದುಕೊಂಡಿದ್ದಾರೆ.