ಕುಶಾಲನಗರ:KSRTC ನೌಕರರ ಮುಷ್ಕರ: ಪ್ರಯಾಣಿಕರ ಪರದಾಟ

ಕುಶಾಲನಗರ:KSRTC ನೌಕರರ ಮುಷ್ಕರ:  ಪ್ರಯಾಣಿಕರ ಪರದಾಟ

ಕುಶಾಲನಗರ: ವಾಣಿಜ್ಯ ನಗರಿ ಕುಶಾಲನಗರಕ್ಕೆ KSRTC ನೌಕರರ ಮುಷ್ಕರದ ಬಿಸಿ ತಟ್ಟಿದ್ದು,ಕೆಎಸ್‌ಆರ್.ಟಿಸಿ ಬಸ್ಸ್ ಗಳು ರಸ್ತೆಗಿಳಿಯದ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡುತ್ತಿರುವ ದೃಶ್ಯ ಕುಶಾಲನಗರದಲ್ಲಿ ಕಂಡು ಬಂತು. ಬೆರಳೆಣಿಕೆಯಷ್ಟು ಬಸ್ಸ್ ಗಳು ಮಾತ್ರ ರಸ್ತೆಗಿಳಿದಿದ್ದು,ಬಹುತೇಕರು ಖಾಸಗಿ ಬಸ್ಸ್ ಗಳನ್ನೇ ಅವಲಂಬಿಸಿದ್ದಾರೆ. KSRTC ಬಸ್ಸ್ ಗಳ ರಸ್ತೆಗಿಳಿಯದ ಹಿನ್ನೆಲೆ ಕುಶಾಲನಗರಲ್ಲಿ ಖಾಸಗಿ ಬಸ್ಸ್ ಗಳ ಸೇವೆ ಆರಂಭಿಸಿದೆ.ಮಿನಿ ಬಸ್ಸ್,ವ್ಯಾನ್, ಮೈಸೂರು-ಹಾಸನ,ಪಿರಿಯಾಪಟ್ಟಣ,ಹುಣಸೂರು, ಭಾಗಗಳಿಗೆ ಕುಶಾಲನಗರದಿಂದ ಸಂಚರಿಸುತ್ತಿರುವ ದೃಶ್ಯ ಕಂಡು ಬಂತು.