ಚೆಂಬು ಗ್ರಾಮದ ಆನೆಹಳ್ಳ ಗಿರಜನ ಕಾಲೋನಿಗೆ ಶಾಸಕ‌‌ ಎ‌ಎಸ್ ಪೊನ್ನಣ್ಣ ಭೇಟಿ:ಕಾಲೋನಿಯ ವಿವಿಧ ಕಾಮಗಾರಿಗಳಿಗೆ 15ಲಕ್ಷಕ್ಕೂ ಅಧಿಕ ಮೊತ್ತದ ಅನುದಾನ ಘೋಷಣೆ

ಚೆಂಬು ಗ್ರಾಮದ ಆನೆಹಳ್ಳ ಗಿರಜನ ಕಾಲೋನಿಗೆ ಶಾಸಕ‌‌ ಎ‌ಎಸ್ ಪೊನ್ನಣ್ಣ ಭೇಟಿ:ಕಾಲೋನಿಯ ವಿವಿಧ ಕಾಮಗಾರಿಗಳಿಗೆ 15ಲಕ್ಷಕ್ಕೂ ಅಧಿಕ ಮೊತ್ತದ ಅನುದಾನ ಘೋಷಣೆ

ಸಂಪಾಜೆ: ಚೆಂಬು ಗ್ರಾಮದ ಆನೆಹಳ್ಳ ಗಿರಿಜನ ಕಾಲೋನಿಗೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿದರು. ಈ ಹಿಂದೆ ಹಲವು ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಇಲ್ಲಿನ ನಿವಾಸಿಗಳು ಶಾಸಕರಿಗೆ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಶಾಸಕರು ಕಾಲೋನಿಗೆ ಭೇಟಿ ನೀಡಿ ಎಲ್ಲರೊಂದಿಗೆ ಮಾತನಾಡುವ ಭರವಸೆಯನ್ನು ನೀಡಿದ್ದರು.

 ಕೊಟ್ಟ ಮಾತಿನಂತೆ ಆಗಮಿಸಿದ ಶಾಸಕರು ಎಲ್ಲರ ಸಮಸ್ಯೆಗಳನ್ನು ಆಲಿಸಿ, ಆದ್ಯತೆ ಮೇರೆಗೆ ಮೂಲಭೂತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು. ಸ್ಥಳದಲ್ಲೇ ಸದ್ರಿ ಕಾಲೋನಿಯ ಸುಮಾರು ₹15 ಲಕ್ಷಕ್ಕೂ ಅಧಿಕದ ಮೊತ್ತದ ವಿವಿಧ ಕಾಮಗಾರಿಗಳಿಗೆ ಅನುದಾನ ಘೋಷಿಸಿದರು ಮತ್ತು ಮಳೆ ನಿಂತ ಕೂಡಲೇ ಕಾಮಗಾರಿ ಪ್ರಾರಂಭಿಸಲು ಸೂಚಿಸಿದರು. ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್, ವಲಯ ಕಾಂಗ್ರೆಸ್ ಅಧ್ಯಕ್ಷರಾದ ರವಿರಾಜ್ ಹೊಸೂರು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.