ಕೊಡಗು ಮಾನವ-ವನ್ಯಪ್ರಾಣಿ ಸಂಘರ್ಷ ಉಪಶಮನ ಆಡಳಿತ ಮಂಡಳಿ ಸಭೆಯಲ್ಲಿ ಭಾಗವಹಿಸಿದ ಶಾಸಕ ಡಾ.ಮಂತರ್ ಗೌಡ

ಕೊಡಗು ಮಾನವ-ವನ್ಯಪ್ರಾಣಿ ಸಂಘರ್ಷ ಉಪಶಮನ ಆಡಳಿತ ಮಂಡಳಿ ಸಭೆಯಲ್ಲಿ ಭಾಗವಹಿಸಿದ ಶಾಸಕ ಡಾ.ಮಂತರ್ ಗೌಡ

ಬೆಂಗಳೂರು:8 ನೇ ಕೊಡಗು ಮಾನವ - ವನ್ಯಪ್ರಾಣಿ ಸಂಘರ್ಷ ಉಪ ಶಮನ (kodagu Man - Animal conflict mitigation foundation) ಪ್ರತಿಷ್ಠಾನ ನಿಧಿಯ ಆಡಳಿತ ಮಂಡಳಿಯ ಸಭೆ ಬೆಂಗಳೂರಿನ ವಿಕಾಸಸೌಧ ದಲ್ಲಿ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಸಚಿವರಾದ ಈಶ್ವರ ಖಂಡ್ರೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಕೊಡಗು ಮಾನವ - ವನ್ಯ ಪ್ರಾಣಿ ಸಂಘರ್ಷ ಉಪ ಶಮನ ಪ್ರತಿಷ್ಠಾನ ನಿಧಿಯ ಆಡಳಿತ ಮಂಡಳಿಯ ಸದಸ್ಯರು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ರವರು ಭಾಗವಹಿಸಿ ಸಭೆಯಲ್ಲಿ ಚರ್ಚೆ ನಡೆಸಿದರು. ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ ಉಪಸ್ಥಿತರಿದ್ದರು.