ಚೆರಿಯಪರಂಬುವಿನಲ್ಲಿ ಯಶಸ್ವಿಯಾಗಿ ನಡೆದ ಮಾಸಿಕ ನಾರಿಯತ್ ಸ್ವಲಾತ್ ಮಜ್ಲಿಸ್

ಚೆರಿಯಪರಂಬುವಿನಲ್ಲಿ ಯಶಸ್ವಿಯಾಗಿ ನಡೆದ ಮಾಸಿಕ ನಾರಿಯತ್ ಸ್ವಲಾತ್ ಮಜ್ಲಿಸ್

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ನಾಪೋಕ್ಲು ಬಳಿಯ ಚೆರಿಯಪರಂಬುವಿನ ಮುಹಿಯುದ್ದೀನ್ ಜುಮಾ ಮಸೀದಿ ಆಶ್ರಯದಲ್ಲಿ ನಡೆಸಿಕೊಂಡು ಬರುತ್ತಿರುವ ಮಾಸಿಕ ನಾರಿಯತ್ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. 

ಚೆರಿಯಪರಂಬು ದರ್ಗಾದ ಆವರಣದಲ್ಲಿ ನಡೆದ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮಕ್ಕೆ ಮುಹಮ್ಮದ್ ಶಫೀಕ್ ಅಲಿ ಸಿರಾಜಿ ಉಸ್ತಾದರು ನೇತೃತ್ವ ನೀಡಿದರು. 

ಕಾರ್ಯಕ್ರಮದಲ್ಲಿ ಇತ್ತೀಚಿಗೆ ಚಿಕ್ಕಮಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಮುಅಲ್ಲಿಮ್ ಮೆಹರ್ ಜಾನ್ ಸ್ಪರ್ಧೆಯ ಖುರಾನ್ ಕಿರಾಅತ್ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದು ಸಾಧನೆ ಮಾಡಿದ ಜಮಾಅತ್ತಿನ ಖತೀಬರಾದ ಪಿ. ವೈ.ಮುಹಮ್ಮದ್ ಶಫೀಕ್ ಅಲಿ ಸಿರಾಜಿ ಹಾಗೂ ರೇಂಜ್ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ರಫೀಕ್ ಸಖಾಫಿ,ಯಹಿಯ್ಯಾ ಸಖಾಫಿ ಅವರನ್ನು ಜಮಾಅತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 

ಚೆರಿಯಪರಂಬು ಜಮಾಅತ್ ಅಧ್ಯಕ್ಷರಾದ ಪಿ.ಎ.ಅಹಮದ್ ಅವರ ಅದ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಚೆರಿಯಪರಂಬು ಜಮಾಅತ್ ಪ್ರಧಾನ ಕಾರ್ಯದರ್ಶಿ ಪರವಂಡ ಸಿರಾಜ್, ಉಪಾಧ್ಯಕ್ಷ ಪಿ.ಎಂ ಇಬ್ರಾಹಿಂ, ಕೋಶಾಧಿಕಾರಿ ಪಿ.ಹೆಚ್ ಬಶೀರ್, ಸಹ ಕಾರ್ಯದರ್ಶಿ ಪಿ ಎಂ ಆಲಿ, ಸದಸ್ಯರಾದ ಪಿ.ಎಂ. ಅಶ್ರಫ್, ಪಿ.ಎಂ.ಮೊಯ್ದು ಕುಂಞಿ , ಅಬ್ದುಲ್ಲಾ ಸಅದಿ, ಸೇರಿದಂತೆ ಮತ್ತಿತರ ಪ್ರಮುಖರು,ಅಧಿಕ ಸಂಖ್ಯೆಯಲ್ಲಿಬಕ್ತಾಧಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಜಮಾಅತ್ ಪ್ರಧಾನ ಕಾರ್ಯದರ್ಶಿ ಪರವಂಡ ಸಿರಾಜ್ ಸ್ವಾಗತಿಸಿ, ಸರ್ವರನ್ನು ವಂದಿಸಿದರು.