ಕೊಡಗು ಪತ್ರಕತ೯ರ ಸಂಘದಿಂದ ಫೋಟೋ, ವಿಡಿಯೋ, ರೀಲ್ಸ್ ಸ್ಪಧೆ೯

ಕೊಡಗು   ಪತ್ರಕತ೯ರ ಸಂಘದಿಂದ ಫೋಟೋ, ವಿಡಿಯೋ, ರೀಲ್ಸ್ ಸ್ಪಧೆ೯

ಮಡಿಕೇರಿ :- ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಕೊಡಗು ಪತ್ರಕತ೯ರ ಸಂಘ (ರಿ) ದ ವತಿಯಿಂದ ಪತ್ರಕತ೯ರು, ಸಾವ೯ಜನಿಕರಿಗೆ ಫೋಟೋ, ವಿಡಿಯೋ, ರೀಲ್ಸ್ ಸ್ಪಧೆ೯ ಆಯೋಜಿಸಲಾಗಿದೆ ಎಂದು ಸಂಘದ ಪ್ರಧಾನ ಕಾಯ೯ದಶಿ೯ ಸುರೇಶ್ ಬಿಳಿಗೇರಿ ತಿಳಿಸಿದ್ದಾರೆ. ಕೊಡಗು ಪತ್ರಕತ೯ರ ಸಂಘದ ಗೌರವ ಸಲಹೆಗಾರರಾದ ಬಿ.ಜಿ.ಅನಂತ ಶಯನ ಅವರು ತಮ್ಮ ಪುತ್ರಿ ಡಾ. ಅನುಶ್ರೀ ಅವರ ಹ್ಯಾಪಿ ಟೀತ್ ಕ್ಲಿನಿಕ್ ಹೆಸರಲ್ಲಿ ಸ್ಥಾಪಿಸಿರುವ ಮಾನವೀಯ ಮೌಲ್ಯಗಳ ಕುರಿತಾದ ಅತ್ಯುತ್ತಮ ಫೋಟೋ ಸ್ಪರ್ಧೆಗಾಗಿ ಸ್ಪಧಿ೯ಗಳು. ಗರಿಷ್ಟ 3 ಫೋಟೋಗಳನ್ನು ಕಳುಹಿಸಬಹುದು.

 ಪತ್ರಕತ೯ರು ಸುದ್ದಿ ಚಿತ್ರಕ್ಕೆ (ನ್ಯೂಸ್ ಫೋಟೋ) ವಿಷಯಕ್ಕೆ ಸಂಬಂಧಿಸಿದಂತೆ ಗರಿಷ್ಟ 3 ಫೋಟೋಗಳನ್ನು ಕಳುಹಿಸಬಹುದು. ಜಲಲ ಜಲಧಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಪತ್ರಕತ೯ರು 1 ನಿಮಿಷ ಕಾಲಾವಧಿಯ ಹಿನ್ನಲೆ ಧ್ವನಿಯಿಲ್ಲದ, ಸುದ್ದಿ ಅಲ್ಲದ ,ವಿಡಿಯೋಕ್ಕೆ ಆದ್ಯತೆ ನೀಡಿರುವ 1 ವಿಡಿಯೋವನ್ನು ಕಳುಹಿಸಬಹುದು. ಸಾವ೯ಜನಿಕರು ಮಳೆಗಾಲದ ಸಂಕಷ್ಟ (ಫನ್ನಿ ಸೈಡ್, ಹಾಸ್ಯವಾಗಿ) ವಿಷಯಕ್ಕೆ ಸಂಬಂಧಿಸಿದಂತೆ 1 ನಿಮಿಷ ಕಾಲಮಿತಿಯಲ್ಲಿರುವ ಗರಿಷ್ಟ 3 ರೀಲ್ಸ್ ನ್ನು ಸ್ಪಧೆ೯ಗೆ ಕಳುಹಿಸಬಹುದಾಗಿದೆ. ಎಲ್ಲಾ ವಿಭಾಗದ ಸ್ಪಧಿ೯ಗಳು ತಮ್ಮ ಫೋಟೋ, ವಿಡಿಯೋ, ರೀಲ್ಸ್ ಗಳನ್ನು ಆಗಸ್ಟ್ 14 ರೊಳಗಾಗಿ 9449290718 ಸಂಖ್ಯೆಗೆ ವಾಟ್ಸಪ್ ಮೂಲಕ ಕಳುಹಿಸಬೇಕು. ವಾಟ್ಸಪ್ ನಲ್ಲಿಯೇ ತಮ್ಮ ಹೆಸರು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಕಳುಹಿಸಬೇಕು. ಸ್ಪಧೆ೯ ಸಂಬಂಧಿತ ಹೆಚ್ಚಿನ ಮಾಹಿತಿಗೆ ಸಂಪಕ೯ ಸಂಖ್ಯೆ - 9449290718 ಸುರೇಶ್ ಬಿಳಿಗೇರಿ,