ಕೊಡಗಿನ ಹಿರಿಯ ಕಾಫಿ ಬೆಳೆಗಾರ ಕೂತಂಡ ಪಿ. ಉತ್ತಪ್ಪ ಇನ್ನಿಲ್ಲ
ಮಡಿಕೇರಿ: ಟಾಟಾ ಕಾಫಿ ಸಂಸ್ಥೆ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್, ಕೊಡವ ವಿದ್ಯಾ ನಿಧಿ, ಭಾರತೀಯ ವಿದ್ಯಾ ಭವನ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ಕೊಡಗಿನ ಹಿರಿಯ ಕಾಫಿ ಬೆಳೆಗಾರ ಕೆ. ಪಿ. ಉತ್ತಪ್ಪ ನಿಧನರಾಗಿದ್ದಾರೆ. ಪಾಲಿಬೆಟ್ಟದಲ್ಲಿ ನೆಲಸಿದ್ಧ ಉತ್ತಪ್ಪ ಅವರು ನಿನ್ನೆ ಮಡಿಕೇರಿಯಲ್ಲಿ ದಿಢೀರ್ ಅಸ್ವಸ್ತಗೊಂಡಿದ್ದರು. ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೆ ಇಂದು ಮಧ್ಯಾಹ್ನ ಕೊನೆ ಉಸಿರು ಎಳೆದಿದ್ದಾರೆ.