ಸಿದ್ದಾಪುರ:ಗಾಂಜಾ ಸೇವಿಸಿ ಅನುಚಿತ ವರ್ತನೆ ತೋರಿದ ಐವರ ಬಂಧನ

ಸಿದ್ದಾಪುರ: ಗಾಂಜಾ ಸೇವಿಸಿ ಅನುಚಿತವಾಗಿ ವರ್ತಿಸಿದ ಆರೋಪದಡಿ ಐವರ ಯುವಕರನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.ಇಂಜಲಗೆರೆ ಗ್ರಾಮದ ನಿವಾಸಿ ರನೀಶ್ (35),ಕರಡಿಗೋಡು ಗ್ರಾಮ ದ ಸುರೇಶ್ ಕುಮಾರ್(29), ಹಾಗೂ ಹರೀಶ್ (26),ಅಮ್ಮತ್ತಿ ಮುಕ್ಕಟ್ಟಿಕೊಪ್ಪ ಗ್ರಾಮದ ಜಿ.ಶಿವಕುಮಾರ(22) ಹಾಗೂ ಗುಹ್ಯಗ್ರಾಮದ ಎನ್,ಆರ್ ರಂಜಿತ್ (27)ಬಂಧಿತರು.
ಸಿದ್ದಾಪುರದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಬಸ್ ತಂಗುದಾಣದಲ್ಲಿ ಕುಳಿತುಕೊಂಡು ಜೋರಾಗಿ ಬೊಬ್ಬೆ ಹಾಕುತ್ತಾ ಕಿರುಚಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಸಿದ್ದಾಪುರ ಠಾಣೆಗೆ ಮಾಹಿತಿ ನೀಡಿದರೆ ಗಸ್ತಿನಲ್ಲಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಮಾದಕ ವಸ್ತು ಸೇವಿಸಿರುವುದು ಗಮನಕ್ಕೆ ಬಂದಿದೆ. ನಂತರ ಅವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಮುಂದೆ ಹಾಜರುಪಡಿಸಿದಾಗ ಯುವಕರು ಗಾಂಜಾ ಸೇವಿಸಿರುವ ಬಗ್ಗೆ ವೈದ್ಯಾಧಿಕಾರಿ ದೃಢೀಕರಿಸಿದ್ದಾರೆ. ನಂತರ ಇವರನ್ನು ಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ,ಪಿ.ಎಸ್.ಐ ಶಿವಣ್ಣ, ಸಿಬ್ಬಂದಿಗಳಾದ ಮಣಿಕಂಠ, ಪ್ರಸನ್ನ, ಹಾಜರಿದ್ದರು.
What's Your Reaction?






