ಸಿದ್ದಾಪುರ:ಅಂಗಡಿಗೆ ತೆರಳುತ್ತಿದ್ದ ಪಾದಚಾರಿಗಳ ಮೇಲೆ ತಗುಲಿದ ಗುಂಡು
ಸಿದ್ದಾಪುರ : ಅಂಗಡಿಗೆ ತೆರಳುತ್ತಿದ್ದ ಪಾದಚಾರಿಗಳ ಮೇಲೆ ಆಕಸ್ಮಿಕವಾಗಿ ಬಂದೂಕಿನಿಂದ ಸಿಡಿದ ಗುಂಡಿನ ಚೂರುಗಳು ತಗುಲಿ ಗಾಯಗೊಂಡ ಘಟನೆ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ನಡೆದಿದೆ.
ಅತ್ತಿಮಂಗಲ ಸಮೀಪದ ಸಂಪಿಗೆ ಕೊಲ್ಲಿಯ ಖಾಸಗಿ ತೋಟದ ಲೈನ್ ಮನೆ ನಿವಾಸಿ ಸತೀಶ್, ಗುಡ್ಡೆಹೊಸೂರು ನಿವಾಸಿ ಮಿಟ್ಟು ಸೇರಿ ಮೂವರು ಅತ್ತಿಮಂಗಲದಿಂದ ಮುಖ್ಯ ರಸ್ತೆಯ ಮೂಲಕ ರಾತ್ರಿ 7 ಗಂಟೆಗೆ ಅಂಗಡಿಗೆಂದು ತೆರಳುತ್ತಿದ್ದ ಸಂದರ್ಭದಲ್ಲಿ ದಿಢೀರನೆ ತೋಟದ ಒಳಗಿನಿಂದ ಬಂದೂಕಿನ ಶಬ್ದ ಕೇಳಿಬಂದಿದೆ ಕ್ಷಣದಲ್ಲೇ ಸತೀಶನ ಭುಜಕ್ಕೆ ಗುಂಡಿನ ಚೂರು ತಗುಲಿದೆ. ಅಲ್ಲದೆ ಜೊತೆಯಲ್ಲಿದ್ದ ಮಿಟ್ಟು ದಳ ಎಂಬಾತನ ಕೆನ್ನೆ, ಭುಜ, ಬೆನ್ನಿಗೆ ತಗುಲಿದ ಪರಿಣಾಮ ಮಿಟ್ಟು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ಕೂಡಲೇ ಸ್ಥಳೀಯ ಸ್ನೇಹಿತನಿಗೆ ಮಾಹಿತಿ ತಿಳಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಸ್ನೇಹಿತ ಕೂಡಲೇ ಸಿದ್ದಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಗಾಯಗೊಂಡವರನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆಗೆ ದಾಖಲಿಸಿದ ನಂತರ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ದಾಖಲಿಸಲಾಯಿತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
