ಹೆತ್ತ ಮಕ್ಕಳನ್ನೇ ಬಿಡಲಿಲ್ಲ ಪಾಪಿ ತಂದೆ:ಚಿತ್ರದುರ್ಗದಲ್ಲಿ ಅಮಾನವೀಯ ಘಟನೆ
ಚಿತ್ರದುರ್ಗ: ಮದ್ಯದ ನಶೆಯಲ್ಲಿ ಇಬ್ಬರು ಅಪ್ರಾಪ್ತ ಪುತ್ರಿಯರ ಮೇಲೆಯೇ ದೌರ್ಜನ್ಯ ಎಸಗಿನ ತಂದೆಯೊಬ್ಬನ ಅಮಾನವೀಯ ವರ್ತನೆ ಚಿತ್ರದುರ್ಗದಲ್ಲಿ ನಡೆದಿದೆ.
13 ಮತ್ತು 10 ವರ್ಷದ ಹೆಣ್ಣುಮಕ್ಕಳನ್ನು ಜಮೀನಿಗೆ ಕರೆದೊಯ್ದು ಅತ್ಯಾಚಾರ ಮಾಡಿರುವ ಆರೋಪ ಎದುರಿಸಿಕೊಂಡಿರುವ ಮಂಜುನಾಥ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ, ಮಕ್ಕಳನ್ನು ಶಾಲೆಗೆ ಕಳುಹಿಸದೇ ಇರಿಸುತ್ತಿದ್ದ ವಿಷಯವನ್ನು ಶಿಕ್ಷಕರೇ ಗಮನಿಸಿದ್ದರಿಂದಲೇ ಪ್ರಕರಣ ಹೊರಬಿದ್ದಿದೆ. ಮಕ್ಕಳ ಹೇಳಿಕೆ ಆಧಾರದಲ್ಲಿ ತನಿಖೆ ಆರಂಭಗೊಂಡಿದ್ದು, ವೈದ್ಯಕೀಯ ಪರೀಕ್ಷೆಗೂ ಅವರನ್ನು ಒಳಪಡಿಸಲಾಗಿದೆ.
ಆರೋಪಿಯ ತಾಯಿ ಕೂಡಾ “ಮಂಜುನಾಥ್ ಹಿಂದೆ ನನ್ನ ಮೇಲೂ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ. ಮಗನ ನಡೆ ಕುರಿತು ಮಕ್ಕಳ ಬಗ್ಗೆ ಯಾವಾಗಲೂ ಚಿಂತೆಯೇ ಇತ್ತು,” ಎಂದು ಗಂಭೀರ ಆರೋಪ ಮಾಡಿದ್ದಾರೆ. ಇಂಥ ನೀಚತನದ ವರ್ತನೆಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, “ತಂದೆಯೇ ಪುತ್ರಿಯರ ಮೇಲೆ ದೌರ್ಜನ್ಯ ನಡೆಸಿರುವುದು ನಾಚಿಕೆಯ ಸಂಗತಿ. ಇಂಥ ಘಟನೆ ಊರಿನಲ್ಲಿ ಮೊದಲಬಾರಿ. ಆರೋಪಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು,” ಎಂದು ಎಸ್‌ಪಿ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಜಾರಿಯಲ್ಲಿದೆ.
