ಮೆಕೇರಿ:ಕೆಲಸ ಮಾಡುತ್ತಿದ್ದ ರೆಸಾರ್ಟ್ ನಲ್ಲೇ ಕಳ್ಳತನ ಮಾಡಿ ಸಿಕ್ಕಿಬಿದ್ದ ಸಿಬ್ಬಂದಿ

ಮಡಿಕೇರಿ: ಮೇಕೇರಿಯ ಕೂರ್ಗ್ ವೈಲ್ಡರ್‌ನೆಸ್ ರೆಸಾರ್ಟ್ ನಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಪತ್ತೆಹಚ್ಚಿದ್ದು, ಕೃತ್ಯವೆಸಗಿದ ಅದೇ ರೆಸಾರ್ಟ್ ಸಿಬ್ಬಂದಿಯನ್ನು ವಶಪಡಿಸಿಕೊಂಡಿದ್ದಾರೆ. ಸೋಮವಾರಪೇಟೆ ನಿವಾಸಿ ಎ.ಐ. ಮುಸ್ತಾಫ ಬಂದಿತ ಆರೋಪಿ. ಆಗಸ್ಟ್ 01ರಂದು 15 ಬಗ್ಗಿ ವಾಹನದ 76 ಹಳೆಯ ಹಾಗೂ 6 ಹೊಸ ಬ್ಯಾಟರಿಗಳು ಕಳವಾಗಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿ ಮುಸ್ತಾಫನನ್ನು ಬಂಧಿಸಿ 80ಸಾವಿರ ಹಣ, 02 ಎಲೆಕ್ಟ್ರಿಕ್ ಬ್ಯಾಟರಿ, ಮೊಬೈಲ್ ಹಾಗೂ ಮೋಟಾರ್ ಸೈಕಲ್ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಗ್ರಾಮಾಂತರ ಇನ್ಸ್ಪೆಕ್ಟರ್ ಚಂದ್ರಶೇಖರ್ ಹಾಗೂ ತಂಡ, ಅಪರಾಧ ಪತ್ತೆದಳ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.