ಶ್ರೀಮಂಗಲ ಎಪಿಐಸಿಎಂ ಎಸ್ ಅಧ್ಯಕ್ಷರಾಗಿ ತಡಿಯಂಗಡ ಕರುಂಬಯ್ಯ, ಉಪಾಧ್ಯಕ್ಷರಾಗಿ ಅಜ್ಜಮಾಡ ತಮ್ಮಯ್ಯ ಆಯ್ಕೆ

ಶ್ರೀಮಂಗಲ ಎಪಿಐಸಿಎಂ ಎಸ್ ಅಧ್ಯಕ್ಷರಾಗಿ ತಡಿಯಂಗಡ ಕರುಂಬಯ್ಯ, ಉಪಾಧ್ಯಕ್ಷರಾಗಿ ಅಜ್ಜಮಾಡ ತಮ್ಮಯ್ಯ ಆಯ್ಕೆ

ಪೊನ್ನಂಪೇಟೆ:ಶ್ರೀಮಂಗಲ ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘ (ಎಪಿಸಿಎಂಎಸ್) ಇದರ 2025 ರಿಂದ 2030 ನೇ ಅವಧಿಗೆ ಆಡಳಿತ ಮಂಡಳಿ ಚುನಾವಣೆಯಲ್ಲಿ ಎಲ್ಲಾ ನಿರ್ದೇಶಕರುಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ತಡಿಯಂಗಡ ಕರುಂಬಯ್ಯ(ಕಂಬ), ಉಪಾಧ್ಯಕ್ಷರಾಗಿ ಅಜ್ಜಮಾಡ ಸಿ ತಮ್ಮಯ್ಯ(ಪ್ರಮೋದ್), ನಿರ್ದೇಶಕರಾಗಿ ಎನ್ ಎಂ ರಾಜೇಶ್, ಎಂ.ಎಂ. ಮುತ್ತಪ್ಪ, ಪೆಮ್ಮಂಡ ಎನ್. ಕುಶಾಲಪ್ಪ ಹೆಚ್ ಎಸ್ ಅಯ್ಯಪ್ಪ,ಪಿ ಎಲ್ ಭರತ್, ಅಲ್ಲುಮಾಡ ಡೇಝಿ ತಿಮ್ಮಯ್ಯ, ಅಜ್ಜಮಾಡ ಪಿ ಸಾವಿತ್ರಿ, ಬಿ.ಜಿ. ವೆಂಕಟೇಶ್ ಪ್ರಸಾದ್, ಕಳ್ಳಂಗಡ ರಜಿತ್ ಪೂವಣ್ಣ, ಕೆ ಅರುಣ್ ಭೀಮಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.