ಸುಂಟಿಕೊಪ್ಪ ಜ್ಯುವೆಲರಿ ಅಂಗಡಿಯಲ್ಲಿ ಕಳ್ಳತನ: ಮೂವರು ಖತರ್ನಾಕ್ ಮಹಾರಾಷ್ಟ್ರ ಮೂಲದ ಕಳ್ಳಿಯರು ಅಂದರ್

ಸುಂಟಿಕೊಪ್ಪ: ಪೊಲೀಸ್ ಠಾಣಾ ವ್ಯಾಪ್ತಿಯ ಸುಂಠಿಕೊಪ್ಪ ನಗರದಲ್ಲಿನ ಫ್ಯಾಷನ್ ಜ್ಯುವೆಲರಿಯಲ್ಲಿ ದಿನಾಂಕ: 14-09-2025 ರಂದು 03 ಜನ ಅಪರಿಚಿತ ಮಹಿಳೆಯರು ಚೆನ್ನಾಭರಣ ಖರೀದಿಸುವ ನೆಪದಲ್ಲಿ ಅಂಗಡಿಗೆ ಭೇಟಿ ನೀಡಿ ಅಂಗಡಿಯವರ ಗಮನಕ್ಕೆ ಬಾರದಂತೆ ಅಂದಾಜು 22 ಗ್ರಾಂ ತೂಕದ 02 ಚಿನ್ನದ ಸರವನ್ನು ಕಳವು ಮಾಡಿರುವ ಕುರಿತು ದೂರು ಸ್ವೀಕರಿಸಿದ್ದು, ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಕಲಂ: 305(ಎ) ಬಿಎನ್ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ. ಸದರಿ ಪ್ರಕರಣದ ಆರೋಪಿಗಳನ್ನು ಶ್ರೀ ಚಂದ್ರಶೇಖರ್.ಪಿ. ಡಿಎಪಿ, ಸೋಮವಾರಪೇಟೆ ಉಪವಿಭಾಗ, ಶ್ರೀ ದಿನೇಶ್ ಕುಮಾರ್, ಸಿಪಿಐ, ಕುಶಾಲನಗರ ವೃತ್ತ, ಶ್ರೀ ಮೋಹನ್ ರಾಜು.ಪಿ, ಪಿಎಸ್‌ಐ, & ಶ್ರೀಮತಿ ಭಾರತಿ.ಕೆ.ಹೆಚ್, ಪಿಎಸ್‌ಐ, ಸುಂಟಿಕೊಪ್ಪ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ವಿಶೇಷ ತನಿಖಾ ತಂಡ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿ: 22-09-2025 ರಂದು ಮಹಾರಾಷ್ಟ್ರ ರಾಜ್ಯ ಸಾಂಗಲಿ ಜಿಲ್ಲೆ ಮೂಲದ ಈ ಕೆಳಕಂಡ 03 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.
ಆರೋಪಿಗಳ ವಿವರ;
1. ಅಲ್ಪನಾ. 37 ವರ್ಷ, ಸಾಂಗಲಿ ಜಿಲ್ಲೆ, ಮಹಾರಾಷ್ಟ್ರ ರಾಜ್ಯ 2. ಬಭಿತಾ, 47 ವರ್ಷ, ಸಾಂಗಲಿ ಜಿಲ್ಲೆ, ಮಹಾರಾಷ್ಟ್ರ ರಾಜ್ಯ, 3. ಪೂಜಾ, 29 ವರ್ಷ, ಸಾಂಗಲಿ ಜಿಲ್ಲೆ, ಮಹಾರಾಷ್ಟ್ರ ರಾಜ್ಯ
ವಶಪಡಿಸಿಕೊಂಡ ಸ್ವತ್ತುಗಳ ವಿವರ: 22.180 ಗ್ರಾಂ ತೂಕದ 02 ಚಿನ್ನದ ಸರಗಳು.
ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಶ್ರೀ ಕೆ.ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಮತ್ತು ಶ್ರೀ ದಿನೇಶ್ ಕುಮಾರ್.ಬಿ.ಪಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರು ಶ್ಲಾರ್ಘಸಿರುತ್ತಾರೆ.