ಹಿಂದೂ ಜಾಗರಣ ವೇದಿಕೆ ವತಿಯಿಂದ ಆಗಸ್ಟ್ 08 ರಿಂದ 14ರವರೆಗೆ ಪಂಜಿನ ಮೆರವಣಿಗೆ

ಹಿಂದೂ ಜಾಗರಣ ವೇದಿಕೆ ವತಿಯಿಂದ ಆಗಸ್ಟ್ 08 ರಿಂದ 14ರವರೆಗೆ ಪಂಜಿನ ಮೆರವಣಿಗೆ

ಮಡಿಕೇರಿ: ಸ್ವಾತಂತ್ರೋತ್ಸವದ ಪ್ರಯುಕ್ತ ಕೊಡಗಿನ ಏಳು ಕಡೆಗಳಲ್ಲಿ ಹಿಂದು ಜಾಗರಣ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಪಂಜಿನ ಮೆರವಣಿಗೆ ಕಾರ್ಯಕ್ರಮ ಆ.8ರಿಂದ ಆ.14ರವರೆಗೆ ಆಯೋಜಿಸಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ದೇಶಪ್ರೇಮಿಗಳು ಪಾಲ್ಗೊಳ್ಳಬೇಕು ಎಂದು ಸಮಿತಿ ಜಿಲ್ಲಾ ಸಂಯೋಜಕರಾದ ರಂಜನ್‌ಗೌಡ(ಬೋಜೇಗೌಡ) ಮನವಿ ಮಾಡಿದರು.

 ಸ್ವಾತಂತ್ರ‍್ಯ ದಿನಾಚರಣೆಯ ಅಂಗವಾಗಿ ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ಹಲವು ವರ್ಷಗಳಿಂದ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಆ.8ರಂದು ಸಂಜೆ 6 ಗಂಟೆಗೆ ಮಡಿಕೇರಿ ನಗರದ ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಪಂಜಿನ ಮೆರವಣಿಗೆ ಆರಂಭಗೊಂಡು ಇಂದಿರಾ ಗಾಂಧಿ ವೃತ್ತ, ಅಂಚೆ ಕಛೇರಿ, ಜನರಲ್ ತಿಮ್ಮಯ್ಯ ವೃತ್ತಕ್ಕಾಗಿ ಹಾದು ಹೋಗಿ ಕೊಡವ ಸಮಾಜ ಸಭಾಂಗಣದಲ್ಲಿ ಸಂಜೆ 7.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಆ.9 ರಂದು ಸಚಿಜೆ 6 ಗಂಟೆಗೆ ಜಂಬೂರು ಎಫ್.ಎಂ.ಸಿ. ಬಡಾವಣೆಯಿಂದ ಪಜಿನ ಮೆರವಣಿಯು ಹೊರಟು ಮಾದಾಪುರ ಪಟ್ಟಣಕ್ಕಾಗಿ ಶ್ರೀ ಗಣಪತಿ ದೇವಾಲಯದಲ್ಲಿ 7.30ಕ್ಕೆ ಸಭಾ ಕಾರ್ಯಕ್ರಮ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು. ಆ.10ರಂದು ಸಂಜೆ 4 ಗಂಟೆಗೆ ಕೊಯನಾಡು ಮಹಾಗಣಪತಿ ದೇವಾಲಯ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.

ಅದೇ ದಿನದಂದು ಸಂಜೆ 6 ಗಂಟೆಗೆ ಕೊಡ್ಲಿಪೇಟೆಯ ಆರ್.ಎಂ.ಸಿ ಮಾರುಕಟ್ಟೆ ಸಮೀಪದ ಶ್ರೀ ಗಣಪತಿ ದೇವಾಲಯದಿಂದ ಪಂಜಿನ ಮೆರವಣಿಗೆ ಹೊರಟು ಮುಖ್ಯ ರಸ್ತೆಗಾಗಿ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸಂಜೆ 7.30 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಆ.11 ರಂದು ಬೆಳಿಗ್ಗೆ 10 ಗಂಟೆಗೆ ಗೋಣಿಕೊಪ್ಪ ಆರ್.ಎಂ.ಸಿ. ಆವರಣದಿಂದ ಗೋಣಿಕೊಪ್ಪ ಖಾಸಗಿ ಬಸ್ ನಿಲ್ದಾಣದ ಮೂಲಕ ಬೈಪಾಸ್ ರಸ್ತೆಗಾಗಿ ಮೆರವಣಿಗೆ ಸಾಗಲಿದೆ. 11.30 ಗಂಟೆಗೆ ವಾಹನ ಜಾಥಾ ನಡೆಯಲಿದೆ. ನಂತರ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಆ.13ರಂದು ಸಂಜೆ 6 ಗಂಟೆಗೆ ತೆಲುಗರ ಬೀದಿ ಶ್ರೀ ಮಾರಿಯಮ್ಮ ದೇವಾಲಯದಿಂದ ಪಂಜಿನ ಮೆರವಣಿಗೆ ಹೊರಟು ಕ್ಲಾಕ್ ಟವರ್, ಖಾಸಗಿ ಬಸ್ ನಿಲ್ದಾಣ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಕ್ಲಾಕ್ ಟವರ್ ರಸ್ತೆಗಾಗಿ ಮರವಣಿಗೆ ವಿರಾಜಪೇಟೆ ಮಹಿಳಾ ಸಮಾಜ ತಲುಪಲಿದೆ. ನಂತರ ಸಂಜೆ 7.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ.

 ಆ.14 ರಂದು ಸಂಜೆ 6 ಗಂಟೆಗೆ ಬೈಚನಹಳ್ಳಿ ಶ್ರೀ ಮಾರಿಯಮ್ಮ ದೇವಾಲಯದಿಂದ ಪಂಜಿನ ಮೆರವಣಿಗೆ ಹೊರಡಲಿದೆ. ರಥಬೀದಿ ಐ.ಬಿ ರಸ್ತೆ ಮೂಲಕ ರೈತಭವನದಲ್ಲಿ ಸಭಾ ಕಾರ್ಯಕ್ರಮ ಸಂಜೆ 7.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಜಿಲ್ಲಾ ಸಂಯೋಜಕರಾದ ಸುನಿಲ್ ಮಾದಾಪುರ, ಸಹ ಸಂಯೋಜಕರಾದ ಶರತ್ ಅಲ್ಲುಮಾಡ, ತಿಮ್ಮಯ್ಯ, ಅಪ್ಪು ರೈ, ಚೇತನ್ ಇದ್ದರು.