ಎಲ್ಲರ ಎದುರೇ ರಶ್ಮಿಕಾ ಮಂದಣ್ಣ ಕೈಗೆ ಮುತ್ತಿಟ್ಟ ವಿಜಯ್ ದೇವರಕೊಂಡ: ವಿಡಿಯೋ ವೈರಲ್
ಹೈದರಾಬಾದ್, ನ.13: ನಟಿ ರಶ್ಮಿಕಾ ಮಂದಣ್ಣ ಮತ್ತು ಟಾಲಿವುಡ್ ನಟ ವಿಜಯ್ ದೇವರಕೊಂಡ ಜೋಡಿ ಮತ್ತೆ ಸುದ್ದಿಯಲ್ಲಿದೆ. ರಹಸ್ಯ ಎಂಗೇಜ್‌ಮೆಂಟ್ ಕುರಿತಾಗಿ ದಿನಗಳಿಂದ ಹರಿದಾಡುತ್ತಿದ್ದ ಗಾಸಿಪ್ ನಡುವೆ, ಇದೀಗ ದಂಪತಿಗಳಂತೆ ಕಾಣುವ ಈ ಇಬ್ಬರ ಮಧುರ ಕ್ಷಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಶ್ಮಿಕಾ ಅಭಿನಯದ ಗರ್ಲ್‌ಫ್ರೆಂಡ್ ಚಿತ್ರದ ಯಶಸ್ಸಿನ ಸಂಭ್ರಮ ಹೈದರಾಬಾದ್‌ನಲ್ಲಿ ನಡೆದಿದ್ದು, ಈ ಕಾರ್ಯಕ್ರಮಕ್ಕೆ ವಿಜಯ್ ದೇವರಕೊಂಡ ವಿಶೇಷವಾಗಿ ಹಾಜರಾಗಿದ್ದರು. ರಶ್ಮಿಕಾ ಬಳಿ ಬಂದ ದೇವರಕೊಂಡ, ಎಲ್ಲರ ಸಮ್ಮುಖದಲ್ಲೇ ಅವರ ಕೈ ಹಿಡಿದು ಮುತ್ತಿಟ್ಟಿದ್ದಾರೆ. ಈ ಕ್ಷಣವನ್ನು ಕ್ಯಾಮೆರಾಗಳು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ವಿಜಯ್ ದೇವರಕೊಂಡ ಬಂದ ಕ್ಷಣದಿಂದಲೇ ರಶ್ಮಿಕಾ ಮುಖದಲ್ಲಿ ನಗು ಮೂಡಿದ್ದು, ಕೈಗೆ ಮುತ್ತಿಕ್ಕಿದಾಗ ನಟಿ ಪ್ರತಿಕ್ರಿಯಿಸಿರುವ ಕ್ಷಣ ವಿಡಿಯೋದಲ್ಲಿ ಸೆರೆಯಾಗಿದೆ.
ಇವರಿಬ್ಬರ ಸಂಬಂಧದ ಬಗ್ಗೆ ಇತ್ತಿಚೆಗೆ ಹಲವು ಗಾಸಿಪ್ ಹರಿದಾಡುತ್ತಿದ್ದರೂ, ಸಾರ್ವಜನಿಕವಾಗಿ ಪ್ರೀತಿ ತೋರಿಸಿರುವುದು ಇದೇ ಮೊದಲ ಬಾರಿಗೆ. ಇವರಿಬ್ಬರು ಫೆಬ್ರವರಿಯಲ್ಲಿ ಮದುವೆಯಾಗಲಿದ್ದಾರೆ ಎಂಬ ವರದಿಗಳು ಬಂದಿವೆ. ನೆಟ್ಟಿಗರು “ಅಧಿಕೃತ ಘೋಷಣೆ ಬೇಗ ಬರಲಿ” ಎಂದು ಪ್ರತಿಕ್ರಿಯಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಹರಿದಾಡುತ್ತಿರುವ ಈ ವಿಡಿಯೋ, ಟಾಲಿವುಡ್ ವಲಯದಲ್ಲಿ ದೇವರಕೊಂಡ–ಮಂದಣ್ಣ ಜೋಡಿ ಮತ್ತೊಮ್ಮೆ ಹಾಟ್‌ಟಾಪಿಕ್ ಆಗಿರುವುದನ್ನು ಮತ್ತೆ ಸಾಬೀತುಪಡಿಸಿದೆ.
