ವಿರಾಜಪೇಟೆ: ಅಕ್ರಮ ಗೋ‌ ಮಾಂಸ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ,ಕಾರು ವಶಕ್ಕೆ

ವಿರಾಜಪೇಟೆ: ಅಕ್ರಮ ಗೋ‌ ಮಾಂಸ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ,ಕಾರು ವಶಕ್ಕೆ
ಫೋಟೋ: ಪೊಲೀಸರು ವಶಕ್ಕೆ ಪಡೆದ ಒಮಿನಿ

ವಿರಾಜಪೇಟೆ,ನ18: ಗೋಮಾಂಸವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಬಂಧನವಾದ ಘಟನೆ ವಿರಾಜಪೇಟೆ ನಗರದ ಸುಣ್ಣದ ಬೀದಿಯಲ್ಲಿ ನಡೆದಿದೆ. ವಿರಾಜಪೇಟೆ ನಗರದ ವಿಜಯ ನಗರದ ನಿವಾಸಿಗಳಾದ ಮೊಹಮ್ಮದ್ ಎಂಬುವವರ ಪುತ್ರ ಎಂ.ಎಮುಸ್ತಾಫ (42 ವರ್ಷ), ಮೊಹಮ್ಮದ್ ಹುಸೈನ್ ಎಂಬುವವರ ಪುತ್ರ ಎಂ.ಎಸ್. ತನ್ವೀರ್ ( 41 ವರ್ಷ) ಗೋಮಾಂಸ ಮಾರಾಟ ಯತ್ನಿಸಿ ಬಂಧನವಾದ ವ್ಯಕ್ತಿಗಳು.

ನಗರದಲ್ಲಿ ತಮಗೆ ಹತ್ತಿರವಾದ ಸ್ನೇಹಿತರಿಗೆ ಗೋಮಾಂಸವನ್ನು ಮಾರಾಟ ಮಾಡಲು ಯತ್ನಿಸುತ್ತಿರುವುದಾಗಿ ಖಚಿತ ಮಾಹಿತಿ ಪಡೆದ ಪೊಲೀಸರು ನಗರದ ಸುಣ್ಣದ ಬೀದಿಯಿಂದ ಈದ್ಗಾ ಮೈದಾನಕ್ಕೆ ತೆರಳುವ ತಿರುವುನಲ್ಲಿ ಬಂಧಿತ ಈರ್ವರು ಕೆಎ-12ಎಂ-9770 ಬಿಳಿ ಬಣ್ಣದ ಮಾರೂತಿ ಒಮಿನಿಯಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದರು. 

ಖಚಿತ ಮಾಹಿತಿ ಆಧಾರಿಸಿದ ಪೊಲೀಸರು ದಾಳಿ ನಡೆಸಿದ ಸಂಧರ್ಭ ಒಟ್ಟು 94 ಕೆ.ಜಿ. ಗೋಮಾಂಸ ಇರುವುದು ಪತ್ತೆಯಾಗಿದೆ. ಗೋಮಾಂಸ ಮಾರಾಟ ಮಾಡುತಿದ್ದ ಈರ್ವರನ್ನು ಬಂದಿಸಿದ ಪೊಲೀಸರು ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ವಿರಾಜಪೇಟೆ ಉಪ ವಿಭಾಗದ ಪ್ರಭಾರ ಪೊಲೀಸು ಉಪ ಅಧಿಕ್ಷಕರಾದ ಪಿ.ಚಂದ್ರಶೇಖರ್ ಅವರ ನಿರ್ದೇಶನದ ಮೇರೆಗೆ ವಿರಾಜಪೇಟೆ ವೃತ್ತ ನೀರಿಕ್ಷಕರಾದ ಪಿ.ಅನೂಪ್ ಮಾದಪ್ಪ ಅವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ನಗರ ಠಾಣೆಯ ಪಿ.ಎಸ್.ಐ. ಹೆಚ್.ಎಸ್. ಪ್ರಮೋದ್, ಮತ್ತು ಅಪರಾಧ ವಿಭಾಗದ ಪಿ.ಎಸ್.ಐ. ಟಿ.ಎಂ. ಕಾವೇರಪ್ಪ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

 ವರದಿ:ಕಿಶೋರ್ ಕುಮಾರ್ ಶೆಟ್ಟಿ