ಕೊಡಗು ಪತ್ರಕತ೯ರ ಸಂಘದಿಂದ ವಿಷನ್ ಕೊಡಗು:ವಿವಿಧ ಸಂಘಸಂಸ್ಥೆಗಳಿಂದ ಜಿಲ್ಲೆಯ ಅಭಿವೖದ್ದಿ ಪರ ಸಂಸದರಿಗೆ ಸಲಹೆ: ಪರಿಸರ, ಸಂಸ್ಕೖತಿ ಸಂರಕ್ಷಣೆಯೊಂದಿಗೆ ಕೊಡಗಿನ ಅಭಿವೖದ್ದಿಗೆ ಬದ್ದ:ಸಂಸದ ಯದುವೀರ್

ಕೊಡಗು ಪತ್ರಕತ೯ರ ಸಂಘದಿಂದ ವಿಷನ್ ಕೊಡಗು:ವಿವಿಧ ಸಂಘಸಂಸ್ಥೆಗಳಿಂದ ಜಿಲ್ಲೆಯ ಅಭಿವೖದ್ದಿ ಪರ ಸಂಸದರಿಗೆ ಸಲಹೆ:  ಪರಿಸರ, ಸಂಸ್ಕೖತಿ ಸಂರಕ್ಷಣೆಯೊಂದಿಗೆ ಕೊಡಗಿನ ಅಭಿವೖದ್ದಿಗೆ ಬದ್ದ:ಸಂಸದ ಯದುವೀರ್

ಮಡಿಕೇರಿ : - ಕೊಡಗಿನ ಪರಿಸರ, ಸಂಸ್ಕೃತಿಗಳ ಸಂರಕ್ಷಣೆಗೆ ಪೂರಕವಾದ ರೀತಿಯ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸರ್ಕಾರದ ಮೂಲಕ ಸಾಧ್ಯವಾಗುವ ಎಲ್ಲ ಸಹಕಾರಗಳನ್ನು ನೀಡಲಾಗುತ್ತದೆ. ಕೇವಲ ಅಭಿವೃದ್ಧಿಗೋಸ್ಕರ ಅಭಿವೃದ್ಧಿ ಎನ್ನುವುದಕ್ಕೆ ತನ್ನ ವಿರೋಧವಿದೆ. ಕೊಡಗು ಕೊಡಗಾಗಿಯೇ ಉಳಿಯಬೇಕೆನ್ನುವುದು ತನ್ನ ಆಶಯವಾಗಿದ್ದು, ಇದರಂತೆ ಕೇಂದ್ರದ ಅನುದಾನದೊಂದಿಗೆ ಜಿಲ್ಲೆಯ ಪ್ರಗತಿಗೆ ಬದ್ದನಿರುವುದಾಗಿ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಒಡೆಯರ್ ಸ್ಪಷ್ಟಪಡಿಸಿದ್ದಾರೆ. ಕೊಡಗು ಪತ್ರಕರ್ತರ ಸಂಘದ ವತಿಯಿಂದ ನಗರದ ರೆಡ್ ಬಿಕ್ಸ್ ನ ಸತ್ಕಾರ್ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳೊಂದಿಗೆ ಆಯೋಜಿತವಾಗಿದ್ದ 'ಕೊಡಗು ವಿಷನ್' ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಮಸ್ಯೆಗಳನ್ನು ಆಲಿಸಿ, ಬೇಡಿಕೆಗಳ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ಕೊಡಗಿನ ವಿಶಿಷ್ಟ ಆತಿಥ್ಯ ಸಂಸ್ಕೃತಿಗಂಳನ್ನು ತಿಳಿಯಲು ಅವಕಾಶ ಒದಗಿಸುವ 'ಹೋಂ ಸ್ಟೇ'ಗಳು ಸ್ಥಳೀಯ ಆರ್ಥಿಕತೆಗೂ ಸಹಕಾರಿಯಾಗಿದೆ. ಜಿಲ್ಲೆಯಲ್ಲಿ ಮಾತ್ರ ಕಂಡು ಬರುವ 'ಐನ್ ಮನೆ' ಸಂಸ್ಕೃತಿಯನ್ನು ಜತನದಿಂದ ಕಾಯ್ದುಕೊಳ್ಳುವ ಪ್ರಯತ್ನಗಳ ಮೂಲಕ ಕೊಡಗನ್ನು ಮೂಲ ಸ್ವರೂಪದಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನ ಕಾಳಜಿಯನ್ನು ಪ್ರತಿಯೊಬ್ಬರು ವಹಿಸಬೇಕಾಗುತ್ತದೆ ಎಂದು ಸಂಸದ ಯದುವೀರ್ ನುಡಿದರು. ಸರ್ಫೆಸಿ ಕಾಯ್ದೆ ಸಂಕಷ್ಟ- ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ನಂದಾ ಬೆಳ್ಯಪ್ಪ ಮತ್ತು ನಿದೇ೯ಶಕ ಕೆ.ಕೆ. ವಿಶ್ವನಾಥ್ ಮನವಿ ಸಲ್ಸಿಸಿ ಮಾತನಾಡಿ, ಕಾಫಿ ಬೆಳೆಯನ್ನು 'ಕೃಷಿ'ಯ ಬದಲಾಗಿ ವಾಣಿಜ್ಯ ಬೆಳೆಯಾಗಿ ಪರಿಗಣಿಸಲಾಗಿದೆ. ಇದರಿಂದ ಸರ್ಫೆಜಿ ಕಾಯ್ದೆ ಕಾಫಿ ಬೆಳೆಗಾರರಿಗೂ ಅನ್ವಯವಾಗುವ ಮೂಲಕ ಸಮಸ್ಯೆಗಳು ಸೃಷ್ಟಿಯಾಗಿದೆ. ಬ್ಯಾಂಕ್ ಗಳಲ್ಲಿ ಇರುವ ಸಾಲದ ಹಿನ್ನೆಲೆ ಬೆಳೆಗಾರರು ತೋಟಗಳನ್ನೇ ಕಳೆದುಕೊಳ್ಳುವ ಸಂದಿಗ್ಧ ಸ್ಥಿತಿ ನಿರ್ಮಾಣವಾಗಿದೆಯೆಂದು ಕಳವಳ ವ್ಯಕ್ತಪಡಿಸಿದರು. ಕಾಫಿಗೆ ಇರುವ ವಾಣಿಜ್ಯಕ ಹಣೆಪಟ್ಟಿಯಿಂದಾಗಿ ಕಾಫಿ ಬೆಳೆಗಾರರಿಗೆ ಕೃಷಿಕರ ವಿಮಾ ಸೌಲಭ್ಯವೂ ಇಲ್ಲವೆಂದು ಬೆಳೆಗಾರರ ಸಮಸ್ಯೆಗಳನ್ನು ತೆರೆದಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಕಾಫಿಯನ್ನು ವಾಣಿಜ್ಯಕ ಕೃಷಿಯಿಂದ ಹೊರತರುವುದು ಕರ್ನಾಟಕ ರಾಜ್ಯ ಸರ್ಕಾರದಿಂದ ನಡೆಯಬೇಕಾಗಿರುವ ಕೆಲಸ. ಹೀಗಿದ್ದೂ ತಾವು ಲೀಡ್ ಬ್ಯಾಂಕ್ ಸಭೆಗಳಲ್ಲಿ ಸರ್ಫೆಸಿ ಕಾಯ್ದೆಯನ್ನು ಬೆಳೆಗಾರರಿಗೆ ಸಂಕಷ್ಟ ಉಂಟುಮಾಡುವ ರೀತಿಯಲ್ಲಿ ದುರ್ಬಳಕೆ ಮಾಡಕೂಡದೆಂದು ಸೂಚಿಸಿದ್ದಾಗಿ ತಿಳಿಸಿ,ದರು. ಕಾಫಿ ಬೆಳೆಗಾರಿಗೆ ವಿಮಾ ಸೌಲಭ್ಯದ ಬಗ್ಗೆ ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಸಂಸದರು ಭರವಸೆ ನೀಡಿದರು.

 ರೈಲ್ವೆಗೆ ರಾಜ್ಯದ ಭೂ ಸ್ವಾಧೀನ ತೊಡಕು:

ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ, ಜಿಲ್ಲೆಯ ಬೆಳೆಗಾರರು ಸೇರಿದಂತೆ ಎಲ್ಲರಿಗೂ ಅನುಕೂಲ ಕಲ್ಪಿಸುವ ರೈಲ್ವೆ ಯೋಜನೆ ಇನ್ನೂ ಜಾರಿಯಾಗದಿರುವುದು ವಿಷಾಧನೀಯ ಎಂದರಲ್ಲದೇ ಕಾಮಿ೯ಕರು ಹೆಚ್ಚಾಗಿರುವ ಕೊಡಗು , ಜಿಲ್ಲೆಯಲ್ಲಿ ಇಎಸ್‌ಐ ಆಸ್ಪತ್ರೆ ಇಲ್ಲದಿರುವ ವಿಚಾರಗಳನ್ನು ಸಂಸದರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಯದುವೀರ್ ಅವರು, ಜಿಲ್ಲೆಗೆ ರೈಲ್ವೆ ಸಂಪರ್ಕ ಒದಗಿಸುವ ಮಾರ್ಗಗಳ ಸರ್ವೇ ಕಾರ್ಯ ಅಂತಿಮ ಗೊಂಡಿದ್ದು, ಯೋಜನೆ ಅನುಷ್ಠಾನಗೊಳ್ಳಬೇಕಾದರೆ ಅಗತ್ಯವಾಗಿ ನಡೆಯಬೇಕಾದ 'ಜಮೀನು ಸ್ವಾಧೀನ' ಪ್ರಕ್ರಿಯೆ ನಡೆಯಬೇಕು. ಈ ಕಾರ್ಯ ರಾಜ್ಯ ಸರ್ಕಾರದಿಂದ ವಿಳಂಬವಾಗುತ್ತಿರುವುದೇ ರೈಲ್ವೇ ಯೋಜನೆ ನಿಗಧಿತ ಸಮಯದಲ್ಲಿ ಕಾರ್ಯಗತವಾಗದಿರುವುದಕ್ಕೆ ಕಾರಣವಾಗುತ್ತಿದೆ. ಜಮೀನು ಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ನಡೆಸಿಕೊಟ್ಟಲ್ಲಿ ರೈಲ್ವೆ ಸಂಪರ್ಕಕ್ಕೆ ಕೇಂದ್ರ‍್ರ ಅಗತ್ಯ ಕ್ರಮ ವಹಿಸಲಿದೆ. ಇದೇ ರೀತಿ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೋಸ್ಕರ ಕೇಂದ್ರದ ಸಿವಿಲ್ ಏವಿಯೇಷನ್ ಸಚಿವರೊಂದಿಗೆ ಅಗತ್ಯ ಮಾತುಕತೆಗಳನ್ನು ನಡೆಸಲಾಗುತ್ತದೆ ಎಂದರು.

ಸಮೀಕ್ಷೆ ಬಳಿಕ ಇಎಸ್ ಐ ಆಸ್ಪತ್ರೆ ತೆರೆಯುವ ಬಗ್ಗೆ ಗಮನ ಹರಿಸಲಾಗುತ್ತದೆ ಎಂದೂ ಹೇಳಿದರು. ಪರಿಸರದ ವಿಚಾರಗಳಿಂದ ತಡೆ- ಕೊಡಗು ರೆಸಾರ್ಟ್ಸ್ ಮತ್ತು ಹೋಟೆಲ್ ಅಸೋಸಿಯೇಷನ್ ಪ್ರಧಾನ ಕಾಯ೯ದಶಿ೯ ನಾಸೀರ್, ಖಚಾಂಚಿ ಸಾಗರ್ ಮಾತನಾಡಿ, ಮಾತನಾಡಿ, ಮಡಿಕೇರಿಯಿದ ಕಣ್ಣೂರು ಅಂತರಾಷ್ಟೀಯ ವಿಮಾನ ನಿಲ್ದಾಣಕ್ಕೆ ಮತ್ತು ಹುಣಸೂರು, ವಿರಾಜಪೇಟೆ ಮಾರ್ಗವಾಗಿ ಕಣ್ಣೂರನ್ನು ಸಂಪರ್ಕಿಸುವ ರಾಷ್ಟೀಯ ಹೆದ್ದಾರಿ ನಿರ್ಮಾಣದ ಅಗತ್ಯತೆಯನ್ನು ಸಂಸದರಿಗೆ ತಿಳಿಸಿದರು. ಈ ಸಂದರ್ಭ ಸಂಸದರು, ಜಿಲ್ಲೆಯಲ್ಲಿ ಇಂತಹ ರಸ್ತೆ ಯೋಜನೆಗಳಿಗೆ ಪರಿಸರ ಸರಕ್ಷಣೆ ಸಂಬಂಧಿತ ಪ್ರಶ್ನೆಗಳು ಪ್ರಮುಖವಾಗಿ ಅಡ್ಡಿಯನ್ನು ಉಂಟುವಾಡುತ್ತಿದೆ. ಯೋಜನೆಯ ಜಾರಿಗೆ ಅಗತ್ಯವಾದ ಜಮೀನು ಸ್ವಾಧೀನ ಪ್ರಕ್ರಿಯೆಯ ಹೊಣೆಗಾರಿಕೆ ರಾಜ್ಯ ಸರ್ಕಾರದ್ದಾಗಿರುತ್ತದೆ. ಇದಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಜಾರಿಗೆ ಕೇಂದ್ರ ಸಕಾ೯ರ ಸಿದ್ಧವಿದೆಯೆಂದು ಸ್ಪಷ್ಟಪಡಿಸಿದರು. ಆನ್‌ಲೈನ್ ಔಷಧಿ ಖರೀದಿ ಕ್ರಮ ನಿಲ್ಲಿಸಿ- ಕೊಡಗು ಔಷಧಿ ವ್ಯಾಪಾರಿಗಳ ಸಂಘದ ಅಧಕ್ಷರಾದ ಅಂಬೆಕಲ್ಲು ಜೀವನ್ ಮಾತನಾಡಿ, ಕೋವಿಡ್ ಸಾಂಕ್ರಾಮಿಕ ಸಂದರ್ಭ ಕೇಂದ್ರ ಸರ್ಕಾರ ಆನ್ ಲೈನ್ ಮೂಲಕ ಔಷಧಿ ಖರೀದಿಗೆ ಅವಕಾಶ ಮಾಡಿಕೊಟ್ಟಿತ್ತು. ಅದೇ ಆದೇಶವನ್ನು ಆಧರಿಸಿ ಇಂದಿಗೂ ಆನ್ ಲೈನ್ ಔಷಧಿ ವ್ಯಾಪಾರ ನಡೆಯುತ್ತಿದೆ. ಇದನ್ನು ನಿಲ್ಲಿಸಬೇಕು ಜನೌಷಧಿ ಕೇಂದ್ರಗಳಲ್ಲಿ ಇತರೆ ಔಷಧಿಗಳ ಮಾರಾಟವು ನಡೆಯುತ್ತಿರುವುದಕ್ಕೆ ಕಡಿವಾಣ ಹಾಕಬೇಕೆಂದರು. ಇದಕ್ಕೆ ಪ್ರತಿಕ್ರಯಿಸಿದ ಸಂಸದರು, ಔಷಧಿ ವ್ಯಪಾರಿಗಳ ಮೂಲಕ ಔಷಧಿ ಖರೀದಿಸಿ ಗ್ರಾಹಕರಿಗೆ ವಿತರಿಸುವ ರೀತಿಯಲ್ಲಿ ಇರಬೇಕೇ ವಿನಾ ಆನ್ ಲೈನ್ ಔಷಧಿ ಮಾರಾಟ ಸೂಕ್ತವಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸಕಾ೯ರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು. ಜನೌಷಧಿ ಕೇಂದ್ರಗಳಲ್ಲಿ ಇತರೆ ಔಷಧಿಗಳ ಮಾರಾಟ ನಡೆಯುತ್ತಿದ್ದರೆ ಆ ಬಗ್ಗೆ ನಿಖರ ಮಾಹಿತಿ ನೀಡಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಕೊಡಗನ್ನು ಹೊರಗಿಗೂ ಪರಿಚಯಿಸಿ:

ಕೊಡಗು ಜಿಲ್ಲಾ ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೊಂತಿ ಗಣೇಶ್ ಮಾತನಾಡಿ, ಪ್ರವಾಸಿ ಕೇಂದ್ರವಾದ ಕೊಡಗನ್ನು ದೇಶದ ಇತರೆಡೆಗಳಲ್ಲಿಯೂ ಪ್ರವಾಸಿ ನೆಲೆಯಲ್ಲಿ ಪರಿಚಯಿಸುವ ಕಾರ್ಯ ಮಾಡುವಂತೆ ಮನವಿ ಮಾಡಿದರು. ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ ಮೊದಲಾದೆಡೆಗಳಿಂದ ಕೊಡಗು ಜಿಲ್ಲೆಗೆ ಕಾರ್ಮಿಕರು ಬರುತ್ತಿದ್ದಾರೆ. ಹೀಗೆ ಮನಬಂದಂತೆ ಬರುವ ಕಾರ್ಮಿಕರನ್ನು ಆಯಾ ರಾಜ್ಯಗಳಲ್ಲೆ ನೋಂದಾಯಿಸಿಕೊಂಡು ಕಳುಹಿಸುವ ವ್ಯವಸ್ಥೆ ಮಾಡಿದರೆ ಒಳಿತೆಂದು ಸಲಹೆ ಮಾಡಿದರು. ಭಾರತೀಯ ರೆಡ್ ಕ್ರಾಸ್ ನ ಕೊಡಗು ಘಟಕದ ಅಧ್ಯಕ್ಷ ಬಿ.ಕೆ. ರವೀಂದ್ರ ರೈ ಮಾತನಾಡಿ, ನಿಸಗ೯ ವಿಕೋಪ ಸಂದಭ೯ ಮಡಿಕೇರಿಯಲ್ಲಿರುವ ರೆಡ್ ಕ್ರಾಸ್ ಭವನ ಕಾಳಜಿ ಕೇಂದ್ರವಾಗಿ ಪರಿವತಿ೯ತವಾಗಿ ಸಂತ್ರಸ್ಥರಿಗೆ ನೆರವಾಗುತ್ತಿದೆ. ಈ ಭವನದ ಮೇಲಂತಸ್ತಿನ ನಿಮಾ೯ಣಕ್ಕೆ ನೆರವಾಗಿ ಎಂದು ಕೋರಿದರು. ಈ ನಿಟ್ಟಿನಲ್ಲಿ ಸ್ಪಂದಿಸುವುದಾಗಿ ಸಂಸದರು ಹೇಳಿದರು. ಕಾಫಿ ಉದ್ಯಮ ರಂಗದ ಪರವಾಗಿ ಮಾತನಾಡಿದ ಕೂಡ್ಲೂರು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಮತ್ತು ಉದ್ಯಮಿ ಅಲೆಮಾಡ ಹರೀಶ್ ಸಾಕಷ್ಟು ವಿಸ್ತಾರವಾದ ಜಾಗದಲ್ಲಿರುವ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಕೊಡಗಿನಲ್ಲಿ ಹೊಸ ಉದ್ಯಮಕ್ಕಾಗಿ ಸಾಕಷ್ಟು ಜಾಗ ಮೀಸಲಿದೆ. ಜಿಲ್ಲೆಯ ಅಭಿವೖದ್ದಿ ನಿಟ್ಟಿನಲ್ಲಿ ಈ ಜಾಗನ್ನು ಬಳಸಿಕೊಳ್ಳುವುದು ಸೂಕ್ತ ಎಂದರಲ್ಲದೇ, ಕಾಫಿ ಉದ್ಯಮಿಗಳು ಎದುುತ್ತಿರುವ ಸಮಸ್ಯಗಳನ್ನು ಸಬೆಯ ಮುಂದಿ್ಟ್ಟರು. .

ಕಾಫಿಯ ಆಂತರಿಕ ಬಳಕೆಗೆ ಒತ್ತು ನೀಡಿ-

 ಸಂವಾದ ಕಾಯ೯ಕ್ರಮ ನಿವ೯ಹಿಸಿದ ಹಿರಿಯ ಪತ್ರಕತ೯ ಜಿ. ಚಿದ್ವಿಲಾಸ್ ಸಲಹೆ ನೀಡಿ ಕೊಡಗಿನಲ್ಲಿ ಬೆಳೆಯುವ ಕಾಫಿಯ ಆಂತರಿಕ ಬಳಕೆಗೆ ಹೆಚ್ಚಿನ ಒತ್ತು ನಿಡಬೇಕು. ಇದಕ್ಕೆ ಪೂರಕವಾಗಿ ಭಾರತೀಯ ಸೈನ್ಯದಲ್ಲಿ ಕಾಫಿ ಬಳಕೆಗೆ ಅವಕಾಶ ಒದಗಿಸಲು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು. ಸಂಸದರ ನಿಧಿಯಿಂದ ಕೊಡಗಿನ ಪ್ರವಾಸಿ ತಾಣಗಳಿಗೆ ಮೂಲ ಸೌಲಭ್ಯ ಒದಗಿಸುವಂತಾಗಬೇಕೆಂದು ಮನವಿ ಮಾಡಿದರು. ರೈಲ್ವೇ ಟಿಕೇಟ್ ಬುಕ್ಕಿಂಗ್ ಕೇಂದ್ರವನ್ನು ಪುನರಾರಂಭಿಸುವ ಕುರಿತ ಸಲಹೆಗೆ ಸ್ಪಂದಿಸಿ ಮಾತನಾಡಿದ ಸಂಸದರು, ಶೀಘ್ರದಲ್ಲಿಯೇ ಈ ಕೇಂದ್ರ ಮತ್ತೆ ತೆರೆಯಲಿದೆ. ಜಿಲ್ಲಾಧಿಕಾರಿ ಕಛೇರಿಯಲ್ಲಿ ಸ್ಥಳದ ಲಭ್ಯತೆ ಪರಿಶೀಲಿಸಲಾಗುತ್ತಿದೆ ಎಂದು ನುಡಿದರು. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ ಪ್ರಸ್ತಾವಿಕವಾಗಿ ಮಾತನಾಡಿ, ಸಮಾಜಮುಖಿ ಕಾಯ೯ಕ್ರಮಗಳನ್ನು ಆಯೋಜಿಸುತ್ತಿರುವ ಕೊಡಗು ಪತ್ರಕತ೯ರ ಸಂಘಲು ವಿಷನ್ ಕೊಡಗು ಮೂಲಕ ಕೇಂದ್ರ ಸಕಾ೯ರದ ಯಾವೆಲ್ಲಾ ಯೋಜನೆಗಳು ಕೊಡಗಿಗೆ ಅಗತ್ಯವಿದೆ ಎಂಬುದನ್ನು ತಿಳಿದಕೊಳ್ಳುವ ಪ್ರಯತ್ನ ಇದಾಗಿದೆ. ವಿವಿಧ ಸಂಘಸಂಸ್ಥೆಗಳು ಮತ್ತು ಸಂಸದರ ನಡುವೆ ಕೊಡಗಿನ ಪ್ರಗತಿಗಾಗಿ ಸಂವಾದದ ಮೂಲಕ ಉತ್ತಮ ಬಾಂಧವ್ಯಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದರು. ಕೊಡಗು ಪತ್ರಕತ೯ರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ವಂದಿಸಿದರು. ಚಿದ್ವಿಲಾಸ್ ಮತ್ತು ಸಂಧ್ಯಾ ಚಿದ್ವಿಲಾಸ್ ಪ್ರಾಥಿ೯ಸಿದರು. ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮಸ್೯ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಮತ್ತು ಸದಸ್ಯರು ಸಂಸದ ಯದುವೀರ್ ಒಡೆಯರ್ ಅವರನ್ನು ಸನ್ಮಾನಿಸಿ ಗೌರವಿಸಿದರು. ವಿಧಾನಪರಿಷತ್ ಮಾಜಿ ಸದಸ್ಯರಾದ ಎಸ್.ಜಿ.ಮೇದಪ್ಪ, ಎಂ.ಪಿ. ಸುನೀಲ್ ಸುಬ್ರಹ್ಮಣಿ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ, ಮಾಜಿ ಅಧ್ಯಕ್ಷ ರಾಬಿನ್ ದೇವಯ್ಯ, ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್ , ನಗರಸಭಾ ಸದಸ್ಯರಾದ ಉಮೇಶ್ ಸುಬ್ರಹ್ಮಣಿ, ಕವನ್, ಸಬಿತಾ, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ನಾಯಕ್, ಬಿ.ಎಸ್ ಎನ್ ಎಲ್ ಅಧಿಕಾರಿ ಪ್ರದೀಪ್, ಕಾಫಿ ಮಂಡಳಿ ಅಧಿಕಾರಿ ಚಂದ್ರಶೇಖರ್, ಮಡಿಕೇರಿ ಚೇಂಬರ್ ಆಫ್ ಕಾಮಸ್೯ನ ಅಧ್ಯಕ್ಷ ಸಂತೋಷ್ ಅಣ್ವೇಕರ್, ನಿದೇ೯ಶಕ ಎಂ.ಧನಂಜಯ್ ಪಾಲ್ಗೊಂಡಿದ್ದರು.