ಶುಂಠಿ ಕೃಷಿ ಕಾವಲುಗಾರನೊಂದಿಗೆ ಪತ್ನಿಗೆ ಅಕ್ರಮ ಸಂಬಂಧ ಅನುಮಾನ! ಕಾವಲುಗಾರರನ್ನೇ ಕೊಲೆಗೈದ ಬಸವನಹಳ್ಳಿ ಗ್ರಾಮದ ತೀರ್ಥ!

ಕುಶಾಲನಗರ:ಶುಕ್ರವಾರ ರಾತ್ರಿ ಕೇರಳ ಮೂಲದ ಶುಂಠಿ ಕಾವಲುಗಾರರನ್ನು ಹತ್ಯೆ ಮಾಡಿರುವ ಘಟನೆ ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರು ಸಮೀಪದ ಬಸವನಳ್ಳಿಯಲ್ಲಿ ಶುಕ್ರವಾರ ರಾತ್ರಿ ನಡೆದಿತ್ತು. ಬಸವನಹಳ್ಳಿಯ ತೀರ್ಥ ಎಂಬ ವ್ಯಕ್ತಿಯು ಶುಂಠಿ ಕಾವಲುಗಾರರನ್ನು ಹತ್ಯೆ ಮಾಡಿದ್ದು,ತನ್ನ ಪತ್ನಿಯೊಂದಿಗೆ ಮುರಳಿ ಎಂಬಾತನನ್ನು ಅಕ್ರಮ ಸಂಬಂಧ ಹೊಂದಿದ್ದನು ಎಂಬ ಕಾರಣದಿಂದಾಗಿ ಹತ್ಯೆ ಮಾಡಿದ್ದಾನೆ ಎಂದು ದೂರುದಾರ ಮಣಿಕಂಠ ಅವರು ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಕೊಲೆ ಆರೋಪಿ ತೀರ್ಥ ಎಂಬುವವರ ವಿರುದ್ಧ BNS,2023 (u\s-103(1)109) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ ನೋಡಿ👇:
ದೂರುದಾರ ಮಣಿಕಂಠ ಎಂಬುವವರು ಬಸವನಹಳ್ಳಿ ಗ್ರಾಮದ ನಾಗೇಂದ್ರ ಎಂಬುವವರ ಜಾಗವನ್ನು ಶುಂಠಿ ಕೃಷಿ ಮಾಡಲು ಲೀಸ್ ಗೆ ತೆಗೆದುಕೊಂಡಿದ್ದನು.ಶುಂಠಿ ಕೃಷಿ ಮಾಡಲು ಈಗ 3 ತಿಂಗಳ ಹಿಂದೆ ಕೊಪ್ಪ ಬಳಿಯ ರಾಣಿಗೇಟ್ ನಲ್ಲಿದ್ದ ಕೇರಳ ರಾಜ್ಯದ ಕೋಟಯಂ ಜಿಲ್ಲೆಯ 48 ವರ್ಷ ಪ್ರಾಯದ ಮುರುಳಿ ಅವರನ್ನು ಕರೆದುಕೊಂಡು ಬಂದು, ಬಸವನಹಳ್ಳಿ ಗ್ರಾಮದ ಲೀಸ್ ತೆಗೆದುಕೊಂಡ ಜಾಗದಲ್ಲಿ ಒಂದು ಶೆಡ್ ಮಾಡಿ ಅವರಿಗೆ ವಾಸ ಮಾಡಲು ಮಣಿಕಂಠ ಅವರು ಅನುವು ಕೊಟ್ಟಿದ್ದೆನು. ಶನಿವಾರ ಬೆಳಗ್ಗೆ 8.20 ಗಂಟೆಗೆ ನಾನು ಮನೆಯಲ್ಲಿದ್ದಾಗ ಬಸವನಹಳ್ಳಿ ಗ್ರಾಮದ ಆಟೋ ಚಾಲಕ ಏಸು ಎಂಬುವವರು ಫೋನ್ ಮಾಡಿ ಬೆಳಗ್ಗೆ ಬಸವನಳ್ಳಿ ಗ್ರಾಮದ ತೀರ್ಥ ತನಗೆ ಸಿಕ್ಕಿ, ನನ್ನ ಮನೆಯ ಹತ್ತಿರ ಇರುವ ಮುರುಳಿಗೆ ದೊಣ್ಣೆಯಿಂದ ಹೊಡೆದಿದ್ದು, ಆತನು ಉಸಿರಾಡುತ್ತಿರುವುದಾಗಿ ಹಾಗೂ ನನ್ನ ಹೆಂಡತಿ ಜ್ಯೋತಿಗೆ ರಾಡಿನಿಂದ ಕೈ ಕಾಲಿಗೆ ಹೊಡೆದಿರುವುದಾಗಿ ತಿಳಿಸಿದ್ದನು. ನೀನು ಬಂದು ನೋಡುವಂತೆ ಹೇಳಿದ್ದು, ತಕ್ಷಣ ದೂರುದಾರ ಮಣಿಕಂಠ ಎಂಬುವವರು ಬಸವನಹಳ್ಳಿಯ ಲೀಸ್ ತೆಗೆದುಕೊಂಡಿರುವ ಜಾಗದ ಹತ್ತಿರ ಬೆಳಗ್ಗೆ 8:45 ಗಂಟೆಗೆ ತಲುಪಿ ಶೆಡ್ ಒಳಗೆ ನೋಡಿದಾಗ ಮುರುಳಿ ಅಂಗಾತವಾಗಿ ಮಲಗಿದ್ದು, ಮೂಗಿನಿಂದ ರಕ್ತ ಬರುತ್ತಿತ್ತು.ಆತನನ್ನು ಅಲುಗಾಡಿಸಿದಾಗ ಉಸಿರಾಟ ಇಲ್ಲದೆ ಸಾವನ್ನಪಿದ್ದನು.
ನಂತರ ಲೀಸ್ ಪಡೆದ ಜಾಗದ ಪಕ್ಕದಲ್ಲಿರುವ ತೀರ್ಥ ರವರ ಮನೆಯ ಹತ್ತಿರ ಹೋಗಿ ನೋಡಿದಾಗ ಮನೆಯಲ್ಲಿ ತೀರ್ಥ ಇರಲಿಲ್ಲ.ಆತನ ಹೆಂಡತಿ ಜ್ಯೋತಿ ಮನೆಯಲ್ಲಿ ಮಲಗಿದ್ದು ಆಕೆಯನ್ನು ನೋಡಿದಾಗ ಎಡ ಕೈ ಮುರಿದಿತ್ತು. ಮತ್ತು ಎಡ ಕಾಲಿಗೆ ಸಹ ಪೆಟ್ಟಾಗಿತ್ತು.ಮಲಗ್ಗಿದಲ್ಲಿಂದ ಏಳಲು ಸಾಧ್ಯವಾಗುತ್ತಿರಲಿಲ್ಲ. ಆಕೆಯನ್ನು ಏನಾಯಿತು ಎಂದು ಕೇಳಿದಾಗ ಶುಕ್ರವಾರ ರಾತ್ರಿ 11.30 ಗಂಟೆಗೆ ನನ್ನ ಗಂಡ ನನ್ನೊಂದಿಗೆ ಗಲಾಟೆ ಮಾಡುತ್ತಿದ್ದ ಶಬ್ದ ಕೇಳಿ ಮುರುಳಿ ನಮ್ಮ ಮನೆಯ ಹತ್ತಿರ ಬಂದಿದ್ದನು. ಅವನನ್ನು ನೋಡಿ ನನ್ನ ಗಂಡ ತೀರ್ಥ ನಿಮ್ಮಿಬ್ಬರಿಗೆ ಅಕ್ರಮ ಸಂಬಂಧ ಇದೆ ಎಂದು ಹೇಳಿ ಏಕಾ ಏಕಿ ಮನೆಯ ಬಳಿ ಇದ್ದ ದೊಣ್ಣೆಯಿಂದ ಮುರಳಿ ರವರ ತಲೆಗೆ ಹೊಡೆದನು.ನಂತರ ನನಗೆ ಸಹ ಕೊಲ್ಲಲು ನನ್ನ ಎಡ ಕೈ ಮತ್ತು ಎಡ ಕಾಲಿಗೆ ಹೊಡೆದು ಗಾಯಪಡಿಸಿದ್ದ. ಎಡ ಕೈ ಮುರಿದಿರುವುದಾಗಿ ಹೇಳಿದ್ದು ನಂತರ ನಾನು ಆಂಬ್ಯುಲೆನ್ಸ್ ಗೆ ಫೋನ್ ಮಾಡಿ, ನಂತರ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಆದರೆ ನಂತರ ಅಕ್ಕಪಕ್ಕದವರಲ್ಲಿ ವಿಚಾರಿಸಿದಾಗ ಪಕ್ಕದ ನಿವಾಸಿ ಶೇಖರವರು, ಮುರಳಿಗೆ, ತೀರ್ಥನು ದೊಣ್ಣೆಯಿಂದ ಹೊಡೆದಿದನ್ನು ಮತ್ತು ಜ್ಯೋತಿಗೆ ಕಬ್ಬಿಣದ ರಾಡಿನಿಂದ ಎಡ ಕೈ ಮತ್ತು ಎಡ ಶಾಲೆಗೆ ಹೊಡೆದು ಗಾಯಪಡಿಸಿರುವುದನ್ನು ನೋಡಿರುವುದಾಗಿ ಮಣಿಕಂಠ ಅವರಿಗೆ ತಿಳಿಸಿದ್ದಾರೆ.
ಆದರಿಂದ ಜ್ಯೋತಿ ಯೊಂದಿಗೆ ಮುರುಳಿಗೆ ಅಕ್ರಮ ಸಂಬಂಧ ಇದೆ ಎಂದು ಅನುಮಾನಪಟ್ಟು ದೊಣೆಯಿಂದ ತಲೆ ಭಾಗಕ್ಕೆ ಹೊಡೆದು ಕೊಲೆ ಮಾಡಿ ಹಾಗೂ ಜ್ಯೋತಿಯನ್ನು ಕೊಲೆ ಮಾಡುವ ಉದ್ದೇಶದಿಂದ ಕಬ್ಬಿಣದ ರಾಡಿನಿಂದ ಎಡ ಕೈ ಮತ್ತು ಎಡ ಕಾಲಿಗೆ ಹೊಡೆದು ಗಾಯಪಡಿಸಿರುವ ತೀರ್ಥ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಣಿಕಂಠ ಅವರು ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.