ಬೆಂಗಳೂರು:ರಾಷ್ಟ್ರೀಯ ಕಾಂಗ್ರೆಸ್ ಒಬಿಸಿ ಘಟಕಗಳ ಸಭೆಯಲ್ಲಿ ಎ.ಎಸ್ ಪೊನ್ನಣ್ಣ ಭಾಗಿ

ಬೆಂಗಳೂರು:ರಾಷ್ಟ್ರೀಯ ಕಾಂಗ್ರೆಸ್ ಒಬಿಸಿ ಘಟಕಗಳ ಸಭೆಯಲ್ಲಿ ಎ.ಎಸ್ ಪೊನ್ನಣ್ಣ ಭಾಗಿ

ಬೆಂಗಳೂರು: ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಘಟಕದ ರಾಷ್ಟ್ರೀಯ ಸಲಹಾ ಸಮಿತಿಯ ಸಭೆಯನ್ನು ನಡೆಸಲಾಯಿತು.ಮುಖ್ಯಮಂತ್ರಿ ಸಿದ್ದರಾಮಯ್ಯರವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಮೊದಲ ಸಭೆಯಲ್ಲಿ, ಹಿಂದುಳಿದ ವರ್ಗಗಳ ಏಳಿಗೆಯ ಬಗ್ಗೆ ಹಲವು ಪ್ರಮುಖ ಚರ್ಚೆ ನಡೆಯಿತು. ಈ ಸಭೆಯಲ್ಲಿ ಎಐಸಿಸಿ ಒಬಿಸಿ ಘಟಕದ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಅನಿಲ್ ಜೈಹಿಂದ್, ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್, ಹಿರಿಯ ನಾಯಕರುಗಳಾದ ಅಶೋಕ್ ಗೆಲ್ಲಾಟ್, ಸಚಿವರಾದ ಎನ್.ಎಸ್ ಬೋಸ್ ರಾಜ್, ಡಾ. ಎಂ ವೀರಪ್ಪ ಮೊಯ್ಲಿ, ವಿ ನಾರಾಯಣಸ್ವಾಮಿ ಹಾಗೂ ಸಿಡಬ್ಲ್ಯೂಸಿ ಸದಸ್ಯರೊಂದಿಗೆ, ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.