ಮಡಿಕೇರಿ; ಕೋವಿಯಿಂದ ಗುಂಡು ಹೊಡೆದಕೊಂಡು ಆಮೆಮನೆ ದೇವಿಪ್ರಸಾದ್ ಆತ್ಮಹತ್ಯೆ
ಮಡಿಕೇರಿ:ಮಡಿಕೇರಿಯಲ್ಲಿ ಆಮೆಮನೆ ದೇವಿಪ್ರಸಾದ್ (43) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಹಿಂಬದಿ ಬಡಾವಣೆ ರಸ್ತೆಯಲ್ಲಿ ಕೋವಿಯಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಪನ್ಯಾಸಕಿ ಪತ್ನಿ ಕವಿತಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಗರ ಠಾಣೆ ಅಧಿಕಾರಿ ಅನ್ನಪೂರ್ಣ, ಡಿವೈಎಸ್ ಪಿ ಸೂರಜ್ ,ಸರ್ಕಲ್ ಇನ್ಸ್‌ಪೆಕ್ಟರ್ ರಾಜು ಭೇಟಿ ನೀಡಿ ,ಪರಿಶೀಲನೆ ನಡೆಸಿದ್ದಾರೆ.