ಪಾರಾಣೆ ಅಂಚೆ ಇಲಾಖೆಯಲ್ಲಿ ಪೋಸ್ಟರ್ ಮಾಸ್ಟರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಮಾದಪ್ಪ ಅವರಿಗೆ ಬೀಳ್ಕೊಡುಗೆ

Mar 5, 2026 - 23:42
 0  641
ಪಾರಾಣೆ ಅಂಚೆ ಇಲಾಖೆಯಲ್ಲಿ ಪೋಸ್ಟರ್ ಮಾಸ್ಟರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಮಾದಪ್ಪ ಅವರಿಗೆ ಬೀಳ್ಕೊಡುಗೆ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ಚೆಯ್ಯಂಡಾಣೆ ಅಂಚೆ ಇಲಾಖೆಯ ವತಿಯಿಂದ 42 ವರ್ಷಗಳ ಕಾಲ ಪಾರಾಣೆ ಅಂಚೆ ಕಚೇರಿಯಲ್ಲಿ ಅಂಚೆ ಪೇದೆ (ಪೋಸ್ಟ್ ಮ್ಯಾನ್)ಆಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಮಾದಪ್ಪ ಅವರನ್ನು ಚೆಯ್ಯಂಡಾಣೆ ಅಂಚೆ ಕಚೇರಿಯಲ್ಲಿ ಸನ್ಮಾನಿಸಿ,ಗೌರವಿಸಿ ಬೀಳ್ಕೊಡಲಾಯಿತು.

ಕಾರ್ಯಕ್ರಮದಲ್ಲಿ ಮಡಿಕೇರಿ ಅಂಚೆ ಇಲಾಖೆಯ ಅಂಚೆ ನಿರೀಕ್ಷಕರಾದ ಮಂಜುನಾಥ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ 42 ವರ್ಷಗಳ ಕಾಲ ಗ್ರಾಮಗಳಲ್ಲಿ ಗ್ರಾಮಸ್ಥರೊಂದಿಗೆ ಮಾದಪ್ಪಅವರು ಒಳ್ಳೆಯ ಭಾಂದವ್ಯ ಹೊಂದಿದ್ದಾರೆ,ಇತ್ತೀಚಿನ ದಿನಗಳಲ್ಲಿ ನೌಕರರು ಒಂದು ವರ್ಷ ಮಾತ್ರ ಕೆಲಸ ಮಾಡಿ ನಂತರ ಕೆಲಸ ಕಳೆದುಕೊಳ್ಳುತ್ತಿದ್ದಾರೆ.

 ಈ ಸನ್ನಿವೇಶದಲ್ಲಿ 42 ವರ್ಷ ಉತ್ತಮವಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದೀರಾ ಇದು ತುಂಬಾ ಸಂತೋಷದ ವಿಷಯ ಎಂದು ಮಾದಪ್ಪ ಅವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು. ಚೆಯ್ಯಂಡಾಣೆ ಅಂಚೆ ಕಚೇರಿಯ ಉಸ್ತುವಾರಿ (ಪೋಸ್ಟ್ ಮಾಸ್ಟರ್ )ಉಮೇಶ್ ರವರ ಅಧ್ಯಕ್ಷತೆ ವಹಿಸಿ ಮಾತನಾಡಿ ಇಲಾಖೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಮಾದಪ್ಪ ಅವರ ಸೇವೆಯನ್ನು ಸ್ಮರಿಸಿದರು. ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.

 ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾದಪ್ಪ ಹಳೆಯ ಕಾಲದ ನೌಕರಿ ಈಗಿನ ಕಾಲದ ನೌಕರಿ ಬಹಳ ವ್ಯತ್ಯಾಸವಿದೆ. ಅಂದಿನ ಕಾಲದಲ್ಲಿ ಪತ್ರಗಳು ಹೆಚ್ಚು ಹೆಚ್ಚಾಗಿ ಬರುತ್ತಿದ್ದವು ಸಮಯಕ್ಕೆ ಸರಿಯಾಗಿ ಕೆಲಸ ನಿರ್ವಹಿಸಿ ಅದನ್ನು ತಲುಪಿಸುವ ಅವಶ್ಯಕತೆ ಇತ್ತು ಎಂದು ಹಳೆಯ ಕಾಲದ ನೆನಪುಗಳನ್ನು ವಿವರಿಸಿದ ಮಾದಪ್ಪ ಇಲಾಖೆಗೆ ಯಾವುದೇ ಕಪ್ಪು ಚುಕ್ಕೆ ಬಾರದ ರೀತಿಯಲ್ಲಿ ಉತ್ತಮವಾಗಿ 42 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ ಎಂದರು.

 ಇಲಾಖೆಯ ಸಿಬ್ಬಂದಿಗಳಾದ ಉತ್ತಪ್ಪ (ಮಿಟ್ಟು),ರಾಘವೇಂದ್ರ, ಹರ್ಷ ಮಾತನಾಡಿ ಮಾದಪ್ಪ ಅವರ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ನಿವೃತ್ತಿ ಜೀವನ ಸುಖಕರ ವಾಗಿರಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭ ಮಾದಪ್ಪ ಅವರ ಪತ್ನಿ ರಾಧಾಮಣಿ ಹಾಗೂ ಮಕ್ಕಳು,ಅಂಚೆ ಇಲಾಖೆಯ ಐಪಿ ಸಹಾಯಕ ಅಧಿಕಾರಿ ಹರೀಶ್,ಚೆಯ್ಯಂಡಾಣೆ ಅಂಚೆ ಕಚೇರಿ ಸಿಬ್ಬಂದಿಗಳು, ಚೆಯ್ಯಂಡಾಣೆ ವ್ಯಾಪ್ತಿಗೆ ಒಳಪಟ್ಟ ಅಂಚೆ ಕಚೇರಿಯ ಸಿಬ್ಬಂದಿಗಳು ಮತ್ತಿತರರು ಇದ್ದರು. ಹರೀಶ್ ಸ್ವಾಗತಿಸಿ ಸರ್ವರನ್ನು ವಂದಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0